ಜಿಮ್ನಲ್ಲಿ ಕುಸಿದು ಬಿದ್ದು ಮೃತಪಟ್ಟ ಖ್ಯಾತ ಕಿರುತೆರೆ ನಟ
ಮುಂಬೈ, ನ 11 : ಜಿಮ್ ನಲ್ಲಿ ವರ್ಕೌಟ್ ಮಾಡುವಾಗ ಕುಸಿದುಬಿದ್ದು ಹಿಂದಿ ಕಿರುತೆರೆಯಲ್ಲಿ ನಟ ಸಿದ್ಧಾಂತ್ ಸೂರ್ಯವಂಶಿ ಮೃತಪಟ್ಟ ಘಟನೆ ನಡೆದಿದೆ.
‘ಕುಸುಮ್’ ಮತ್ತು ‘ಕಸೌತಿ ಜಿಂದಗಿ ಕೇ’ ಸೇರಿದಂತೆ ಹಲವಾರು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡ ನಟ ನಟ ಇತ್ತೀಚೆಗೆ ತಮ್ಮ ಹೆಸರನ್ನು ಆನಂದ್ ಸೂರ್ಯವಂಶಿಯಿಂದ ಸಿದ್ದಾಂತ್ ಸೂರ್ಯವಂಶಿ ಎಂದು ಬದಲಾಯಿಸಿಕೊಂಡಿದ್ದರು.
ಸಿದ್ಧಾಂತ್ ಅವರು ಮುಂಬೈನ ಜಿಮ್ ಒಂದರಲ್ಲಿ ವರ್ಕೌಟ್ ಮಾಡುತ್ತಿದ್ದರು. ಈ ವೇಳೆ ಅವರು ಏಕಾಏಕಿ ಕುಸಿದು ಬಿದ್ದಿದ್ದಾರೆ. ನಂತರ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಯಾವುದೇ ಪ್ರಯೋಜನ ಆಗಿಲ್ಲ.
ಸಿದ್ಧಾಂತ್ ಅವರು ಪತ್ನಿ ಅಲೇಸಿಯಾ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಅಲೇಸಿಯಾ ಅವರು ಮಾಡೆಲಿಂಗ್ ಜಗತ್ತಿನಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಪತಿಯ ಅಕಾಲಿಕ ಮರಣ ಸುದ್ದಿ ಅವರಿಗೆ ಶಾಕ್ ನೀಡಿದೆ.