Log In
BREAKING NEWS >
ಮಾರ್ಚ್ 8ರ೦ದು ಮಹಾಶಿವರಾತ್ರೆ-ಎಲ್ಲಾ ಈಶ್ವರ ದೇವಸ್ಥಾನಗಳಲ್ಲಿ ಭಜನಾ ಸ೦ಕೀರ್ತನೆ ಜರಗಲಿದೆ.....

ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನ:ಸಾಧಕರಿಗೆ ಸನ್ಮಾನ

ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿನ 94ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವದ ಅ೦ಗವಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆಯನ್ನು ಗೈದ 3ಮ೦ದಿ ಜಿ ಎಸ್ ಬಿ ಸಮಾಜ ಬಾ೦ಧವರನ್ನು ಮ೦ಗಲೋತ್ಸವದ ಸ೦ದರ್ಭದಲ್ಲಿ ಅಭಿನ೦ದಿಸಿ ಸನ್ಮಾನಿಸಲಾಯಿತು.

ಪಿಎಚ್ ಡಿ ಪದವಿಯಲ್ಲಿ ಅತ್ಯುನ್ನತ ಸ್ಥಾನದಲ್ಲಿ ಉತ್ತೀರ್ಣರಾಗಿ ಚಿನ್ನದ ಪದಕವನ್ನು ಗಳಿಸಿರುವ ಕೆ.ಅನ೦ತಪಧ್ಮನಾಭ ಕಿಣಿ ಮತ್ತು ಅಹಲ್ಯಕಿಣಿಯವರ ಸುಪುತ್ರರಾಗಿರುವ ಕೆ.ರಾಮಕೃಷ್ಣ ಕಿಣಿ, ಅ೦ಚೆಚೀಟಿ ಹಾಗೂ ನಾಣ್ಯಸ೦ಗ್ರಾಹಕರಾದ ಕೆ.ಲಕ್ಷ್ಮೀನಾರಾಯಣ ನಾಯಕ್ ಮತ್ತು ಪತ್ರಿಕಾ ರ೦ಗದಲ್ಲಿ ಉತ್ತಮ ಸೇವೆಯನ್ನು ಸಲ್ಲಿಸುತ್ತಿರುವ ಟಿ.ಜಯಪ್ರಕಾಶ್ ಕಿಣಿಯವರು ಈ ಸ೦ದರ್ಭದಲ್ಲಿ ಸನ್ಮಾನಿಸಲಾಯಿತು.

ಭಜನಾ ಸಪ್ತಾಹ ಮಹೋತ್ಸವದ ಸಮಿತಿಯ ಅಧ್ಯಕ್ಷರಾದ ಕೆ.ತುಳಸಿದಾಸ್ ಕಿಣಿ, ಉಪಾಧ್ಯಕ್ಷರಾದ ಕೆ. ಸೀತಾರಾಮ ಕಿಣಿ, ಕೋಶಾಧಿಕಾರಿ ಕೆ.ಶ್ರೀನಿವಾಸ ಮಲ್ಯ, ಕಾರ್ಯದರ್ಶಿ ರಮಾನಾಥ ವಿ.ಶಾನುಭಾಗ್, ಸದಸ್ಯರಾದ ಟಿ.ದತ್ತಾತ್ರೇಯ ಕಿಣಿ, ಕೆ.ವಿದ್ಯಾಧರ ಕಿಣಿ, ಟಿ.ಶಿವಾನ೦ದ ಕಿಣಿ, ಕೆ.ಲಕ್ಷ್ಮೀಶ್ ಭಟ್, ಯು.ಪ್ರಕಾಶ್ ಕಾಮತ್ಅಮ್ಮು೦ಜೆ ಮ೦ಜುನಾಥ ನಾಯಕ್ ದೇವಳದ ಆಡಳಿತ ಮೊಕ್ತೇಸರಾದ ಕೆ.ಅನ೦ತಪದ್ಮನಾಭ ಕಿಣಿ, ಟ್ರಸ್ಟಿ ಅಮ್ಮು೦ಜೆ ಯಶವ೦ತ ನಾಯಕ್ ಮೊದಲಾದವರು ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು.

No Comments

Leave A Comment