
ಗುಜರಾತ್: ಚುನಾವಣೆ ಕರ್ತವ್ಯದಲ್ಲಿದ್ದ 2 ಸಹೋದ್ಯೋಗಿಗಳನ್ನು ಗುಂಡಿಕ್ಕಿ ಹತ್ಯೆ ಮಾಡಿದ ಅರೆಸೇನಾಪಡೆ ಯೊಧ
ಅಹ್ಮದಾಬಾದ್: ಇಬ್ಬರು ಅರೆಸೇನಾ ಪಡೆ ಯೋಧರು ತಮ್ಮ ಸಹೋದ್ಯೋಗಿಯ ಗುಂಡೇಟಿಗೆ ಬಲಿಯಾಗಿರುವ ಘಟನೆ ಗುಜರಾತ್ ನಲ್ಲಿ ನಡೆದಿದೆ.
ಪೋರ್ಬಂದರ್ ನಲ್ಲಿ ಚುನಾವಣೆ ಕರ್ತವ್ಯದಲ್ಲಿದ್ದ ಓರ್ವ ಅರೆಸೇನಾ ಪಡೆ ಯೋಧ ಎಕೆ-56 ನಿಂದ ತನ್ನ ಇಬ್ಬರು ಸಹೋದ್ಯೋಗಿಗಳನ್ನು ಹತ್ಯೆ ಮಾಡಿದ್ದಾನೆ. ಘಟನೆಯಲ್ಲಿ ಇನ್ನಿಬ್ಬರು ಯೋಧರಿಗೆ ತೀವ್ರ ಗಾಯಗಳಾಗಿವೆ.
ಯೋಧರ ನಡುವೆ ಘರ್ಷಣೆ ಉಂಟಾದಾಗ ಅವರು ಕರ್ತವ್ಯದಲ್ಲಿರಲಿಲ್ಲ. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಯೋಧ ತನ್ನ ಸಹೋದ್ಯೋಗಿಗಳ ಮೇಲೆ ಎಕೆ-56 ರೈಫಲ್ ನಿಂದ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ.
ಘರ್ಷಣೆಯಲ್ಲಿ ತೊಡಗಿದ್ದ ಯೋಧರು ಮಣಿಪುರದ ಭಾರತೀಯ ಮೀಸಲು ಬೆಟಾಲಿಯನ್ (ಐಆರ್ ಬಿ)ಭಾಗವಾಗಿದ್ದು, ಗುಜರಾತ್ ಗೆ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿದ್ದರು.