Log In
BREAKING NEWS >
ಫೆ.14 ಮತ್ತು 15ರ೦ದು ಉಡುಪಿಯ ಪಣಿಯಾಡಿಯ ಶ್ರೀಅನ೦ತಾಸನ ಶ್ರೀಲಕ್ಷ್ಮೀ ಅನ೦ತಪದ್ಮನಾಭ ದೇವಸ್ಥಾನದ ಧ್ವಜಸ್ತ೦ಭದ ಸ್ಥಾಪನಾ ಕಾರ್ಯಕ್ರಮವು ನಡೆಯಲಿದೆ.....

ಹೊನ್ನಾಳಿ ಬಳಿ ಹಳ್ಳಕ್ಕೆ ಬಿದ್ದ ಕಾರು: ಎಎಸ್​ಐ ಪುತ್ರನ ಸಾವು

ಹೊನ್ನಾಳಿ(ದಾವಣಗೆರೆ): ಕೆಲ ವಾರಗಳ ಹಿಂದೆ ಹೊನ್ನಾಳಿ ಶಾಸಕ ಎಂ ಪಿ ರೇಣುಕಾಚಾರ್ಯ ಅವರ ತಮ್ಮನ ಪುತ್ರ ಚಂದ್ರಶೇಖರ್ ಹೊನ್ನಾಳಿ ಸಮೀಪ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಸೇತುವೆ ಮೇಲಿಂದ ಕೆಳಗೆ ನೀರಿಗೆ ಬಿದ್ದು ಮೃತಪಟ್ಟಿದ್ದರು. ಆ ಪ್ರಕರಣದ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ.

ಆ ಘಟನೆ ಇನ್ನೂ ಹಸಿರಾಗಿರುವಾಗಲೇ ಹೊನ್ನಾಳಿಯಲ್ಲಿ ಅಂತಹದ್ದೇ ಮತ್ತೊಂದು ಘಟನೆ ನಡೆದಿದ್ದು ಯುವಕನೊಬ್ಬ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಬೆಳಗಾವಿ ಮೂಲದ ಯುವಕ ಪ್ರಕಾಶ್ ಅರಳೀಕಟ್ಟೆ(28) ಎಂಬ ಯುವಕ ಹೊನ್ನಾಳಿ ಹರಿಹರದ ಮಧ್ಯೆ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಮಾಸಡಿ ಗ್ರಾಮದ ಬಳಿ ಕಾರು ಹಳ್ಳಕ್ಕೆ ಬಿದ್ದು ಬಸವನಕುಡಚಿ ಗ್ರಾಮದ ASI ಪುತ್ರ ಪ್ರಕಾಶ್ ಅರಳೀಕಟ್ಟೆ ಮೃತಪಟ್ಟಿದ್ದಾರೆ. ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬೆಳಗಾವಿಯಿಂದ ಶಿವಮೊಗ್ಗಕ್ಕೆ ತನ್ನ ಸ್ನೇಹಿತರನ್ನು ಬಿಟ್ಟುಬರಲು ಹೋಗಿದ್ದ ಪ್ರಕಾಶ್ ಕಾರು ಹಳ್ಳಕ್ಕೆ ಬಿದ್ದು ಅಪಘಾತ ಸಂಭವಿಸಿದೆ.

ನಿಯಂತ್ರಣ ತಪ್ಪಿ ಹಳ್ಳಕ್ಕೆ ಕಾರು ಬಿದ್ದ ಪರಿಣಾಮ ಯುವಕ ಮೃತಪಟ್ಟಿದ್ದು, ಮೃತದೇಹ ಕಾರಿನ ಹಿಂದಿನ ಸೀಟ್ ಬಳಿ ಪತ್ತೆಯಾಗಿದೆ. ಚಂದ್ರು ಸಾವು ಪ್ರಕರಣ ಸಾಮ್ಯತೆ ಹೊಂದಿರುವ ಪ್ರಕರಣ ಇದಾಗಿದ್ದು, ಪೊಲೀಸರಿಗೆ ಮತ್ತೆ ಸವಾಲಾಗಿ ಪರಿಣಮಿಸಿದೆ. ಆರು ತಿಂಗಳಿನಿಂದಷ್ಟೆ ಮದುವೆ ಆಗಿದ್ದ ಪ್ರಕಾಶ್ ಶಿವಮೊಗ್ಗಕ್ಕೆ ಸ್ನೇಹಿತರನ್ನು ಬಿಡಲು ಕಾರ್ ನಲ್ಲಿ ಬಂದಿದ್ದ. ಹೊನ್ನಾಳಿ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ ಮೂಲಕ ಬೆಳಗಾವಿಗೆ ವಾಪಸ್ ಹೋಗುವಾಗ ಈ ಘಟನೆ ನಡೆದಿದೆ. ಸೇತುವೆಗೆ ಕಾರು ಡಿಕ್ಕಿ ಹೊಡೆದು ಹಳ್ಳಕ್ಕೆ ಕಾರ್ ಪಲ್ಟಿಯಾಗಿ ಬಿದ್ದಿದೆ.ಕೆಎ 22, ಎಂಎ 5954 ನಂಬರಿನ ಮಾರುತಿ ಎರಿಟಿಗಾ ಕಾರ್ ಆಗಿದ್ದು, ಅತೀ ವೇಗದಿಂದ ಅಪಘಾತ ಆಗಿರುವ ಶಂಕೆ ವ್ಯಕ್ತವಾಗಿದೆ. ಸಾವಿನ ಸುತ್ತ ಅನುಮಾನವೂ ಇದ್ದು, ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No Comments

Leave A Comment