Log In
BREAKING NEWS >
ಮಾ.28ರ೦ದು ಸ೦ಜೆ 6.30ಕ್ಕೆ ಪಣಿಯಾಡಿ ಶ್ರೀಅನ೦ತಾಸನ ಶ್ರೀಲಕ್ಷ್ಮೀಪದ್ಮನಾಭ ದೇವಸ್ಥಾನದ ವಠಾರದಲ್ಲಿ ಶ್ರೀಏಕದ೦ತ ಸೇವಾ ಸಮಿತಿ ಪಣಿಯಾಡಿ ಉದ್ಘಾಟನಾ ಸಮಾರ೦ಭ ಜರಗಲಿದೆ....

ಅನುಮಾನಾಸ್ಪದ ಸಂಚಾರ- ಮೀನುಗಾರನ ಮೇಲೆ ಭಾರತೀಯ ನೌಕಾಪಡೆ ಗುಂಡಿನ ದಾಳಿ

ರಾಮನಾಥಪುರ, ಅ 21: ಮೀನುಗಾರಿಕೆಯಲ್ಲಿ ತೊಡಗಿದ್ದ ಮೀನುಗಾರನ ಮೇಲೆ ಅನುಮಾನಗೊಂಡು ಭಾರತೀಯ ನೌಕಾಪಡೆಯು ಆತನ ಮೇಲೆ ಗುಂಡು ಹಾರಿಸಿದ ಘಟನೆ ಕೊಡಿಯಾಕರೈ ಬಳಿ ಶುಕ್ರವಾರ ನಡೆದಿದೆ.

ಮೈಲಾಡುತುರೈ ಮೂಲದ ನಿವಾಸಿ ವೀರವೆಲ್ (30) ಗಾಯಗೊಂಡ ವ್ಯಕ್ತಿ. ನೌಕಾಪಡೆ ಸಿಬಂದಿ ಈತ ಹಾಗೂ ದೋಣಿಯ ಮೇಲೆ ಹಲವು ಬಾರಿ ಗುಂಡು ಹೊಡೆದಿದ್ದಾರೆ. ಇದರಿಂದ ಆತನ ಕಾಲು, ಹೊಟ್ಟೆಯ ಭಾಗಕ್ಕೆ ಗುಂಡು ತಗುಲಿದೆ. ಗಾಯಾಳುವನ್ನು ಕೂಡಲೇ ನೌಕಾ ಹೆಲಿಕಾಪ್ಟರ್‍ ಬಳಸಿ ರಾಮನಾಥಪುರಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಧುರೈ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂದು ತಿಳಿದು ಬಂದಿದೆ. ಸದ್ಯ ವ್ಯಕ್ತಿಯ ಆರೋಗ್ಯ ಸ್ಥಿರವಾಗಿದೆ ಎನ್ನಲಾಗಿದೆ.

ಭಾರತ ಹಾಗೂ ಶ್ರೀಲಂಕಾವನ್ನು ಬೇರ್ಪಡಿಸುವ ಪಾಲ್ಕ್ ಕೊಲ್ಲೆಯ ಮೇಲೆ ಭಾರತೀಯ ನೌಕಾಪಡೆ ನಿರಂತರವಾಗಿ ನಿಗಾ ಇಟ್ಟಿದ್ದು, ಗಸ್ತು ತಿರುಗುತ್ತಿದ್ದ ವೇಳೆ ಭಾರತೀಯ ನೌಕಾಪಡೆಗೆ ದೋಣಿಯೊಂದು ಅನುಮಾನಾಸ್ಪದವಾಗಿ ಹೋಗುತ್ತಿರುವ ಬಗ್ಗೆ ಸಂಶಯ ಬಂದಿದ್ದು, ಹಲವು ಬಾರಿ ಆತನಿಗೆ ಎಚ್ಚರಿಕೆ ನೀಡಲಾಗಿತ್ತು. ಆದರೆ ದೋಣಿ ಸಂಚಾರ ನಿಂತಿರಲಿಲ್ಲ. ಇದಕ್ಕಾಗಿ ದೋಣಿ ಹಾಗೂ ಮೀನುಗಾರನಿಗೆ ನೌಕಾಪಡೆ ಗುಂಡು ಹಾರಿಸಿದೆ ಎನ್ನಲಾಗಿದೆ. ರಾಮನಾಥಪುರಂ ಜಿಲ್ಲಾಧಿಕಾರಿ ಜಾನಿ ಟಾಮ್ ವರ್ಗೀಸ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

No Comments

Leave A Comment