Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ವಿಶ್ವ ಚಾಂಪಿಯನ್‌ಶಿಪ್‌: ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಕುಸ್ತಿಪಟು ಅಮನ್ ಸೆಹ್ರಾವತ್!

ನವದೆಹಲಿ: ಭಾರತದ ಯುವ ಕುಸ್ತಿಪಟು ಅಮನ್ ಸೆಹ್ರಾವತ್ ಸ್ಪೇನ್‌ನಲ್ಲಿ ನಡೆದ U23 ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.

ಪುರುಷರ ಫ್ರೀಸ್ಟೈಲ್ 57 ಕೆಜಿ ವಿಭಾಗದ ಫೈನಲ್‌ನಲ್ಲಿ ಟರ್ಕಿಯ ಕುಸ್ತಿಪಟು ಅಹ್ಮತ್ ಡುಮನ್ ವಿರುದ್ಧ 12-4 ಅಂತರದ ಗೆಲುವು ಸಾಧಿಸುವ ಮೂಲಕ 18 ವರ್ಷದ ಆಟಗಾರ ಈ ಅದ್ಭುತ ಸಾಧನೆ ಮಾಡಿದರು. ಒಲಿಂಪಿಕ್ ಪದಕ ವಿಜೇತರಾದ ಬಜರಂಗ್ ಪುನಿಯಾ ಮತ್ತು ರವಿ ದಹಿಯಾ ಕೂಡ ಈ ಟೂರ್ನಿಯಲ್ಲಿ ಈ ಹಿಂದೆ ಬೆಳ್ಳಿ ಪದಕ ಗೆದ್ದಿದ್ದರು.

ಅಮನ್ ಈ ಮೊದಲು ಪ್ರೀ ಕ್ವಾರ್ಟರ್‌ನಲ್ಲಿ ಶ್ರೀಲಂಕಾದ ಹಂಸನಾ ಮಧುಶಂಕ ಅವರನ್ನು 11-0 ಮತ್ತು ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್‌ನ ತೋಶಿಯಾ ಅಬೆ ವಿರುದ್ಧ 13-2 ರಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದ್ದರು. ಸೆಮಿಫೈನಲ್‌ನಲ್ಲಿ ಅವರು ಕಿರ್ಗಿಸ್ತಾನ್‌ನ ಬೆಕ್‌ಜತ್ ಅಲ್ಮಾಜ್ ಅವರನ್ನು 10-5 ಅಂತರದಿಂದ ಸೋಲಿಸಿ ತಮ್ಮ ಪದಕವನ್ನು ಖಚಿತಪಡಿಸಿದರು. ಇದು U23 ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಆರನೇ ಪದಕವಾಗಿದೆ.

No Comments

Leave A Comment