ಬೆಳ್ತಂಗಡಿ:ರಾಷ್ಟ್ರೀಯ ಹೆದ್ದಾರಿಯ ಉಜಿರೆ-ಚಾರ್ಮಾಡಿ ರಸ್ತೆಯಲ್ಲಿ ಸೆ. 3ರಂದು ಲಾರಿ ಢಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸೆ. 4ರ ಸಂಜೆ ಮೃತಪಟ್ಟಿದ್ದಾರೆ. ಮೃತರನ್ನು ಕಡಿರುದ್ಯಾವರ ಗ್ರಾಮದ ಮಲ್ಲಡ್ಕ ಸಮೀಪದ ನಿವಾಸಿ ಪುರುಷೋತ್ತಮ ಅಲಿಯಾಸ್ ಬಾಲು (44) ಎಂದು ಗುರುತಿಸಲಾಗಿದೆ. ಮೃತರು ಕ್ವಾರಿ ಕಾರ್ಮಿಕರಾಗಿ
ನಂಬಿಸಿ, ಅಕ್ರಮ ದೈಹಿಕ ಸಂಬಂಧ ಬೆಳೆಸಿ ಸಹಪಾಠಿ ವಿದ್ಯಾರ್ಥಿನಿಯನ್ನು ಗರ್ಭವತಿಯನ್ನಾಗಿ ಮಾಡಿ ಮದುವೆಯಾಗಲು ನಿರಾಕರಿಸಿ ವಂಚಿಸಿರುವ ಆರೋಪದಲ್ಲಿ ಬಂಧಿತನಾಗಿ ನ್ಯಾಯಾಂಗ ಬಂಧನದಲ್ಲಿದ್ದ ಬಪ್ಪಳಿಗೆಯ 21 ವರ್ಷದ ಶ್ರೀಕೃಷ್ಣ ಜೆ ರಾವ್‌ಗೆ ಕರ್ನಾಟಕ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ. ನ್ಯಾಯಾಲಯದಲ್ಲಿ ಜಾಮೀನಿಗೆ ಸಂಬಂಧಿಸಿದ ಭದ್ರತೆ ಮತ್ತಿತರ ಪ್ರಕ್ರಿಯೆಗಳನ್ನು ಸೆ.4ರಂದು ಪೂರ್ಣಗೊಂಡ ನಂತರ
ಮುಂಬಯಿ: 34 ವಾಹನಗಳಲ್ಲಿ 400 ಕೆಜಿ ಆರ್ಡಿಎಕ್ಸ್ ಹೊತ್ತ ಮಾನವ ಬಾಂಬ್‌ಗಳನ್ನು ಇರಿಸಲಾಗಿದೆ ಎಂದು ಅನಾಮಿಕ ವ್ಯಕ್ತಿಯೊಬ್ಬ ಬೆದರಿಕೆ ಸಂದೇಶ ಕಳುಹಿಸಿದ್ದಾನೆ. ಸಂಚಾರ ಪೊಲೀಸ್ ಠಾಣೆಗೆ ಬೆದರಿಕೆ ವಾಟ್ಸಾಪ್ ಸಂದೇಶ ಬಂದಿದ್ದು ನಗರದ್ಯಾಂತ ಭಾರೀ ಕಟ್ಟೆಚ್ಚರವಹಿಸಿದ್ದಾರೆ. ಲಷ್ಕರ್-ಎ-ಜಿಹಾದಿ ಎಂಬ ಸಂಘಟನೆಯಿಂದ ಈ ಬೆದರಿಕೆ ಬಂದಿದ್ದು, ರಾಜ್ಯಾದ್ಯಂತ ಭದ್ರತೆಯನ್ನು ಹೆಚ್ಚಿಸಲಾಗಿದೆ. ಮಾನವ ಬಾಂಬ್‌ಗಳನ್ನು
ಉಡುಪಿ:ಉಡುಪಿಯ ಶ್ರೀಕೃಷ್ಣಮಠದಲ್ಲಿ ಶ್ರೀಕೃಷ್ಣಜನ್ಮಾಷ್ಟಮಿಗೆ ಸಕಲ ಸಿದ್ದತೆಯನ್ನು ನಡೆಸಲಾಗುತ್ತಿದೆ.ಈ ಬಾರಿ ಸೆ.14-15ರ೦ದು ಶ್ರೀಕೃಷ್ಣಜನ್ಮಾಷ್ಟಮಿ ಹಾಗೂ ವಿಟ್ಲಪಿ೦ಡಿ ಕಾರ್ಯಕ್ರಮವು ಜರಗಲಿದೆ.ಈಗಾಲೇ ರಥಬೀದಿಯಲ್ಲಿರುವ ಕನಕಗೋಪುರದೆದುರು ಗುರ್ಜಿಯನ್ನು ಊರುವ ಕೆಲಸಕ್ಕೆ ಚಾಲನೆ ದೊರಕಿದೆ. ಈ ಬಾರಿ ಶ್ರೀಕೃಷ್ಣಜನ್ಮಾಷ್ಟಮಿಯನ್ನು ಮ೦ಡಲೋತ್ಸವವನ್ನಾಗಿ ಆಚರಿಸಲಾಗುತ್ತಿದೆ.ಈಗಾಗಲೇ ಒ೦ದು ತಿ೦ಗಳಕಾಲ ವಿವಿಧ ಸ್ಪರ್ಧೆಯನ್ನು ಸೇರಿದ೦ತೆ ಧಾರ್ಮಿಕ ಸಭಾಕಾರ್ಯಕ್ರಮವು ನಿರ೦ತರವಾಗಿ ಮಠದ ರಾಜಾ೦ಗಣದಲ್ಲಿ ನಡೆಸಲಾಗುತ್ತಿದೆ. ಮಠದ
ಉಡುಪಿ:ಮರೆಯಲಾಗದ ರತ್ನ ನಮ್ಮ ಹೆಮ್ಮೆಯ ಓಸ್ಕರ್ ಅಣ್ಣನ ಪುಣ್ಯ ತಿಥಿಯಂದು ನಮ್ಮ ಕಾರ್ಯಕರ್ತರಿಗೆ ಅವರ ಶಾಶ್ವತ ಸವಿ ನೆನಪಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಉಡುಗೊರೆ ಗೆಲ್ಲಿರಿ. ಒಂದು ರೀಲ್ಸ್ 90 ಸೆಕೆಂಡ್ಸ್ ಮೀರದಂತಿರಬೇಕು.ರೀಲ್ಸ್ ಕಳಿಸಲು ಕೊನೆಯ ದಿನಾಂಕ : 07-09-25. ನಿಮ್ಮ ರೀಲ್ಸ್ ಕಳಿಸಬೇಕಾದ ಮೊಬೈಲ್ ಸಂಖ್ಯೆ
ಆಲಪ್ಪುಳ: ಕೇರಳದ ಕರಾವಳಿ ಜಿಲ್ಲೆಯ ಹರಿಪಾದ್‌ನಲ್ಲಿರುವ ದೇವಸ್ಥಾನದಲ್ಲಿರುವ ಆನೆಯು ಇಬ್ಬರ ಮಾವುತರ ಮೇಲೆ ದಾಳಿ ನಡೆಸಿದ್ದು, ಓರ್ವ ಸಾವಿಗೀಡಾಗಿದ್ದು, ಮತ್ತೋರ್ವ ಮಾವುತ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಮೃತರನ್ನು ನೂರಾನಾಡ್‌ನ ಎಡಪ್ಪೊನ್ಮುರಿಯ ನಿವಾಸಿ ಮುರಳೀಧರನ್ ನಾಯರ್ (53) ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಈತ ಹರಿಪಾದ್‌ನ ಸುಬ್ರಹ್ಮಣ್ಯ ದೇವಸ್ಥಾನದ ಒಡೆತನದ
ಉಡುಪಿ:ದೇಶದೆಲ್ಲೆಡೆ ಶ್ರೀಗೌರಿಗಣೇಶನ ಹಬ್ಬದ ಸ೦ಭ್ರಮದ ವಾತಾವರಣವು ನಿರ್ಮಾಣವಾಗಿದೆ.ಶಾ೦ತಿಯುತವಾಗಿ ಈ ಹಬ್ಬವು ನಡೆಯಲೆನ್ನುವುದೇ ಎಲ್ಲಾ ಭಾರತೀಯ ಆಸೆಯಾಗಿದೆ.ಯಾವುದೇ ಕಾರ್ಯಕ್ರಮವು ನಡೆಯುವುದಾರೆ ಶ್ರೀಗಣೇಶನ ನಾಮ ಸ್ಮರಣೆಯಿ೦ದಲೇ ಆರ೦ಭವಾಗುವುದು. ಈ ಹಬ್ಬವನ್ನುಎಲ್ಲಾ ಧರ್ಮದವರು ಕೂಡಿಕೊ೦ಡು ಮಾಡುತ್ತಾರೆ. ಶ್ರೀಗಣೇಶನ ವಿಗ್ರಹ ರಚಿಸುವವ ಕಲಾವಿದರು ನಿರ೦ತರವಾಗಿ ವಿಗ್ರಹ ರಚನೆಯಲ್ಲಿ ರಾತ್ರೆ-ಹಗಲೆನ್ನದೇ ನಿರ್ಮಾಣಕಾರ್ಯಕ್ರಮದಲ್ಲಿ ತೊಡಗಿದ್ದಾರೆ.
ಮಂಗಳೂರು :ಪಾಲಿಕೆ ಆಡಳಿತ ನಿದ್ರಿಸುತ್ತಿರುವಾಗ ಸಾಮಾನ್ಯ ನಾಗರಿಕರು ಸಮಾಜದ ಉನ್ನತಿಗೆ ಕೈಜೋಡಿಸುವ ದೃಷ್ಟಾಂತಗಳು ಜನರಿಂದ ಶ್ಲಾಘಿಸಲ್ಪಡುತ್ತಿದೆ. ಕರಾವಳಿ ವೃತ್ತದ ಬಳಿ, ಆಟೋ ಚಾಲಕ ಬೂಬಣ್ಣ ಮಾದರಿ ಕೆಲಸವೊಂದನ್ನು ಮಾಡಿದ್ದಾರೆ. ಸರಕಾರ ಅಥವಾ ಮಹಾನಗರ ಪಾಲಿಕೆ ಮಾಡಬೇಕಾದ ಕೆಲಸವನ್ನು, ತಮ್ಮ ದೈನಂದಿನ ದುಡಿಮೆಯಿಂದ ಬದುಕು ಸಾಗಿಸುತ್ತಿರುವ ಬೂಬಣ್ಣ ತಮ್ಮ ಹೊಣೆಗಾರಿಕೆಯಂತೆ ನಿರ್ವಹಿಸಿದ್ದು,
(ಆರೋಪಿಗಳಾದ ಅಜಿತ್, ಅಕ್ಷೇಂದ್ರ ಮತ್ತು ಪ್ರದೀಪ್) ಉಡುಪಿ: ವ್ಯಕ್ತಿಯೋರ್ವನನ್ನು ಮೂವರು ಸ್ನೇಹಿತರೇ ಬರ್ಬರವಾಗಿ ಕೊನೆ ಮಾಡಿದ ಘಟನೆ ಉಡುಪಿಯ ಪುತ್ತೂರಿನ ಸುಬ್ರಹ್ಮಣ್ಯ ನಗರದ ಲಿಂಗೋಟ್ಟುಗುಡ್ಡೆಯಲ್ಲಿ ಆಗಸ್ಟ್ 12ರಂದು ರಾತ್ರಿ ನಡೆದಿದೆ. ಮೃತ ವ್ಯಕ್ತಿಯನ್ನು ವಿನಯ್ ದೇವಡಿಗ (35) ಎಂದು ಗುರುತಿಸಲಾಗಿದೆ. ಅವರು ವೃತ್ತಿಯಲ್ಲಿ ಪೈಂಟರ್ ಆಗಿ ಕೆಲಸ ಮಾಡುತ್ತಿದ್ದರು. ಪೊಲೀಸರ ಪ್ರಕಾರ, ಆಗಸ್ಟ್