ಅಸ್ಸಾಂ: ಅಸ್ಸಾಂ ಲೋಕೋಪಯೋಗಿ ಇಲಾಖೆಯಲ್ಲಿ (ಪಿಡಬ್ಲ್ಯೂಡಿ) ಕೆಲಸ ಮಾಡುತ್ತಿದ್ದ 30 ವರ್ಷದ ಸಹಾಯಕ ಎಂಜಿನಿಯರ್ ಮಂಗಳವಾರ ಮಧ್ಯಾಹ್ನ ತನ್ನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೃತರನ್ನು ಜ್ಯೋತಿಷಾ ದಾಸ್ (30) ಎಂದು ಗುರುತಿಸಲಾಗಿದೆ. ಇವರು ಅಸ್ಸಾಂನಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ (ಪಿಡಬ್ಲ್ಯೂಡಿ) ಸಹಾಯಕ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಮಂಗಳವಾರ (ಜುಲೈ 22) ಮಧ್ಯಾಹ್ನ
ಮಾಸ್ಕೋ: ಜು. 24,ಚೀನಾ ಗಡಿಯಲ್ಲಿ 50 ಪ್ರಯಾಣಿಕರಿದ್ದ ರಷ್ಯಾದ ಆನ್ -24 ವಿಮಾನ ನಾಪತ್ತೆಯಾಗಿರುವ ಘಟನೆ ನಡೆದಿದೆ. ವಾಯು ಸಂಚಾರ ನಿಯಂತ್ರಣ ಕೊಠಡಿಯ ಸಂಪರ್ಕ ಕಳೆದುಕೊಂಡ ರಷ್ಯಾದ ಪ್ರಯಾಣಿಕ ವಿಮಾನವೊಂದು ನಾಪತ್ತೆಯಾಗಿದೆ. ರಷ್ಯಾದ ಪೂರ್ವ ಅಮುರ್ ಪ್ರದೇಶದಲ್ಲಿದ್ದಾಗ ವಿಮಾನ ಸಂಪರ್ಕ ಕಡಿತಗೊಂಡಿದೆ. ಈ ಆನ್ -24 ವಿಮಾನದಲ್ಲಿ ಸುಮಾರು 50
ಬೆಂಗಳೂರು: ವರ್ತೂರು ಕೆರೆಯ 480 ಎಕರೆ ಜಾಗವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP)ಗೆ ವರ್ಗಾಯಿಸುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ(BDA) ಪ್ರಸ್ತಾವನೆಯನ್ನು ಶಾಸಕ ರಿಜ್ವಾನ್ ಅರ್ಷದ್ ನೇತೃತ್ವದ ಕರ್ನಾಟಕ ಶಾಸಕಾಂಗದ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಸ್ಥಾಯಿ ಸಮಿತಿ ತಿರಸ್ಕರಿಸಿದ್ದು, ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ನಿರ್ದೇಶನದಂತೆ ಜಲಮೂಲವನ್ನು
ಖ್ಯಾತ ಉದ್ಯಮಿ ಅನಿಲ್ ಅಂಬಾನಿ ಅವರ ಒಡೆತನದ ಕಂಪನಿಗಳ ಸಮೂಹ ಮತ್ತು ಯೆಸ್ ಬ್ಯಾಂಕ್ ಒಳಗೊಂಡ 3,000 ಕೋಟಿ ರೂಪಾಯಿಗೂ ಹೆಚ್ಚಿನ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಗುರುವಾರ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ರಿಲಯನ್ಸ್ ಕಮ್ಯುನಿಕೇಷನ್ಸ್ (ಆರ್‌ಕಾಮ್) ನ ಸಾಲ ಖಾತೆಯನ್ನು
ಬೆಂಗಳೂರು: ಮಹಾರಾಷ್ಟ್ರದಲ್ಲಿ ನೋಂದಾಯಿಸಲಾದ ಎರಡು ಐಷಾರಾಮಿ ಕಾರುಗಳನ್ನು ಕರ್ನಾಟಕದಲ್ಲಿ ಓಡಿಸುತ್ತಿದ್ದ ಉದ್ಯಮಿ ಮತ್ತು ರಾಜಕಾರಣಿ ಯೂಸುಫ್ ಷರೀಫ್ ಅಲಿಯಾಸ್ ಕೆಜಿಎಫ್ ಬಾಬು ಅವರಿಂದ ಸಾರಿಗೆ ಅಧಿಕಾರಿಗಳು ಸುಮಾರು 40 ಲಕ್ಷ ರೂ. ಬಾಕಿ ಇದ್ದ ರಸ್ತೆ ತೆರಿಗೆ ಸಂಗ್ರಹಿಸಿದ್ದಾರೆ. ಕೆಜಿಎಫ್ ಬಾಬು ನಟ ಅಮಿತಾಬ್ ಬಚ್ಚನ್ ಮತ್ತು ಅಮೀರ್ ಖಾನ್ ಅವರಿಂದ
ನವದೆಹಲಿ/ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ಹೈಕೋರ್ಟ್ ಜಾಮೀನು ಮೇಲೆ ಬಿಡುಗಡೆ ಹೊಂದಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ, ಪವಿತ್ರಾ ಗೌಡ ಸೇರಿ ಏಳು ಆರೋಪಿಗಳ ಜಾಮೀನು ರದ್ದು ಅರ್ಜಿಯ ತೀರ್ಪನ್ನು ಸುಪ್ರೀಂ ಕೋರ್ಟ್ ಗುರುವಾರ ಕಾಯ್ದಿರಿಸಿದೆ. ದರ್ಶನ್ ಸೇರಿ 7 ಆರೋಪಿಗಳ ಜಾಮೀನನ್ನು ರದ್ದು ಮಾಡುವಂತೆ ಕರ್ನಾಟಕ
ಅಹಮದಾಬಾದ್: ಭಾರತೀಯ ಉಪಖಂಡದಲ್ಲಿ ಅಲ್-ಖೈದಾ ಜೊತೆಗೆ ನಂಟು ಹೊಂದಿದ್ದ ಉಗ್ರ ಸಂಘಟನೆ (AQIS)ಯೊಂದನ್ನು ಪತ್ತೆ ಹಚ್ಚಿರುವ ಗುಜರಾತಿನ ಭಯೋತ್ಪಾದನಾ ನಿಗ್ರಹ ದಳ ಬುಧವಾರ ನಾಲ್ವರನ್ನು ಉಗ್ರರನ್ನು ಬಂಧಿಸಿದೆ. ದೆಹಲಿ ಹಾಗೂ ನೊಯ್ಡಾದಿಂದ ಇಬ್ಬರು ಉಗ್ರರು ಹಾಗೂ ಗುಜರಾತಿನ ಅಹಮದಾಬಾದ್ ಮತ್ತು ಮೊದಸಾದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ನಾಲ್ವರು ಭಯೋತ್ಪಾದಕರನ್ನು ಮೊಹಮ್ಮದ್ ಫೈಕ್, ಮೊಹಮ್ಮದ್
ಉಡುಪಿ: ಉಡುಪಿ ಸಮೀಪದ ಇತಿಹಾಸ ಪ್ರಸಿದ್ಧ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 96ನೇ ಭಜನಾ ಸಪ್ತಾಹಮಹೋತ್ಸವವು ಜುಲಾಯಿ 30ರಿ೦ದ ಮೊದಲ್ಗೊ೦ಡು ಅಗಸ್ಟ್ 6ರ೦ದು ಮ೦ಗಲೋತ್ಸವವು ಕಾರ್ಯಕ್ರಮವು ಜರಗಲಿದೆ. ಈ ಬಾರಿಯ ಸಪ್ತಾಹ ಮಹೋತ್ಸವದಲ್ಲಿ ಹಲವು ಬದಲಾವಣೆಗಳಿಗಿದೆ. ದೇವರ ಪೇಟೆ ಉತ್ಸವ ಹಾಗೂ ಶ್ರೀದೇವರಿಗೆ ತೊಟ್ಟಿಲ ಪೂಜೆಯು ಇರುವುದಿಲ್ಲ. ಸಾಯ೦ಕಾಲ 6ರಿ೦ದ 8ರ ವರೆಗೆ
ಹೆಬ್ರಿ: ಜು. 23. ಜುಲೈ 20ರಂದು ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಕಳ್ತೂರು ಗ್ರಾಮದ (38ನೇ ಕಳ್ತೂರು) ಸಂತೆಕಟ್ಟೆಯಲ್ಲಿರುವ ಹೋಟೆಲ್‌ನಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ನಾಲ್ವರು ರೌಡಿಶೀಟರ್‌ಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಬಂಧಿತರನ್ನು ಶ್ರೀಕಾಂತ್ ಕುಲಾಲ್, ಸದಾನಂದ ಪೂಜಾರಿ, ಸಂತೋಷ್ ನಾಯಕ್ ಮತ್ತು ರಾಜ ಅಲಿಯಾಸ್ ರಾಜೇಶ್ ನಾಯಕ್ ಎಂದು
ಬೆಂಗಳೂರು: 22 ವರ್ಷದ ಕಾಲೇಜು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು, ಆತನ ಮೂವರು ಕ್ಲಾಸ್ಮೇಟ್ಗಳ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಹಾಸನದ ಮೃತ ಅರುಣ್ ಸಿ, ಕಳೆದ ಜುಲೈ 11 ರಂದು ತನ್ನ ಮನೆಯಲ್ಲಿ ಸೀರೆಯಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬೆಂಗಳೂರಿನ ಖಾಸಗಿ