Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿನ 94ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ದೀಪ ಪ್ರಜ್ವಲನೆಯೊ೦ದಿಗೆ ವಿದ್ಯುಕ್ತ ಚಾಲನೆ.......ಡಿ.2ರ ಶುಕ್ರವಾರದ೦ದು ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಬಾಳೆಮುಹೂರ್ತ ಕಾರ್ಯಕ್ರಮವು 8ಗ೦ಟೆಗೆ ಪುತ್ತಿಗೆ ಮಠದ ಆವರಣದಲ್ಲಿ ಜರಗಲಿದೆ...

ದೀಪಾವಳಿಯ ಗೂಡು ದೀಪದಲ್ಲಿ ಮೂಡಿಬ೦ದ ಕಾಂತಾರ ಬಿತ್ತಿ ಚಿತ್ರ

ಉಡುಪಿ ಅ.23 (karavalikirana.com): ಕರಾವಳಿಯ ಸೊಗಡನ್ನು ಹೊಂದಿರುವ ಕಾಂತಾರ ಚಿತ್ರ ಇದೀಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಭರ್ಜರಿ ಯಶಸ್ಸುಗಳಿಸುತ್ತಿದೆ.

ಕನ್ನಡದ ಈ ಚಿತ್ರ ಇದೀಗ ರಾಜ್ಯದ ಗಡಿಯಾಚೆಗೂ ಭಾರೀ ಸದ್ದುಮಾಡುತ್ತಿದೆ. ಅಲ್ಲದೆ ಇದೀಗ ಗೂಡುದೀಪದಲ್ಲೂ ಕಾಂತಾರ ಚಿತ್ರದ ಚಿತ್ತಾರ ಮೂಡಿಬಂದಿದೆ.

ಸಾಮಾಜಿಕ ಕಾರ್ಯಕರ್ತ ಗಣೇಶ ರಾಜ್ ಸರಳೇಬೆಟ್ಟು ಮತ್ತು ಅವರ ಪುತ್ರ ಸಮರ್ಥ್ ರಾಜ್ ಅವರು ಜೊತೆಗೂಡಿ ಮಾಡಿರುವ ಗೂಡು ದೀಪದಲ್ಲಿ ಕಾಂತರ ಚಿತ್ರದ ದೈವಾವೇಶದ ಚಿತ್ರವನ್ನು ಅಳವಡಿಸಲಾಗಿದ್ದು, ಇದೀಗ ಜನಾಕರ್ಷಣೆಗೆ ಪಾತ್ರವಾಗಿದೆ.

ಎರಡು ದಿನಗಳ ಶ್ರಮದಲ್ಲಿ ಈ ಗೂಡುದೀಪ ರಚನೆಗೊಂಡಿದ್ದು, ರಾತ್ರಿ ಹೊತ್ತಿನಲ್ಲಿ ವಿದ್ಯುತ್ ದೀಪ ಅಳವಡಿಸಿದಾಗ ಮತ್ತಷ್ಟು ಆಕರ್ಷಣೀಯವಾಗಿ ಕಂಗೊಳಿಸುತ್ತಿದೆ.

No Comments

Leave A Comment