ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು

ಭಾರತದ ಚಿನ್ನ ಹುಡುಗ ನೀರಜ್ ಚೋಪ್ರಾ ಮೊದಲ ಪ್ರಯತ್ನದಲ್ಲೇ ಪುರುಷರ ಜಾವೆಲಿನ್​​​​​​​​​​ನಲ್ಲಿ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ.  89.34 ಮೀಟರ್‌ ದೂರ ಎಸೆಯುವ ಮೂಲಕ ಬಂಗಾರದ ಭರವಸೆ ಮೂಡಿಸಿದ್ದಾರೆ. 89.34 ಮೀಟರ್‌ ದೂರ ಎಸೆತ ಇದು ಜಾಗತಿಕ ಚಾಂಪಿಯನ್‌ಶಿಪ್‌ನಲ್ಲಿ ಚೋಪ್ರಾ ಅವರ ಅತ್ಯುತ್ತಮ ಎಸೆತ ಎಂದು ಹೇಳಲಾಗಿದೆ. ಈ ಹಿಂದೆ

ಪ್ಯಾರಿಸ್ ಒಲಿಂಪಿಕ್ಸ್​ನ ಶೂಟಿಂಗ್​ ಸ್ಪರ್ಧೆಯಲ್ಲಿ ಹ್ಯಾಟ್ರಿಕ್ ಪದಕ ಗೆಲ್ಲುವ ಮನು ಭಾಕರ್ ಅವರ ಕನಸು ಕಮರಿದೆ. ಫ್ರಾನ್ಸ್‌ನ ಚಟೌರೌಕ್ಸ್‌ನಲ್ಲಿ ನಡೆದ ಮಹಿಳೆಯರ 25 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಆರಂಭದಲ್ಲಿ 4ನೇ ಸ್ಥಾನ ಪಡೆಯುವ ಮೂಲಕ ಮೂರನೇ ಪದಕಕ್ಕೆ ಕೊರೊಳೊಡ್ಡುವ ಅವಕಾಶವನ್ನು ತಪ್ಪಿಸಿಕೊಂಡರು. ಫೈನಲ್ ಸುತ್ತಿನ ಆರಂಭದಲ್ಲಿ ಮುನ್ನಡೆ ಪಡೆದಿದ್ದ ಮನು, ಎಲಿಮಿನೇಷನ್

ಪ್ಯಾರಿಸ್‌: ಪ್ಯಾರಿಸ್​ ಒಲಿಂಪಿಕ್ಸ್‌ 2024ನಲ್ಲಿ ಭಾರತ ಮತ್ತೊಂದು ಪದಕವನ್ನು ತನ್ನದಾಗಿಸಿಕೊಂಡಿದೆ. 10 ಮೀ. ಏರ್‌ ಪಿಸ್ತೂಲ್‌ ಮಿಶ್ರ ತಂಡ ವಿಭಾಗದ ಸ್ಪರ್ಧೆಯಲ್ಲಿ ಸರಬ್ಜೋತ್‌ ಸಿಂಗ್‌ ಮತ್ತು ಮನು ಭಾಕರ್​ ಜೋಡಿ ಕಂಚಿನ ಪದಕಕ್ಕೆ ಮುತ್ತಿಕ್ಕಿದೆ. 2 ದಿನಗಳ ಹಿಂದಷ್ಟೇ ಮಹಿಳೆಯರ 10 ಮೀ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕ

ಪ್ಯಾರಿಸ್ ಒಲಿಂಪಿಕ್ಸ್​ನ ಟೇಬಲ್ ಟೆನ್ನಿಸ್ ಸ್ಪರ್ಧೆಯಲ್ಲಿ ಭಾರತದ ಮಣಿಕಾ ಬಾತ್ರಾ ಪ್ರಿ ಕ್ವಾರ್ಟರ್‌ಫೈನಲ್​ಗೆ ಎಂಟ್ರಿ ಕೊಟ್ಟಿದ್ದಾರೆ. ಇದರೊಂದಿಗೆ ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಸೋಮವಾರ ನಡೆದ ಮಹಿಳಾ ಸಿಂಗಲ್ಸ್ ಟೇಬಲ್ ಟೆನ್ನಿಸ್ ಪಂದ್ಯದಲ್ಲಿ ಮಣಿಕಾ ಬಾತ್ರಾ ಹಾಗೂ ಫ್ರಾನ್ಸ್​ನ ಪ್ರಿತಿಕಾ ಪವಾಡೆ

33ನೇ ಆವೃತ್ತಿಯ ಪ್ಯಾರಿಸ್ ಒಲಿಂಪಿಕ್ಸ್​ನ ಎರಡನೇ ದಿನ ಭಾರತಕ್ಕೆ ಶುಭ ಸುದ್ದಿ ಸಿಕ್ಕಿದೆ. ಈ ಮಹಾ ಕ್ರೀಡಾಕೂಟದಲ್ಲಿ ಭಾರತ ತನ್ನ ಪದಕದ ಖಾತೆಯನ್ನು ತೆರೆದಿದೆ. ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತದ ಶೂಟರ್ ಮನು ಭಾಕರ್ ಕಂಚಿನ ಪದಕಕ್ಕೆ ಕೊರಳ್ಳೊಡಿದ್ದಾರೆ. ಈ ಮೂಲಕ ಶೂಟಿಂಗ್‌ನಲ್ಲಿ ಭಾರತಕ್ಕೆ

ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಮೊದಲ ದಿನ ಭಾರತಕ್ಕೆ ನಿರಾಸೆ ಮೂಡಿದೆ. ಆದರೆ ಚೀನಾ ಮೊದಲೆರೆಡು ಚಿನ್ನದ ಪದಕ ಗೆದ್ದಿದೆ. ಮೊದಲು ಮಿಶ್ರ ಸ್ಪರ್ಧೆಯಲ್ಲಿ ಮತ್ತು ನಂತರ ಸಿಂಗಲ್ಸ್‌ನಲ್ಲಿ 10 ಮೀಟರ್ ಏರ್ ರೈಫಲ್‌ನಲ್ಲಿ ಭಾರತ ತಂಡ ಫೈನಲ್‌ನಲ್ಲಿ ಸ್ಥಾನ ಕಳೆದುಕೊಂಡಿತು. 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಅರ್ಜುನ್ ಸಿಂಗ್

ಫ್ರಾನ್ಸ್​ ರಾಜಧಾನಿ ಪ್ಯಾರಿಸ್​ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟದ ಮೊದಲ ದಿನವೇ ಭಾರತೀಯ ಸ್ಪರ್ಧಿಗಳಿಂದ ನೀರಸ ಪ್ರದರ್ಶನ ಮೂಡಿಬಂದಿದೆ. ಶನಿವಾರ ನಡೆದ 10 ಮೀಟರ್ ಏರ್ ರೈಫಲ್ ಶೂಟಿಂಗ್​ ಸ್ಪರ್ಧೆಯಲ್ಲಿ ಭಾರತದ ನಾಲ್ವರು ಶೂಟರ್​ಗಳು ಭಾಗವಹಿಸಿದ್ದರು. ಆದರೆ ಮಿಶ್ರ ಏರ್​ ರೈಫಲ್​ ವಿಭಾಗದಲ್ಲಿ ಪದಕದ ಸುತ್ತಿಗೆ ಪ್ರವೇಶಿಸುವಲ್ಲಿ ಭಾರತೀಯ ಶೂಟರ್​ಗಳು ವಿಫಲರಾಗಿದ್ದಾರೆ. 10

ಪ್ಯಾರಿಸ್ ಒಲಿಂಪಿಕ್ಸ್‌ನ ರ‍್ಯಾಂಕಿಂಗ್ ಸುತ್ತಿನಲ್ಲಿ ಭಾರತದ ಮಹಿಳಾ ಆರ್ಚರಿ ತಂಡ ಉತ್ತಮ ಪ್ರದರ್ಶನ ನೀಡಿದೆ. ದೀಪಿಕಾ ಕುಮಾರಿ, ಅಂಕಿತಾ ಭಗತ್ ಮತ್ತು ಭಜನ್ ಕೌರ್ ಭಾರತಕ್ಕೆ ಒಟ್ಟು 1,983 ಅಂಕಗಳನ್ನು ನೀಡಿದ್ದಾರೆ. ಇದರೊಂದಿಗೆ ಭಾರತ ತಂಡ ನಾಲ್ಕನೇ ಸ್ಥಾನ ಪಡೆದು ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದೆ. ವೈಯಕ್ತಿಕ ಸ್ಕೋರ್ ಕುರಿತು

Paris Olympics 2024: 33ನೇ ಒಲಿಂಪಿಕ್ಸ್ ಕ್ರೀಡಾಕೂಟಕ್ಕಾಗಿ ಪ್ರಣಯದೂರು ಪ್ಯಾರಿಸ್​ ಸಜ್ಜಾಗಿ ನಿಂತಿದೆ. ಇಂದಿನಿಂದ ಶುರುವಾಗಲಿರುವ ಒಲಿಂಪಿಯಾಡ್​ನಲ್ಲಿ ಈ ಬಾರಿ 206 ದೇಶಗಳ 10 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. ಹಾಗೆಯೇ ಈ ಕ್ರೀಡಾಕೂಟದಲ್ಲಿ ಭಾರತದ 117 ಕ್ರೀಡಾಪಟುಗಳು ಒಲಿಂಪಿಕ್ಸ್​ನಲ್ಲಿ ಕಣಕ್ಕಿಳಿಯುತ್ತಿದ್ದು, ಇವರಲ್ಲಿ 47 ಮಹಿಳಾ ಸ್ಪರ್ಧಿಗಳಿರುವುದು ವಿಶೇಷ.

ಟೀಮ್ ಇಂಡಿಯಾದ ಮಾಜಿ ಆಟಗಾರರಾದ ಯುವರಾಜ್ ಸಿಂಗ್, ಹರ್ಭಜನ್ ಸಿಂಗ್ ಮತ್ತು ಸುರೇಶ್ ರೈನಾ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಮೂವರು ಆಟಗಾರರು ಕಾಣಿಸಿಕೊಂಡ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ತೌಬಾ ತೌಬಾ ಹಾಡಿಗೆ ಮೈ ಕೈ ನೋವನ್ನು ಪ್ರಸ್ತಾಪಿಸುವಂತೆ ಕಾಣಿಸಿಕೊಂಡಿದ್ದರು. ಆದರೆ