ಉತ್ತರಕಾಶಿ: ಉತ್ತರಾಖಂಡದ ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಿಂದ ಸುರಕ್ಷಿತವಾಗಿ ಹೊರಬಂದ 41 ಕಾರ್ಮಿಕರನ್ನು ಆರೋಗ್ಯ ತಪಾಸಣೆಗಾಗಿ ಬುಧವಾರ ಏಮ್ಸ್-ಋಷಿಕೇಶಕ್ಕೆ ವಿಮಾನದಲ್ಲಿ ಕರೆದೊಯ್ಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಂಗಳವಾರ ಸಂಜೆ ಅಂತ್ಯಗೊಂಡ 17 ದಿನಗಳ ಕಠಿಣ ಕಾರ್ಯಾಚರಣೆಯ ನಂತರ ಕುಸಿದ ಸುರಂಗದಿಂದ 41 ಕಾರ್ಮಿಕರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಅವರನ್ನು ಚಿನ್ಯಾಲಿಸೌರ್‌ನ ಆಸ್ಪತ್ರೆಯಲ್ಲಿ ವೈದ್ಯಕೀಯ ನಿಗಾದಲ್ಲಿ
ಉತ್ತರಕಾಶಿ: ಪ್ರಧಾನಿ ನರೇಂದ್ರ ಮೋದಿ ಅವರ ಪ್ರಧಾನ ಕಾರ್ಯದರ್ಶಿ ಪ್ರಮೋದ್ ಕುಮಾರ್ ಮಿಶ್ರಾ ನೇತೃತ್ವದ ನಿಯೋಗ ಸೋಮವಾರ ಉತ್ತರಖಂಡದ ಉತ್ತರಕಾಶಿಯಲ್ಲಿರುವ ಸಿಲ್ಕ್ಯಾರಾ ಸುರಂಗ ಕುಸಿತದ ಸ್ಥಳಕ್ಕೆ ಭೇಟಿ ನೀಡಿ, ರಕ್ಷಣಾ ಕಾರ್ಯಾಚರಣೆಯನ್ನು ಪರಿಶೀಲಿಸಿದ್ದಾರೆ. ಸುರಂಗ ಕುಸಿತದಿಂದ ಒಳಗಡೆ ಸಿಲುಕಿರುವ 41 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಇಂದು 16ನೇ ದಿನಕ್ಕೆ ಕಾಲಿಟ್ಟಿದ್ದು, ಕಾರ್ಮಿಕರನ್ನು
ಭುವನೇಶ್ವರ: ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿರುವ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ವಿಶ್ವಾಸಾರ್ಹ ಸಹಾಯಕ ಮತ್ತು ಮಾಜಿ ಐಎಎಸ್ ಅಧಿಕಾರಿ ವಿಕೆ ಪಾಂಡಿಯನ್ ಅವರು ಸೋಮವಾರ ಆಡಳಿತಾರೂಢ ಬಿಜು ಜನತಾ ದಳ(ಬಿಜೆಡಿ)ಗೆ ಅಧಿಕೃವಾಗಿ ಸೇರ್ಪಡೆಯಾಗಿದ್ದಾರೆ. ಇಂದು ನವೀನ್ ಪಟ್ನಾಯಕ್ ಅವರ ನಿವಾಸ್‌ನಲ್ಲಿ ಮುಖ್ಯಮಂತ್ರಿಗಳು ಹಾಗೂ ಪಕ್ಷದ ಹಿರಿಯ ನಾಯಕರ ಸಮ್ಮುಖದಲ್ಲಿ
ಅಮೃತಸರ: ಭಾರತದ ವಾಯುಪ್ರದೇಶಕ್ಕೆ ಬಂದಿದ್ದ ಪಾಕಿಸ್ತಾನದ ಡ್ರೋನ್ ಅನ್ನು ಗಡಿ ಭದ್ರತಾ ಪಡೆಯು (ಬಿಎಸ್ಎಫ್) ತಡೆದಿದ್ದು, ಡ್ರೋನ್ ಸೇರಿದಂತೆ ಪಿಸ್ತೂಲ್ ಮತ್ತು 5.240 ಕೆಜಿ ಹೆರಾಯಿನ್ ಅನ್ನು ಅಮೃತಸರ ಜಿಲ್ಲೆಯ ಚಕ್ ಅಲ್ಲಾ ಬಕ್ಷ್‌ನಲ್ಲಿ ವಶಪಡಿಸಿಕೊಂಡಿದೆ. 'ನವೆಂಬರ್ 26ರ ಮುಂಜಾನೆ, ಪಾಕಿಸ್ತಾನದ ಡ್ರೋನ್ ನಿಯಮ ಉಲ್ಲಂಘಿಸಿ ಭಾರತೀಯ ವಾಯುಪ್ರದೇಶಕ್ಕೆ ಬಂದಿದೆ. ಇದನ್ನು ಬಿಎಸ್‌ಎಫ್
ಉತ್ತರಾಖಂಡ್: ಉತ್ತರಕಾಶಿಯಲ್ಲಿ ಕುಸಿತ ಕಂಡಿರುವ ಸಿಲ್ಕ್ಯಾರ ಟನಲ್ ನಲ್ಲಿ ಸಿಲುಕಿರುವ 41 ಕಾರ್ಮಿಕರನ್ನು ರಕ್ಷಿಸುವುದಕ್ಕಾಗಿ ಟನಲ್ ಮೇಲ್ಭಾಗದಿಂದ ಲಂಬ ಕೊರೆಯುವಿಕೆ ಆರಂಭವಾಗಿದೆ. ವರ್ಟಿಕಲ್ ಡ್ರಿಲಿಂಗ್ ಗಾಗಿ ಎರಡು ನಿರ್ದಿಷ್ಟ ಸ್ಥಳಗಳನ್ನು ಗುರುತು ಮಾಡಲಾಗಿತ್ತು. ಎಸ್ ಜೆವಿಎನ್ ಎಂಬ ಸರ್ಕಾರಿ ಸ್ವಾಮ್ಯದ ಸಂಸ್ಥೆ ವರ್ಟಿಕಲ್ ಡ್ರಿಲ್ಲಿಂಗ್ ನ್ನು ಆರಂಭಿಸಿದೆ. ಈ ನಡುವೆ ರಕ್ಷಣಾ
ಮುಂಬೈ: ಎಡಗೈ ಸ್ಪಿನ್ನರ್ ಶಹಬಾಜ್ ಅಹ್ಮದ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಆಟಗಾರರ ವಿನಿಮಯದ ಅಡಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಇದೇ ವೇಳೆ, ಸನ್‌ರೈಸರ್ಸ್ ಹೈದರಾಬಾದ್ ತಂಡದ ಮಯಾಂಕ್ ದಾಗರ್ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ಬೆಂಗಳೂರು ತಂಡದಲ್ಲಿ ಆಡಲಿದ್ದಾರೆ. ಶಹಬಾಜ್ ಅಹ್ಮದ್ ಅವರನ್ನು ಸದ್ಯದ ಹರಾಜಿನ
ಉತ್ತರಕಾಶಿ: ಸಿಲ್ಕ್ಯಾರಾ ಸುರಂಗದ ಒಳಗೆ ಕೊರೆಯುವ ಆಗರ್ ಯಂತ್ರದ ಬ್ಲೇಡ್‌ಗಳು ಶಿಲಾಖಂಡರಾಶಿಗಳಲ್ಲಿ ಸಿಕ್ಕಿಹಾಕಿಕೊಂಡಿರುವುದರಿಂದ ಸುರಂಗದೊಳಗೆ ಸಿಲುಕಿರುವ 41 ಕಾರ್ಮಿಕರ ರಕ್ಷಣೆಗೆ ಮತ್ತೆ ಅಡಚಣೆಯುಂಟಾಗಿದ್ದು, ಅಧಿಕಾರಿಗಳು ರಕ್ಷಣಾ ಕಾರ್ಯಕ್ಕೆ ಬದಲಿ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಅಧಿಕಾರಿಗಳ ಮುಂದಿನ ಎರಡು ಆಯ್ಕೆಗಳೇನು?: 41 ಮಂದಿ ಕಾರ್ಮಿಕರು ಒಳಗೆ ಸಿಲುಕಿಹಾಕಿಕೊಂಡು 14 ದಿನ ಕಳೆದಿದ್ದು, ಅಧಿಕಾರಿಗಳು ಎರಡು ಪರ್ಯಾಯ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತಾ ಉಲ್ಲಂಘನೆ ಪ್ರಕರಣದಲ್ಲಿ ಪಂಜಾಬ್ ಎಸ್ ಪಿ ಸೇರಿದಂತೆ 7 ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಕಳೆದ ವರ್ಷ ಜನವರಿಯಲ್ಲಿ ಪ್ರಧಾನಿ ಮೋದಿ ಪಂಜಾಬ್ ಗೆ ಭೇಟಿ ನೀಡಿದ್ದಾಗ ಭದ್ರತಾ ಉಲಂಘನೆಯಾಗಿತ್ತು. ಈ ವೇಳೆ ಕರ್ತವ್ಯ ಲೋಪ ಉಂಟುಮಾಡಿದ್ದ ಆರೋಪದಲ್ಲಿ ಬಟಿಂಡಾ ಎಸ್ ಪಿ ಸೇರಿದಂತೆ 7
ವಾಷಿಂಗ್ಟನ್: ಕಾರಿನಲ್ಲಿದ್ದ ಭಾರತೀಯ ಮೂಲದ ಡಾಕ್ಟರೇಟ್ ವಿದ್ಯಾರ್ಥಿಯನ್ನು ಅಮೆರಿಕದಲ್ಲಿ ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ನಡೆದಿದೆ. ಆದಿತ್ಯ ಅದ್ಲಾಖಾ (26) ಅವರು ಸಿನ್ಸಿನಾಟಿ ವೈದ್ಯಕೀಯ ಶಾಲೆಯ ವಿಶ್ವವಿದ್ಯಾನಿಲಯದಲ್ಲಿ ಆಣ್ವಿಕ ಮತ್ತು ಅಭಿವೃದ್ಧಿ ಜೀವಶಾಸ್ತ್ರ ವಿಭಾಗದಲ್ಲಿ ನಾಲ್ಕನೇ ವರ್ಷದ ಡಾಕ್ಟರೇಟ್ ವಿದ್ಯಾರ್ಥಿಯಾಗಿದ್ದರು. ಅವರನ್ನು ಯುಎಸ್ ರಾಜ್ಯದ ಓಹಿಯೋದಲ್ಲಿ ಕೊಲೆ ಮಾಡಲಾಗಿದೆ. ಈ ತಿಂಗಳ
ನವದೆಹಲಿ: 350 ರೂ.ಗಾಗಿ 16 ವರ್ಷದ ಹುಡುಗನೊಬ್ಬ 18 ವರ್ಷದ ಯುವಕನ ಕತ್ತು ಕೊಯ್ತು ಭೀಕರವಾಗಿ ಕೊಲೆ ಮಾಡಿರುವ ಘಟನೆ ದೆಹಲಿಯ ಕಾಲೊನಿಯೊಂದರಲ್ಲಿ ನಡೆದಿದೆ. ಕೊಲೆ ಮಾಡಿದ ಬಳಿಕ ಹುಡುಗ ಅದೇ ಶವದ ಮೇಲೆ ನೃತ್ಯಮಾಡಿ ವಿಕೃತಿ ಮೆರೆದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈಶಾನ್ಯ ದೆಹಲಿಯ ಪ್ರದೇಶದ ಕಾಲೊನಿಯೊಂದರಲ್ಲಿ ಕೊಲೆ ನಡೆದಿದ್ದು,