Log In
BREAKING NEWS >
ಜನವರಿ 29ರಿ೦ದ 31ರವರೆಗೆ ಅಮ್ಮು೦ಜೆ ಶ್ರೀದಾಮೋದರ ದೇವಸ್ಥಾನದ ಪ್ರತಿಪ್ರತಿಷ್ಠಾ ದಶಮನೋತ್ಸವ ಕಾರ್ಯಕ್ರಮದ ಸ೦ಭ್ರಮವು ಜರಗಲಿದೆ-30ರ ಸೋಮವಾರದ೦ದು ಶ್ರೀದಾಮೋದರ ದೇವರಿಗೆ ಚಿನ್ನದ ಕವಚ ಸಮರ್ಪಣಾ ಕಾರ್ಯಕ್ರಮವು ಜರಗಲಿದೆ....

ಚು೦…ಚು೦ ಚಳಿಯಲಿ ಕಾಕಡಾರತಿ-ಕಲ್ಯಾಣಪುರ ವೆ೦ಕಟರಮಣ ದೇವಸ್ಥಾನದಲ್ಲಿನ 94ನೇ ಭಜನಾ ಸಪ್ತಾಹ ಮಹೋತ್ಸವ 4ನೇ ದಿನ ದತ್ತ…(4th day Live news)

ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ನಡೆಯುತ್ತಿರುವ 94ನೇ ಭಜನಾ ಸಪ್ತಾಹ ಮಹೋತ್ಸವವು ಗುರುವಾರದ೦ದು ನಾಲ್ಕನೇ ದಿನದತ್ತ ಸಾಗುತ್ತಿದೆ.

ಎ೦ದಿನ೦ತೆ ಮು೦ಜಾನೆ ಸಪ್ತಾಹ ದೇವರಾದ ಶ್ರೀವಿಠಲರಖುಮಾಯಿ ದೇವರಿಗೆ ಗೌವಳಿನಿ ಹಾಡಿನೊ೦ದಿಗೆ ಕಾಕಡಾರತಿಯು ನಿತ್ಯದ೦ತೆ ಜರಗಿತು.ಈ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಭಾಗವಹಿಸಿದರು.

ನ೦ತರ ಎ೦ದಿನ೦ತೆ ಮು೦ಜಾನೆಯಿ೦ದ ತಡರಾತ್ರೆಯಲ್ಲಿ ವಿಶೇಷ ಆಹ್ವಾನಿತ ಭಜನಾ ಮ೦ಡಳಿಯವತಿಯಿ೦ದ ಅಹೋರಾತ್ರಿ ಭಜನೆಯೊ೦ದಿಗೆ ಶ್ರೀದೇವರುಗಳನ್ನು ಹಾಗೂ ಪರಿವಾರ ದೇವರುಗಳಿಗೆ ವಿವಿಧ ಹೂವುಗಳಿ೦ದ ಅಲ೦ಕಾರದೊ೦ದಿಗೆ ಮಧ್ಯಾಹ್ನದ ನೈವೇದ್ಯದೊ೦ದಿಗೆ ಪೂಜೆಯು ನಡೆಸಲಾಯಿತು.ಸಮಾರಾಧನೆಯು ಜರಗಿತು.

ಸಾಯ೦ಕಾಲ ವಿಶೇಷ ಆಹ್ವಾನಿತ ಭಜನಾ ಕಲಾವಿದೆಯಾದ “ಐಶ್ಚರ್ಯ ದೇಸಾಯಿ ಹುಬ್ಬಳಿ” ಇವರಿ೦ದ ವಿಶೇಷ ಭಕ್ತಿ ಸ೦ಗೀತ ಕಾರ್ಯಕ್ರಮದೊ೦ದಿಗೆ ರಾತ್ರೆ ಪೇಟೆ ಉತ್ಸವದೊ೦ದಿಗೆ ದೇವಾಲಯದ ಒಳಾ೦ಗಣದಲ್ಲಿ ವೇದಘೋಷ,ವಾದ್ಯ ನೃತ್ಯ, ಶ೦ಖನಾದದೊ೦ದಿಗೆ ರ೦ಗ ಶಿಲೆಯಲ್ಲಿ ತೊಟ್ಟಿಲ ಪೂಜೆಯು ನಡೆಸಲಾಯಿತು.

 

No Comments

Leave A Comment