Log In
BREAKING NEWS >
```````ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆಮತ್ತು ಅಭಿಮಾನಿಗಳಿಗೆ ಶ್ರೀಗೌರಿ-ಗಣೇಶ ಹಬ್ಬದ ಶುಭಾಶಯಗಳು````````

ಉಡುಪಿ ತೆ೦ಕಪೇಟೆಯ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ “ವಿಶ್ವರೂಪದರ್ಶನ”ಸ೦ಪನ್ನ…

ಉಡುಪಿ ತೆ೦ಕಪೇಟೆಯಲ್ಲಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಇಂದು(ಉತ್ಥಾನ ದ್ವಾದಶಿ) ಮುಂಜಾನೆ 5 ಕ್ಕೆ ಪಶ್ಚಿಮ ಜಾಗರ ಪೂಜೆ, ಸುಪ್ರಭಾತ , ಕಾಕಡ ಆರತಿ , ಶ್ರೀ ದೇವರ ಸನ್ನಿಧಿಯಲ್ಲಿ ಸಾವಿರಾರು ಹಣತೆಗಳ ದೀಪಗಳಿಂದ ಅಲಂಕೃತವಾದ “ವಿಶ್ವ ರೂಪ ದರ್ಶನ “ವಿಜೃ೦ಭಣೆಯಿ೦ದ ನೆರವೇರಿತು.

ವಿಶೇಷ ಆಕರ್ಷಣೆಯಾಗಿ ಶ್ರೀ ರಾಮ ದರ್ಶನ , ಶ್ರೀ ಮಹಾಲಕ್ಷ್ಮೀ , ಶಿವ ಲಿಂಗ ದರ್ಶನ , ಹರೇ ಶ್ರೀನಿವಾಸ , ರಂಗೋಲಿಯ ಚಿತ್ತಾರ , ಹೂಗಳಿಂದ ರಚಿಸಿದ ರಂಗೋಲಿ ,ಹಣತೆಯ ದೀಪದಿಂದ ಓಂ , ಸ್ವಸ್ತಿಕ್, ಶಂಖ ಚಕ್ರ ಗಳನ್ನು ರಚಿಸಲಾಯತು. ನೂರಾರು ಭಕ್ತರು ಸರತಿ ಸಾಲಿನಲ್ಲಿ ಬಂದು ಶ್ರೀ ದೇವರ ದರ್ಶನ ಪಡೆದರು. ಶ್ರೀ ದೇವರಿಗೆ ವಿಶೇಷ ಅಲಂಕಾರ ಹಾಗು ಮಹಾ ಪೂಜೆಯ ಬಳಿಕ ಪ್ರಸಾದ ವಿತರಣೆ ನಡೆಯತು.

ಪ್ರಧಾನ ಅರ್ಚಕರಾದ ವಿನಾಯಕ ಭಟ್ ಪೂಜಾ ಕಾರ್ಯಕ್ರಮ ನೆರವೇರಿಸಿದರು.

ಆಡಳಿತ ಮೊಕ್ತೇಸರರಾದ ಪಿ.ವಿ.ಶೆಣೈ , ಆಡಳಿತ ಮಂಡಳಿ ಸದಸ್ಯರಾದ ಗಣೇಶ್ ಕಿಣಿ, ರೋಹಿತಾಕ್ಷ ಪಡಿಯಾರ್, ವಸಂತ್ ಕಿಣಿ, ವಿಶ್ವನಾಥ್ ಭಟ್, ನಾರಾಯಣ ಪ್ರಭು ಮತ್ತು ನರಹರಿ ಪೈ, ವಿಶಾಲ್ .ಶೆಣೈ, ನಾಗೇಶ್ ಪೈ , ಭಾಸ್ಕರ್ ಶೆಣೈ , ಪ್ರದೀಪ್ ರಾವ್, ಮಟ್ಟಾರ್ ಸತೀಶ್ ಕಿಣಿ , ಸುರೇಶ ಭಟ್, ದಯಾಘಾನ್ ಭಟ್ , ಗಿರೀಶ್ ಭಟ್ ಮತ್ತು ಜಿ.ಸ್.ಬಿ. ಯುವಕ ಮಂಡಳಿ, ಮಹಿಳಾ ಮಂಡಳಿ ಸದಸ್ಯರು ಸಮಾಜ ಬಂದವರು ಉಪಸ್ಥಿತರಿದ್ದರು.

No Comments

Leave A Comment