Log In
BREAKING NEWS >
ಕರಾವಳಿಯಲ್ಲಿ ಹೆಚ್ಚಿದ ಬಿಸಿಲಿನ ತಾಪಮಾನ-ಸಾವು ಸ೦ಭವಿಸುವ ಸಾಧ್ಯತೆ-ಎಚ್ಚರ ಬಿಸಿಲಿನಲ್ಲಿ ಹೊರಗೆ ಬರಲೇ ಬೇಡಿ....

ಕು೦ಜಿಬೆಟ್ಟು ಕರ್ಣಾಟಕ ಬ್ಯಾ೦ಕ್ ಶಾಖೆಗೆ 45ರ ಸ೦ಭ್ರಮಾಚರಣೆ…

ಉಡುಪಿಯ ಕು೦ಜಿಬೆಟ್ಟುವಿನಲ್ಲಿ ಕರ್ಣಾಟಕ ಬ್ಯಾ೦ಕ್ ಆರ೦ಭಗೊ೦ಡು ೪೫ನೇ ವರುಷಕ್ಕೆ ಪಾದಾರ್ಪಣೆ ಗೈದಿರುವ ಈ ಶುಭ ಸ೦ದರ್ಭದಲ್ಲಿ ಡಿ.1ರ೦ದು ಕು೦ಜಿಬೆಟ್ಟುವಿನ ಕರ್ಣಾಟಕ ಬ್ಯಾ೦ಕ್ ಶಾಖೆಯಲ್ಲಿ ಸ೦ಭ್ರಮಾಚರಣೆಯನ್ನು ನೆರವೇರಿಸಲಾಯಿತು.
ಉಡುಪಿ ಕರ್ಣಾಟಕ ಬ್ಯಾ೦ಕಿನ ಪ್ರಾದೇಶಿಕ ಕಛೇರಿಯ ಎ.ಜಿ.ಎ೦ ಆಗಿರುವ ಬಿ.ರಾಜಗೋಪಲ್ ಭಟ್ ರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ಬ್ಯಾ೦ಕಿನ ಹಿರಿಯ ಗ್ರಾಹಕರಾದ ಡಾ.ಪಿ.ಎಲ್.ಎನ್ ರಾವ್ ರವರು ದೀಪಪ್ರಜ್ವಲಿಸುವುದರೊ೦ದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು.

ಈ ಸ೦ದರ್ಭದಲ್ಲಿ ವರ್ಷಾಚರಣೆಯ ಪ್ರಯುಕ್ತ ಕೇಕ್ ಕತ್ತರಿಸುವುದರೊ೦ದಿಗೆ ಸ೦ಭ್ರಮಾಚರಣೆಯನ್ನು ಹಮ್ಮಿಕೊಳ್ಳಲಾಯಿತು.ಹಿರಿಯ ಗ್ರಾಹಕರನ್ನು ಈ ಸ೦ದರ್ಭದಲ್ಲಿ ಅಭಿನ೦ದಿಸಲಾಯಿತು.

ಸಮಾರ೦ಭದಲ್ಲಿ ಉಡುಪಿ ವಲಯ ಚೀಫ್ ಮ್ಯಾನೇಜರ್ ಅರುಣ್ ಟಿ.ಆರ್,ವಿಶ್ವನಾಥ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಾಖಾ ಪ್ರಬಂಧಕರಾದ ಶ್ರೀ ಹರ್ಷ ರವರು ಬಂದ ಅತಿಥಿಗಳನ್ನು ಸ್ವಾಗತಿಸಿದರು.ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಭಾಗ್ಯಶ್ರೀ ಅವರು ನಿರ್ವಹಿಸಿ,ವ೦ದಿಸಿದರು.

ಉಪಸ್ಥಿತರಿದ್ದ ಗ್ರಾಹಕರು ಶಾಖೆಯ ಸಿಬ್ಬಂದಿ ವರ್ಗದವರಾದ ಪ್ರಶಾಂತ್, ಗಣೇಶ್, ಸುಪ್ರೀತ್, ವಿಜೇತ, ನಿರ್ಮಲ, ಆಶಾ,ರಮೇಶ್ ರವರ ಸೇವೆಯನ್ನು ಶ್ಲಾಘಿಸಿದರು.

ಶಾಖಾ ಪ್ರಬಂಧಕರಾದ ಶ್ರೀ ಹರ್ಷ ರವರು ಬಂದ ಅತಿಥಿಗಳನ್ನು ಸ್ವಾಗತಿಸಿದರು.ಗಣೇಶ್ ರವರು ಪ್ರಾರ್ಥನೆಯನ್ನು ಗೈದರು, ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಭಾಗ್ಯಶ್ರೀ ಅವರು ನಿರ್ವಹಿಸಿ,ವ೦ದಿಸಿದರು.

No Comments

Leave A Comment