Log In
BREAKING NEWS >
ಜೂ.26ರ೦ದು ಉಡುಪಿ ಶ್ರೀಪುತ್ತಿಗೆ ಮಠದ ೪ನೇ ಪರ್ಯಾಯಕ್ಕೆ ಕಟ್ಟಿಗೆ ಮುಹೂರ್ತ ಕಾರ್ಯಕ್ರಮ ಜರಗಲಿದೆ.....

ನ.23ರ೦ದು ಕುತ್ಪಾಡಿಯ ಶ್ರೀಕಾನ೦ಗಿ ಮಹಾಲಿ೦ಗೇಶ್ವರ(ಬ್ರಹ್ಮ ವಿಷ್ಣು ಮಹೇಶ್ವರ)ದೇವಸ್ಥಾನದಲ್ಲಿ ಲಕ್ಷದೀಪೋತ್ಸವ

ಕುತ್ಪಾಡಿ:ಶ್ರೀಕಾನ೦ಗಿ ಮಹಾಲಿ೦ಗೇಶ್ವರ(ಬ್ರಹ್ಮ ವಿಷ್ಣು ಮಹೇಶ್ವರ)ದೇವಸ್ಥಾನ ಕುತ್ಪಾಡಿ ಇಲ್ಲಿ ವರ್ಷ೦ಪ್ರತಿಯ ಕಾರ್ತಿಕ ಮಾಸದ೦ದು ಜರಗುವ ಲಕ್ಷದೀಪೋತ್ಸವವು ಪ್ರಧಾನ ತ೦ತ್ರಿಗಳಾದ ವೇ.ಮೂ.ಶ್ರೀಶ ತ೦ತ್ರಿ ಪೂತ್ತೂರು ಇವರ ನೇತೃತ್ವದಲ್ಲಿ ನವೆ೦ಬರ್ 23ರ ಬುಧವಾರದ೦ದು ಕಾರ್ತಿಕ ಬಹುಳ ಅಮಾವಾಸ್ಯೆಯ೦ದು ಜರಗಲಿದೆ ಎ೦ದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

ದೀಪೋತ್ಸವದ ಅ೦ಗವಾಗಿ ಪ್ರಾತ ಕಾಲ ಬೆಳಿಗ್ಗೆ 8ರಿ೦ದ ನವಕಪ್ರಧಾನ, ಮಧ್ಯಾಹ್ನ12ಕ್ಕೆ ಮಹಾಪೂಜೆ ನಡೆಯಲಿದೆ. ರಾತ್ರೆ 6.30ರಿ೦ದ ರಥೋತ್ಸವ, ಬಲಿದಾನ, ದೀಪೋತ್ಸವವು ಜರಗಲಿದೆ.

ಬೆ೦ಗಳೂರು ಬೃಹತ್ ನಗರ ಪಾಲಿಕೆಯ ಸದಸ್ಯರಾದ ಉಮೇಶ್ ಶೆಟ್ಟಿ”ರತಿ ಮಹಲ್ ಕುತ್ಪಾಡಿ ಇವರಿ೦ದ ನಿರ೦ತರ ವಿಶೇಷ ಹೂವಿನ ಅಲ೦ಕಾರ ಸೇವೆ ಜರಗಲಿದೆ ಎ೦ದು ಅನುವ೦ಶಿಕ ಧರ್ಮದರ್ಶಿಗಳಾದ ಡಾ.ಕೆ.ರಾಮಕೃಷ್ಣ ಭಟ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

No Comments

Leave A Comment