Log In
BREAKING NEWS >
ಕರಾವಳಿಯಲ್ಲಿ ಹೆಚ್ಚಿದ ಬಿಸಿಲಿನ ತಾಪಮಾನ-ಸಾವು ಸ೦ಭವಿಸುವ ಸಾಧ್ಯತೆ-ಎಚ್ಚರ ಬಿಸಿಲಿನಲ್ಲಿ ಹೊರಗೆ ಬರಲೇ ಬೇಡಿ....

ನವದೆಹಲಿ:ಮಾ,22: ಜೈಲಿನ ಒಳಗಿರಲಿ, ಹೊರಗಿರಲಿ, ನನ್ನ ಜೀವನವು ದೇಶಕ್ಕಾಗಿ ಸಮರ್ಪಿತ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಮದ್ಯ ಹರಗರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ದೆಹಲಿ ಮುಖ್ಯಮಂತ್ರಿಯನ್ನು ಇಂದು ರೋಸ್ ಅವೆನ್ಯೂ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಂದರ್ಭದಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿ, ಜೈಲಿನಲ್ಲಿದ್ದರೂ ಹೊರಗಿದ್ದರೂ ದೇಶಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿರುವುದಾಗಿ ಹೇಳಿದ್ದಾರೆ. ದೆಹಲಿ ಅಬಕಾರಿ

ಥಿಂಪು: ಮಾ 22: ಎರಡು ದಿನಗಳ ಭೇಟಿಗಾಗಿ ಭೂತಾನ್‌ ತೆರಳಿದ ನರೇಂದ್ರ ಮೋದಿಯವರಿಗೆ ಅಲ್ಲಿ ಭವ್ಯ ಸ್ವಾಗತ ದಿಂ ಬರ ಮಾಡಿಕೊಂಡಿದ್ದಾರೆ. ಭೂತಾನ್‌ ಪ್ರಧಾನಿ ತ್ಶೆರಿಂಗ್ ಟೊಬ್ಗೇ ಅವರು ಮೋದಿಯವರನ್ನು ಆಲಿಂಗಿಸಿ ನನ್ನ ಹಿರಿಯ ಸಹೋದರ ನಿಮಗೆ ಸ್ವಾಗತ ಎಂದು ಹೇಳಿದ್ದಾರೆ. ಮಾರ್ಚ್ 21 ಹಾಗೂ 22 ರಂದು ಪ್ರಧಾನಿ

ನವದೆಹಲಿ:ಮಾ 22,ಮದ್ಯದ ವಿರುದ್ಧ ಧ್ವನಿ ಎತ್ತಿದ್ದ ಕೇಜ್ರಿವಾಲ್ ಹಣಕ್ಕಾಗಿ ನೂತನ ಲಿಕ್ಕರ್ ಪಾಲಿಸಿ ಮಾಡಿದ್ದಾರೆ. ಆಮ್ ಆದ್ಮಿ ಪಕ್ಷವು ಮದ್ಯ ನೀತಿಯನ್ನು ಮಾಡಬಾರದಿತ್ತು. ಮದ್ಯದ ವಿರುದ್ಧ ಧ್ವನಿ ಎತ್ತಿದ್ದ ವ್ಯಕ್ತಿ ಇಂದು ಮದ್ಯ ನೀತಿಯನ್ನು ಸಿದ್ಧಪಡಿಸಿದ್ದು ನನಗೆ ಬೇಸರ ತಂದಿದೆ.ಕೇಜ್ರಿವಾಲ್ ಅವರನ್ನು ಇ.ಡಿ. ಬಂಧಿಸಿದ ಬಳಿಕ ಶುಕ್ರವಾರ ಮಾಧ್ಯಮಗಳಿಗೆ

ಬೆಂಗಳೂರು: ದ್ವೇಷ ಭಾಷಣ ಮಾಡಿದ ಆರೋಪದ ಮೇಲೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ದಾಖಲಾಗಿದ್ದ ಎಫ್ಐಆರ್ ಗೆ ಶುಕ್ರವಾರ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಮಾರ್ಚ್ 1 ರಂದು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟಕ್ಕೆ ತಮಿಳುನಾಡಿನ ವ್ಯಕ್ತಿಯೊಬ್ಬರು ಕಾರಣ ಎಂದು ಶೋಭಾ

ಚಿಕ್ಕಮಗಳೂರು: ಸರಳತೆಯಿಂದಲೇ ಗಮನ ಸೆಳೆಯುವ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ವಿಶೇಷ ವ್ಯಕ್ತಿಯೊಬ್ಬರು ದೇಣಿಗೆ ನೀಡಿದ್ದಾರೆ. ಕೋಟ ಶ್ರೀನಿವಾಸ ಪೂಜಾರಿ ಅವರ ಚುನಾವಣಾ ಖರ್ಚಿಗೆ ಚುರುಮುರಿ ವ್ಯಾಪಾರಿಯೊಬ್ಬರು 25,000 ರೂ ನೀಡಿದ್ದಾರೆ. ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಕಾರ್ಯಕರ್ತ ಹಾಗೂ

ನವದೆಹಲಿ: ಜಾರಿ ನಿರ್ದೇಶನಾಲಯ ಶುಕ್ರವಾರ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಇಲ್ಲಿನ ರೋಸ್‌ ಅವೆನ್ಯೂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಅಬಕಾರಿ ನೀತಿ ಸಂಬಂಧಿತ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ 10 ದಿನಗಳ ಕಸ್ಟಡಿಗೆ ಕೋರಿದೆ. ಇಂದು ಮಧ್ಯಾಹ್ನ 2 ಗಂಟೆ ಸುಮಾರಿನಲ್ಲಿ ನ್ಯಾಯಾಲಯ ಆವರಣ ಹಾಗೂ ಸುತ್ತಮುತ್ತ ಬಿಗಿ ಭದ್ರತೆ ನಡುವೆ

ನವದೆಹಲಿ:ಮಾ, 22:ಲೋಕಸಭಾ ಚುನಾವಣಾ ದಿನಾಂಕ ಘೋಷಣೆಯಾದ ಬೆನ್ನಲ್ಲೇ ವಿಕಸಿತ್ ಭಾರತ್ ಸಂಪರ್ಕ ವಾಟ್ಸಪ್ ಸಂದೇಶ ಕಳುಹಿಸುವುದನ್ನು ತಕ್ಷಣವೇ ನಿಲ್ಲಿಸಬೇಕೆಂದು ಕೇಂದ್ರ ಚುನಾವಣಾ ಆಯೋಗ ಗುರುವಾರ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ವಿಕಸಿತ್ ಭಾರತ್ ಹೆಸರಿನ ಸಂದೇಶದಲ್ಲಿ ಕೇಂದ್ರದ ಬೃಹತ್ ಯೋಜನೆಗಳನ್ನು ಪ್ರಚಾರ ಮಾಡುತ್ತಿರುವುದಾಗಿ ಚುನಾವಣಾ ಆಯೋಗ ದೂರನ್ನು ಸ್ವೀಕರಿಸಿದ ಬಳಿಕ

ಮ೦ಗಳೂರು:ಸೌದಿ ಅರೇಬಿಯಾದ ತಾಯಿಫ್ ಬಳಿ ನಡೆದ ಭೀಕರ ಕಾರು ಅಪಘಾತದಲ್ಲಿ ಹಳೆಯಂಗಡಿ ಮೂಲದ ನಾಲ್ವರು ಮೃತಪಟ್ಟ ಘಟನೆ ನಡೆದಿದೆ. ಕತಾರ್ ನಿಂದ ಸೌದಿ ಅರೇಬಿಯಾಕ್ಕೆ ಉಮ್ರಾ ನಿರ್ವಹಿಸಲು ಕಾರಿನಲ್ಲಿ ತೆರಳುತ್ತಿದ್ದ ಹಳೆಯಂಗಡಿ ಮೂಲದ ದಂಪತಿಗಳು ಹಾಗೂ ನಲ್ವತು ದಿನದ ಹಸುಗೂಸು ಸೇರಿದಂತೆ ನಾಲ್ಕು ಮಂದಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ. ಕಾರಿನಲ್ಲಿದ್ದ ಇನ್ನೊಂದು ಮಗು

ಉಡುಪಿ:ಶ್ರೀಅದಮಾರು ಮಠದ ಹಿರಿಯ ಯತಿಗಳಾದ ಶ್ರೀಶ್ರೀವಿಶ್ವಪ್ರಿಯ ತೀರ್ಥಶ್ರೀಪಾದರ ಅನುಗ್ರಹದೊ೦ದಿಗೆ ಶ್ರೀಶ್ರೀ ಈಶಪ್ರಿಯ ತೀರ್ಥ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ಶ್ರೀಕೃಷ್ಣ ಸೇವಾ ಬಳಗ, ಶ್ರೀಅದಮಾರು ಮಠ ಆಯೋಜಿಸಿರುವ 30ನೇ "ವಿಶ್ವಾರ್ಪಣಮ್ " ಕಾರ್ಯಕ್ರಮದಲ್ಲಿ ಅಯೋಧ್ಯಾವಾಸಿ ಶ್ರೀರಾಮಲಲ್ಲನ ಪ್ರತಿಷ್ಠಾ ಮತ್ತು ಮ೦ಡಲೋತ್ಸವವನ್ನು ಪೂರೈಸಿ,೬೦ಸ೦ವತ್ಸರಗಳ ಸಾರ್ಥಕವಾಗಿ ಪೂರೈಸಿ ಶ್ರೀಶ್ರೀಕೃಷ್ಣಮುಖ್ಯಪ್ರಾಣ ಸಮರ್ಪಿಸಿ ಉಡುಪಿಗೆ ಆಗಮಿಸಿರುವ

ಕುಂದಾಪುರ: ಸಿದ್ದಾಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ಪ್ರಭಾರ ವ್ಯವಸ್ಥಾಪಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಆಶಾ ಎಸ್‌(52) ಅವರು ನಿನ್ನೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿನ್ನೆ ಬೆಳಗ್ಗೆ ಕರ್ತವ್ಯಕ್ಕೆ ಹಾಜರಾಗಿದ್ದ ಅವರು, ಮಧ್ಯಾಹ್ನ ಕಚೇರಿಯಿಂದ ಯಾರಿಗೂ ತಿಳಿಸದೆ ನೇರವಾಗಿ ಮನೆಗೆ ಹೋಗಿ, ಮಹಡಿಯ ಕೋಣೆಯಲ್ಲಿ ಹಗ್ಗದಿಂದ ನೇಣು ಬಿಗಿದು