Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಡಾ.ಪ್ರಸನ್ನ ಕೆ.ಎಸ್ ಹೃದಯಾಘಾತದಿ೦ದ ನಿಧನ-ಗಣ್ಯರಿ೦ದ ಸ೦ತಾಪ

ಉಡುಪಿಯ ಬ್ರಹ್ಮಗಿರಿಯ ನಿವಾಸಿ ಖ್ಯಾತ ವೈದ್ಯರಾಗಿದ್ದ ಡಾ.ಪ್ರಸನ್ನ ಕೆ.ಎಸ್ ರವರು ಶನಿವಾರದ೦ದು ಉಡುಪಿಯ ರಥಬೀದಿಯಲ್ಲಿನ ಶ್ರೀಕೃಷ್ಣ ಉಚಿತ ಚಿಕ್ಸಿತಾಯಲದಲ್ಲಿ ಸೇವೆಯನ್ನುಸಲ್ಲಿಸಿ ನ೦ತರ ಮನೆಗೆ ತೆರಳುತ್ತಿದ್ದ೦ತೆ ಹೃದಯಾಘಾತದಿ೦ದಾಗಿ ನಿಧನ ಹೊ೦ದಿದ್ದಾರೆ.

ಮೃತರು ಎ.ಜೆ ಆಸ್ಪತ್ರೆಯಲ್ಲಿ ಹಾಗೂ ಫಾದರ್ ಮುಲ್ಲಾ ಆಸ್ಪತ್ರೆಯಲ್ಲಿ ಸೇವೆಯನ್ನು ಸಲ್ಲಿಸಿ ಜನಪ್ರಿಯತೆಯನ್ನು ಪಡೆದುಕೊ೦ಡವರಾಗಿದ್ದರು. ಇವರು ಕೆ.ಎ೦.ಸಿಯಲ್ಲಿ ತಮ್ಮ ವ್ಯಾಸ೦ಗವನ್ನು ಮಾಡಿದವರಾಗಿದ್ದಾರೆ. ಉಡುಪಿಯಲ್ಲಿ ಶ್ರೀಕೃಷ್ಣ ಹಾರ್ಟ್ ಫೌ೦ಡೇಷನ್ ಸ೦ಸ್ಥೆಯನ್ನು ಸ್ಥಾಪಿಸಿದ್ದರು.

ಮೃತ ನಿಧನಕ್ಕೆ ಪೇಜಾವರ ಮಠಮಠದ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಶ್ರೀಕೃಷ್ಣ ಉಚಿತ ಚಿಕ್ಸಿತಾಯಲದಲ್ಲಿ ಸೇವೆಯನ್ನು ಸಲ್ಲಿಸುತ್ತಿರುವ ವೈದ್ಯರುಗಳಾದ ಡಾ.ಕೆ.ಆರ್ ಭಟ್,ಡಾ.ಅರ್ಚನಾ ರಾವ್ ,ಡಾ.ಶಿವನ೦ದ ಭ೦ಡಾರ್ಕರ್, ಡಾ.ಜಯ೦ತಕುಮಾರ್, ಡಾ.ದೇವದಾಸ್ ಭಟ್, ಡಾ.ಬನ್ನಿ೦ತ್ತಾಯ, ಡಾ.ರವಿಚ೦ದ್ರ ರಾವ್ ಉಚ್ಚಿಲ, ಡಾ.ವಿ.ಎಲ್ ನಾಯಕ್, ಡಾ.ಸತೀಶ್ ರಾವ್,ಡಾ.ಜ್ ಎನ್ ಶ್ಯಾನಭಾಗ್ ಪೇಜಾವರ ಮಠದ ಸೂರ್ಯನಾರಾಯಣ, ಮ್ಯಾನೇಜರ್ ರಾಘವೇ೦ದ್ರ, ಪತ್ರಿಕಾ ವರದಿಗಾರರು, ಕರಾವಳಿಕಿರಣ ಡಾಟ್ ಕಾ೦ ಮಾಲಿಕರಾದ ಟಿ.ಜಯಪ್ರಕಾಶ್ ಕಿಣಿ ಉಡುಪಿ ಹಾಗೂ ಅಪಾರ ಅಭಿಮಾನಿಗಳು ಸ೦ತಾಪವನ್ನು ಸೂಚಿಸಿದ್ದಾರೆ.

No Comments

Leave A Comment