ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...

ಇಂಫಾಲ: ಮಣಿಪುರದಲ್ಲಿ ಹಿಂಸಾಚಾರ ಮತ್ತೆ ಭುಗಿಲೆದ್ದಿದೆ. ರಾತ್ರೋರಾತ್ರಿ ಎಲ್ಲಾ ಜಿಲ್ಲೆಗಳಲ್ಲಿ ಇಂಟರ್ನೆಟ್​​ ಸ್ಥಗಿತಗೊಳಿಲಾಗಿದ್ದು, ಹಲವೆಡೆ ಕರ್ಫ್ಯೂ ಜಾರಿ ಮಾಡಲಾಗಿದೆ ಎಂದು ಭಾನುವಾರ ತಿಳಿದುಬಂದಿದೆ. ಭದ್ರತಾ ಪಡೆಗಳು ಮಣಿಪುರದ ಇಂಫಾಲ್ ಪಶ್ಚಿಮದ ಕ್ವಾಕೆಟಾಲ್ ಪ್ರದೇಶದಲ್ಲಿ ಮೈತೆಯಿ ಸಂಘಟನೆಯ ನಾಯಕ ಅರಾಂಬೈ ಟೆಂಗೋಲ್ ಅವರನ್ನು ಬಂಧಿಸಿದ್ದು ಇದು ಅವರ ಬೆಂಬಲಿಗರನ್ನು ಕೆರಳಿಸಿದೆ. ಇದರ

ಬೆಂಗಳೂರು:ಜೂ. 07: ದೇಶೀಯ ಕ್ರಿಕೆಟ್‌ನಲ್ಲಿನ ವೇತನ ವ್ಯವಸ್ಥೆಯ ಬಗ್ಗೆ ಭಾರತದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಾ, ಉತ್ತಮ ಪ್ರದರ್ಶನ ನೀಡುತ್ತಿದ್ದರೂ, ಅನೇಕ ಕ್ರಿಕೆಟಿಗರು ಸರಿಯಾದ ಮನ್ನಣೆ ಪಡೆಯದೆ ಕಡಿಮೆ ಸಂಬಳದೊಂದಿಗೆ ತಮ್ಮ ವೃತ್ತಿಜೀವನವನ್ನು ಕೊನೆಗೊಳಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಗುವಾಹಟಿ: ಲೋಕಸಭಾ ಸಂಸದ ಗೌರವ್ ಗೊಗೊಯ್ ಅವರು ಮಂಗಳವಾರ ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ ಮತ್ತು ಮುಂದಿನ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಅವರು ಪಕ್ಷವನ್ನು ಮುನ್ನಡೆಸಲು ಸಜ್ಜಾಗಿದ್ದಾರೆ. ರಾಜ್ಯದ ಪ್ರಮುಖ ವಿರೋಧ ಪಕ್ಷವನ್ನು ಮೂರು ವರ್ಷಗಳಿಗೂ ಹೆಚ್ಚು ಕಾಲ ಮುನ್ನಡೆಸಿದ್ದ ನಿರ್ಗಮಿತ ಅಧ್ಯಕ್ಷ ಭೂಪೇನ್ ಕುಮಾರ್ ಬೋರಾ ಅವರು ನೂತನ

ನವದೆಹಲಿ, ಜೂನ್ 03: ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಳವಾಗುತ್ತಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 4 ಸಾವಿರಕ್ಕೆ ಏರಿಕೆಯಾಗಿದೆ. ಗುಜರಾತ್​​ನಲ್ಲಿ ಅತಿ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಭಾರತದಲ್ಲಿ ಕೋವಿಡ್-19 ಪ್ರಕರಣಗಳಲ್ಲಿ ಗಮನಾರ್ಹ ಏರಿಕೆ ಕಂಡುಬರುತ್ತಿದ್ದು, ಜೂನ್ 2, 2025 ರ ಹೊತ್ತಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ

ಚಂಡೀಗಢ: ಪಂಜಾಬ್‌ನ ಶ್ರೀ ಮುಕ್ತ್ಸರ್ ಸಾಹಿಬ್‌ನಲ್ಲಿರುವ ಪಟಾಕಿ ತಯಾರಿಕೆ ಮತ್ತು ಪ್ಯಾಕೇಜಿಂಗ್ ಘಟಕದಲ್ಲಿ ಇಂದು ಶುಕ್ರವಾರ ಬೆಳಗಿನ ಜಾವ ಸಂಭವಿಸಿದ ಭೀಕರ ಸ್ಫೋಟದಲ್ಲಿ ಐವರು ವಲಸೆ ಕಾರ್ಮಿಕರು ಮೃತಪಟ್ಟು ಹಲವಾರು ಮಂದಿ ಗಾಯಗೊಂಡಿದ್ದಾರೆ. ಶ್ರೀ ಮುಕ್ತ್ಸರ್ ಸಾಹಿಬ್ ಜಿಲ್ಲೆಯ ಸಿಂಘಾವಲಿ-ಕೋಟ್ಲಿ ರಸ್ತೆಯಲ್ಲಿರುವ ಎರಡು ಅಂತಸ್ತಿನ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದೆ. ಲಂಬಿಯ ಉಪ

ಕುವೈತ್: ಮೇ 28: ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್ ಆರೋಗ್ಯದಲ್ಲಿ ಏರುಪೇರಾಗಿದೆ. ಬಿಜೆಪಿ ಸಂಸದ ಬೈಜಯಂತ್ ಪಾಂಡಾ ಜತೆ ಆಜಾದ್ ಕುವೈತ್​ಗೆ ತೆರಳಿದ್ದರು. ಆಪರೇಷನ್​ ಸಿಂಧೂರ್​ ಬಳಿಕ ಪಾಕಿಸ್ತಾನದ ಬಣ್ಣವನ್ನು ಜಗತ್ತಿನ ಮುಂದೆ ಬಯಲು ಮಾಡಲು ಗಲ್ಫ್ಟ್​ ರಾಷ್ಟ್ರಗಳಿಗೆ ಬಿಜೆಪಿ ಸಂಸದ ಬೈಜಯಂತ್

ಶಿಲ್ಲಾಂಗ್:ಮೇ 28: ಹನಿಮೂನ್ ಗೆಂದು ಇಂದೋರ್ ​ನಿಂದ ಮೇಘಾಲಯದ ಶಿಲ್ಲಾಂಗ್​ಗೆ ತೆರಳಿದ್ದ ದಂಪತಿ ನಾಪತ್ತೆಯಾಗಿದ್ದಾರೆ. ಕಾಡಿನ ಸಮೀಪ ಸ್ಕೂಟರ್ ಪತ್ತೆಯಾಗಿದೆ. ಈ ಘಟನೆಯು ಕುಟುಂಬ ಹಾಗೂ ಸ್ಥಳೀಯರಲ್ಲಿ ಆತಂಕ ಹುಟ್ಟುಹಾಕಿದೆ. ರಾಜಾ ರಘುವಂಶಿ ಎಂಬುವವರು ತಮ್ಮ ಪತ್ನಿ ಸೋನಮ್ ರಘುವಂಶಿ ಜತೆ ಶಿಲ್ಲಾಂಗ್ ತೆರಳಿದ್ದರು. ಮೇ 11ರಂದು ಅವರು

ನವದೆಹಲಿ: ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಟೀಮ್ ಇಂಡಿಯಾದಂತೆ ಒಟ್ಟಾಗಿ ಕೆಲಸ ಮಾಡಿದರೆ, ಯಾವುದೇ ಗುರಿ ಸಾಧಿಸಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಹೇಳಿದ್ದಾರೆ. ಇಂದು ದೆಹಲಿಯಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ನೀತಿ ಆಯೋಗದ 10ನೇ ಆಡಳಿತ ಮಂಡಳಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಅಭಿವೃದ್ಧಿಯ

ಜೈಪುರ: ಮೇ.20.ವೈವಾಹಿಕ ವಂಚನೆಯ ಕುತೂಹಲಕಾರಿ ಪ್ರಕರಣವೊಂದರಲ್ಲಿ , ಕೇವಲ ಏಳು ತಿಂಗಳಲ್ಲಿ ವಿವಿಧ ರಾಜ್ಯಗಳಲ್ಲಿ 25 ವಿಭಿನ್ನ ಪುರುಷರನ್ನು ಮದುವೆಯಾದ 32 ವರ್ಷದ ಮಹಿಳೆಯನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ. ಲೂಟಿಕೋರ ದುಲ್ಹನ್ ಎಂದೇ ಕುಖ್ಯಾತಿ ಪಡೆದಿರುವ ಆರೋಪಿ ಅನುರಾಧ ಪಾಸ್ವಾನ್‌ನನ್ನು ಸೋಮವಾರ ಭೋಪಾಲ್‌ನಲ್ಲಿ ಸವಾಯಿ ಮಾಧೋಪುರ್ ಪೊಲೀಸರು ಬಂಧಿಸಿದ್ದಾರೆ. ಅನುರಾಧಾ

ವಿಶಾಖಪಟ್ಟಣಂ: ಮಕ್ಕಳಿರುವ ಮನೆಯಲ್ಲಿ ಎಷ್ಟು ಎಚ್ಚರಿಕೆಯಿಂದ ಇದ್ದರೂ ಸಾಲದು. ಸಣ್ಣಪುಟ್ಟ ಸಂಗತಿಗಳನ್ನೂ ನಿರ್ಲಕ್ಷಿಸುವಂತಿಲ್ಲ. ಯಾಕೆಂದರೆ ಯಾವುದರಿಂದ ಯಾವಾಗ ಮಕ್ಕಳಿಗೆ ಅಪಾಯವಾಗುತ್ತೆ ಎನ್ನುವುದು ಗೊತ್ತೇ ಆಗುವುದಿಲ್ಲ. ಇಂತಹ ಒಂದು ಸಣ್ಣ ನಿರ್ಲಕ್ಷ್ಯದಿಂದಾಗಿ ಆಂಧ್ರಪ್ರದೇಶದಲ್ಲಿ ನಾಲ್ವರು ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. ಆಂಧ್ರಪ್ರದೇಶದ ವಿಜಯನಗರಂ (ವಿಜಿಯನಗರಂ) ಗ್ರಾಮೀಣ ಮಂಡಲದ ದ್ವಾರಪುಡಿ ಗ್ರಾಮದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ