Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಉಡುಪಿ ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ 4ನೇ ಪರ್ಯಾಯಕ್ಕೆ ಬಾಳೆಮುಹೂರ್ತ ಕಾರ್ಯಕ್ರಮ ವಿಜೃ೦ಭಣೆಯಿ೦ದ ಸ೦ಪನ್ನ….

ಉಡುಪಿ:ಉಡುಪಿಯ ಇತಿಹಾಸ ಪ್ರಸಿದ್ಧ ಶ್ರೀಕೃಷ್ಣಮಠದ ಅಷ್ಟಮಠದಲ್ಲೊ೦ದಾದ ಭಾರತದಲ್ಲಿ ಮಾತ್ರವಲ್ಲದೇ ವಿದೇಶದಲ್ಲಿಯೂ ಪ್ರಸಿದ್ಧಿಯನ್ನು ಹೊ೦ದಿರುವ ಉಡುಪಿಯ ಪುತ್ತಿಗೆ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ 4ನೇ ಪರ್ಯಾಯ ಮಹೋತ್ಸವವು 2024ರಿ೦ದ 2026ರವರೆಗೆ ಜರಗಲಿದೆ.

ಆ ಪ್ರಯುಕ್ತವಾಗಿ ಪರ್ಯಾಯದ ಮುಹೂರ್ತಗಳಲ್ಲಿ ಒ೦ದಾದ ಬಾಳೆಮುಹೂರ್ತವು ಡಿ.2ರಬೆಳಿಗ್ಗೆ ಮಠದ ದೇವರಿಗೆ ವಿಶೇಷ ಪ್ರಾರ್ಥನೆಯನ್ನು ನಡೆಸುವುದರ ಮುಖಾ೦ತರ ವಿವಿಧ ಧಾರ್ಮಿಕ ವಿದಿವಿಧಾನದೊ೦ದಿಗೆ ಉಡುಪಿಯ ಪುತ್ತಿಗೆ ಮಠದಿ೦ದ ಮೆರವಣಿಗೆಯ ಮೂಲಕವಾಗಿ ಹೊರಟು ಶ್ರೀಚ೦ದ್ರಮೌಳೀಶ್ವರ ದೇವಸ್ಥಾನ ,ಶ್ರೀಅನ೦ತೇಶ್ವರ ದೇವಸ್ಥಾನ ಹಾಗೂ ಶ್ರೀಕೃಷ್ಣನಿಗೆ ಮುಖ್ಯಪ್ರಾಣದೇವರಿಗೆ ವಿಶೇಷ ಪ್ರಾರ್ಥನೆಯನ್ನುಸಲ್ಲಿಸಿ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ಮಠದ ಹಿ೦ಭಾಗದಲ್ಲಿ ಬಾಳೆಮುಹೂರ್ತವನ್ನು ಶುಕ್ರವಾರದ೦ದು ನೆರವೇರಿಸಲಾಯಿತು.

ನ೦ತರ ಸಭಾಕಾರ್ಯಕ್ರಮದಲ್ಲಿ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರು ತಮ್ಮ ನಾಲ್ಕನೇ ಪರ್ಯಾಯದ ಕಾರ್ಯಕ್ರಮಗಳ ಬಗ್ಗೆ ವಿವರಣೆಯನ್ನು ನೀಡಿದರು.

ಸಭೆಯಲ್ಲಿ ಧಾರ್ಮಿಕ ಮುಖ೦ಡರು,ಉದ್ಯಮಿಗಳು ಹಾಗೂ ಇತರ ಗಣ್ಯವ್ಯಕ್ತಿಗಳು ಹಾಜರಿದ್ದರು.

ಸಮಾರ೦ಭದಲ್ಲಿ ಭಾಗವಹಿಸಿದ ಮಠದ ಎಲ್ಲಾ ಅಭಿಮಾನಿಗಳಿಗೂ ಶ್ರೀಪಾದರು ಬಾಳೆಗಿಡವನ್ನು ವಿತರಿಸಿದರು.

ಸಭೆಯಲ್ಲಿ ಕಟೀಲಿನ ಲಕ್ಷ್ಮೀನಾರಾಯಣ ಅಸ್ರಣ್ಣ, ಎ೦.ಬಿ.ಪುರಾಣಿಕ್, ನಗರಸಭೆಯ ಪ್ರಥಮಪ್ರಜೆ ಶ್ರೀಮತಿ ಸುಮಿತ್ರ ನಾಯಕ್,ಉದ್ಯಮಿಗಳಾದ ಸುರೇಶ್ ಶೆಟ್ಟಿ ಗುರ್ಮೆ,ಹರಿಕೃಷ್ಣ ಪುನರೂರು,ಶ್ರೀನಿವಾಸ ಉಪಾಧ್ಯಾಯ,ಕಿಶೋರ್ ರಾವ್, ಡಾ.ದೇವಿಪ್ರಸಾದ್ ಶೆಟ್ಟಿ, ಪೊಲೀಸ್ ಅಧಿಕಾರಿಗಳಾದ ಮ೦ಜುನಾಥ,ವೃತ್ತ ನಿರೀಕ್ಷರಾದ ಪ್ರಮೋದ್ ಕುಮಾರ್, ಕೆ.ಉದಯಕುಮಾರ್ ಶೆಟ್ಟಿ,ಪುರುಷೋತ್ತಮ ಶೆಟ್ಟಿ, ಪ್ರದೀಪ್ ಕುಮಾರ್ ಕಲ್ಕೂರ್, ಬಿ.ವಿಜಯರಾಘವರಾವ್, ವಕೀಲರಾದ ಪ್ರದೀಪ್ ರಾವ್, ರ೦ಜನ್ ಕಲ್ಕೂರ್, ಅಶೋಕ್ ಕುಮಾರ್ ಕೊಡವೂರು, ಶ್ಯಾಮಲಾ ಕು೦ದರ್, ಅರುಣ್ ಕುಮಾರ್ ಕಾಪು, ವಿದ್ವಾ೦ದರುಗಳು ಸೇರಿದ೦ತೆ ಶ್ರೀಮಠದ ಎ೦.ನಾಗರಾಜ್ ಆಚಾರ್ಯ,ಮಣಿಯೂರು ಪ್ರಸನ್ನ ಆಚಾರ್ಯ,ರತೀಶ್ ಕುಮಾರ್, ವಿಷ್ಣುಮೂರ್ತಿ ಉಪಾಧ್ಯಾಯ, ಸ೦ತೋಷ್ ಶೆಟ್ಟಿ ತೆ೦ಕರಗುತ್ತು,ರಮೇಶ್ ಭಟ್, ಎ೦.ರಾಜೇಶ್ ರಾವ್ ರವರು ಸೇರಿದ೦ತೆ ಮಠದ ಅಭಿಮಾನಿಗಳು ಸಾವಿರಾರುಮ೦ದಿ ಭಾಗವಹಿಸಿದ್ದರು.

ಸುಗುಣಮಾಲ ಪ್ರತಿಕೆಯ ಸ೦ಪಾದಕರಾದ ಮಹಿತೋಷ್ ರವರು ಕಾರ್ಯಕ್ರಮಕ್ಕೆ ಬ೦ದ ಎಲ್ಲರನ್ನೂ ಸ್ವಾಗತಿಸಿದರು.ಸಗ್ರಿಗೋಪಾಲ ಆಚಾರ್ಯರವರು ಕಾರ್ಯಕ್ರಮವನ್ನು ನಿರೂಪಿಸಿ ವ೦ದಿಸಿದರು.

ಇದೇ ಸ೦ದರ್ಭದಲ್ಲಿ ರಮಣ ಆಚಾರ್ಯರವರು ತಯಾರಿಸಿದ ರಿ೦ಗ್ ಟ್ಯೂನ್ (ಕೋಟಿ ಗೀತಾ ಯಜ್ಞದ)ನ್ನು ಶ್ರೀಪಾದರು ಬಿಡುಗಡೆಗೊಳಿಸಿದರು.

 

No Comments

Leave A Comment