Log In
BREAKING NEWS >
...........ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆ,ಅಭಿಮಾನಿಗಳಿಗೆ "ಶ್ರೀರಾಮನವಮಿ"ಯ ಶುಭಾಶಯಗಳು.......

ಅಮೆರಿಕ: ಪಾಪ್ ತಾರೆ ಆರನ್ ಕಾರ್ಟರ್ ಶವವಾಗಿ ಪತ್ತೆ

ಲಾಸ್ ಏಂಜಲೀಸ್: ಅಮೆರಿಕದ ಪಾಪ್ ತಾರೆ ಆರನ್ ಕಾರ್ಟರ್ ಶನಿವಾರ ಲಾಸ್ ಏಂಜಲೀಸ್ ಬಳಿಯ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಕಾರ್ಟರ್ ಗಾಯನ ಮತ್ತು ನಟನೆಯಲ್ಲಿ ವೃತ್ತಿಜೀವನವನ್ನು ಮುಂದುವರಿಸುವ ಮೊದಲು ತಮ್ಮ ಸಹೋದರನ ಹಿಟ್ ಬ್ಯಾಂಡ್ ಬ್ಯಾಕ್‌ಸ್ಟ್ರೀಟ್ ಬಾಯ್ಸ್‌ನೊಂದಿಗೆ ಕೆಲಸ ಮಾಡಿದ್ದರು.

ಶನಿವಾರ ಮಧ್ಯಾಹ್ನ ಲಾಸ್ ಏಂಜಲೀಸ್ ಪೊಲೀಸ್ ಇಲಾಖೆಯ ವಕ್ತಾರರು ಕಾರ್ಟರ್ ಮೃತರಾಗಿದ್ದ ಬಗ್ಗೆ ಮಾಹಿತಿ ನೀಡಿದ್ದಾರೆ. ಕಾರ್ಟರ್ 9 ವರ್ಷ ವಯಸ್ಸಿನವರಾಗಿದ್ದಾಗ 1997 ರಲ್ಲಿ ತಮ್ಮ ಚೊಚ್ಚಲ ಆಲ್ಬಂ ಬಿಡುಗಡೆ ಮಾಡಿದ್ದರು. ಅವರು ಕೆಲ ವರ್ಷಗಳಿಂದ ಡ್ರಗ್ಸ್ ವ್ಯಸನದ ಸಮಸ್ಯೆಗಳೊಂದಿಗೆ ಗುರುತಿಸಿಕೊಂಡಿದ್ದರು.

ಒಮ್ಮೆ ಸೆಲೆಬ್ರಿಟಿ ವೆಲ್‌ನೆಸ್ ಟಿವಿ ಶೋ ‘ದಿ ಡಾಕ್ಟರ್ಸ್‌’ನಲ್ಲಿ 2019 ರಲ್ಲಿ ಅವರು ಕಾಣಿಸಿಕೊಂಡಾಗ, ಖಿನ್ನತೆಯಿಂದ ಬಳಲುತ್ತಿರುವುದಾಗಿ ಹೇಳಿದ್ದರು. ಆದರೆ ಅವರ ವೈಯಕ್ತಿಕ ಜೀವನದ ಹೋರಾಟಗಳು ಟ್ಯಾಬ್ಲಾಯ್ಡ್ ಪತ್ರಿಕೆಗಳಿಗೆ ಆಹಾರವಾದವು. ಐದು ಕಾರ್ಟರ್ ಒಡಹುಟ್ಟಿದವರ ನಡುವೆ ಹಣಕ್ಕಾಗಿ ಕಲಹಗಳು ನಡೆದಿವೆ.

No Comments

Leave A Comment