Log In
BREAKING NEWS >
ಉಡುಪಿ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಪರಮೇಶ್ವರ್ ಅನಂತ್ ಹೆಗ್ಡೆ ನೇಮಕ...

ಪರ್ಕಳ:ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯಿಂದ ನಗರಸಭೆಯ ರಸ್ತೆ ಬಂದ್ -ಸ್ಥಳೀಯರಿ೦ದ ಭಾರೀ ಆಕ್ರೋಶ!-ಕಾಮಗಾರಿಗೆ ಬ್ರೇಕ್

ಉಡುಪಿ: ಉಡುಪಿ ನಗರಸಭೆ ವ್ಯಾಪ್ತಿಯಲ್ಲಿನ ಪರ್ಕಳದ ಕೆಳಪರ್ಕಳದಲ್ಲಿ. ರಾಷ್ಟ್ರೀಯ ಹೆದ್ದಾರಿಯ ರಸ್ತೆ ಕಾಮಗಾರಿಯು ನೇರವಾಗಿ ಮಾಡುವ ಉದ್ದೇಶದಿಂದ ಕೆಳಪರ್ಕಳದಲ್ಲಿ ಮಾತ್ರ ವಿನ್ಯಾಸ ಬದಲಾವಣೆ ಮಾಡಿರುವುದರಿಂದ ಇದೀಗ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೇಚೀಗೆ (ಇಕ್ಕಟ್ಟಿಗೆ)ಸಿಲುಕಿದೆ !! ಇದೀಗ ನ್ಯಾಯಾಲಯದಲ್ಲಿ ಹೆಚ್ಚಿನವರ ತಡೆಯಾಜ್ಞೆ ಇದ್ದರೂ ಈ ಭಾಗದಲ್ಲಿ ಮಣ್ಣು ಹಾಕುವ ಕಾರ್ಯ ಬರದಿಂದ ಸಾಗಿದೆ. ಇದೀಗ ಗಣೇಶ ಶೆಣೈಯವರ ಮನೆಯ ಮುಂದೆಸಾಗಿ ಬಿಎಸ್ಎನ್ಎಲ್ ಕಚೇರಿ ಸಂಪರ್ಕಿಸುವ ನಗರ ಸಭೆಯ ರಸ್ತೆಯಾದ ಈ ಪ್ರಮುಖ ರಸ್ತೆ ಇದ್ದರೂ ಮಣ್ಣು ಹಾಕುವ ಬರದಲ್ಲಿ ರಸ್ತೆಯನ್ನಾ ಸಂಪೂರ್ಣವಾಗಿ ಬಂದು ಮಾಡಲಾಗಿದೆ.

ಇದರಿಂದ ಸ್ಥಳೀಯರಿಗೆ ತೊಂದರೆಯಾಗಿದ್ದು ಇಲ್ಲಿ ಸೂಕ್ತವಾಗಿ ಅಂಡರ್ ಪಾಸ್ ಅಳವಡಿಸಬೇಕು. ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಕಾಮಗಾರಿಯಾಗುವ ತನಕ ಸಂಪರ್ಕ ಕಲ್ಪಿಸುವ ರಸ್ತೆ ಇರಬೇಕು.ಇಲ್ಲಿ ಸುಮಾರು 50ಕ್ಕೂ ಹೆಚ್ಚು ಮನೆಗಳಿವೆ.. ಸ್ಥಳೀಯವಾಗಿ ಮನೆ ಸಂಪರ್ಕಿಸಬೇಕಾದರೆ ಅವರು ಸುತ್ತುವರಿದು ಬರುವಂತ ಪರಿಸ್ಥಿತಿ ಉದ್ಭವಿಸಿದೆ .

ನಂತರ ಇವರು ಕಾಮಗಾರಿ ಮುಂದುವರಿಸಬೇಕು ಸ್ಥಳೀಯ ರಸ್ತೆಯನ್ನು ಏಕಾಏಕಿಯಾಗಿ ರಸ್ತೆಬಂದು ಮಾಡಿ ಸಾರ್ವಜನಿಕರಿಗೆ ತೊಂದರೆಮಾಡಿದ್ದಾರೆ. ನಗರಸಭೆಯ ಅಧ್ಯಕ್ಷೆ ಶ್ರೀಮತಿ ಸುಮಿತ್ರ ನಾಯಕ್ ಭೇಟಿ ನೀಡಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು ತಿಳಿಸಿದ್ದಾರೆ, ಉಳಿದ ಸಂಬಂಧಪಟ್ಟ ಪ್ರಮುಖ ಜನನಾಯಕರು ಯಾರು ಸ್ಥಳಕ್ಕೆ ಭೇಟಿ ನೀಡಲಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

No Comments

Leave A Comment