ಮಂಗಳೂರು:ಮೇ 28.ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾದಿಂದ ಪ್ರಯಾಣಿಕನೊಬ್ಬನಿಂದ 1.69 ಕೋಟಿ ರೂ.ಮೌಲ್ಯದ ವಜ್ರದ ಹರಳುಗಳನ್ನು ಜಪ್ತಿ ಮಾಡಲಾಗಿದೆ. ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಭದ್ರತಾ ತಪಾಸಣೆಯ ವೇಳೆ ಸಿಐಎಸ್ಎಫ್ ಸಿಬಂದಿ ದುಬೈಗೆ ತೆರಳುತ್ತಿದ್ದ ಪ್ರಯಾಣಿಕರನ್ನು ತಡೆದಿದ್ದು, ಬೆಲೆಬಾಳುವ ಹರಳುಗಳಿರುವ ಶಂಕೆಯ ಮೇರೆಗೆ ಆತನ ಒಳ ಉಡುಪಿನಲ್ಲಿ ಬಚ್ಚಿಟ್ಟಿದ್ದ 2 ಪೌಚ್‌ಗಳನ್ನು ವಶಕ್ಕೆ
ಮಂಗಳೂರು:ಮೇ 27, ಸರ್ಕಾರ ಬದಲಾದ ಬೆನ್ನಲ್ಲೇ ಹತ್ಯೆಗೀಡಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಪತ್ನಿಗೆ ಅನುಕಂಪದ ಆಧಾರದ ಮೇಲೆ ನೀಡಿದ್ದ ನೌಕರಿಗೆ ಕುತ್ತು ಬಂದಿದೆ.ಮುಖ್ಯಮಂತ್ರಿಗಳ ವಿಶೇಷ ಅಧಿಕಾರದಲ್ಲಿ ಸರ್ಕಾರಿ ಉದ್ಯೋಗಕ್ಕೆ ತಾತ್ಕಾಲಿಕವಾಗಿ ನೇಮಕಗೊಂಡಿದ್ದ ದಿ.ಪ್ರವೀಣ್ ನೆಟ್ಟಾರ್ ಅವರ ಪತ್ನಿ ನೂತನ ಕುಮಾರಿ ಅವರ ನೇಮಕಾತಿಯನ್ನು ಸರ್ಕಾರ ರದ್ದು ಮಾಡಿದೆ. ಹಿಂದಿನ ಸರ್ಕಾರ
ಬೆಂಗಳೂರು: ಮಾಜಿ ಸಚಿವ ಯು.ಟಿ ಖಾದರ್ ಅವರು ವಿಧಾನಸಭೆ ಸ್ಪೀಕರ್ ಆಗಿ ಕಾರ್ಯನಿರ್ವಹಿಸಲಿದ್ದು, ಇಂದು ಅಧಿಕೃತವಾಗಿ ಖಾದರ್ ನಾಮಪತ್ರ ಸಲ್ಲಿಸಿದ್ದಾರೆ. ವಿಧಾನಸಭೆ ಕಾರ್ಯದರ್ಶಿ ಕಚೇರಿಯಲ್ಲಿ ಸ್ಪೀಕರ್ ಸ್ಥಾನಕ್ಕೆ ಶಾಸಕ ಯು.ಟಿ.ಖಾದರ್ ನಾಮಪತ್ರ ಸಲ್ಲಿಸಿದ್ದು, ನಾಮಪತ್ರ ಸಲ್ಲಿಕೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವ ಜಮೀರ್ ಅಹ್ಮದ್, ಶಾಸಕ ಅಜಯ್
ಉಡುಪಿ:ಪ್ರಧಾನಿ ನರೇಂದ್ರ ಮೋದಿಯವರು ಚುನಾವಣಾ ಪ್ರಚಾರಕ್ಕಾಗಿ ನಮ್ಮ ರಾಜ್ಯಕ್ಕೆ 18 ಬಾರಿ 18 ಜಿಲ್ಲೆಗಳಿಗೆ ಆಗಮಿಸಿದ್ದು 17 ಜಿಲ್ಲೆಯ ಮತದಾರರು ಮೋದಿಯವರ ಬೆಲೆ ಏರಿಕೆ ನೀತಿಯನ್ನು ಖಂಡಿಸಿ ಸಂಪೂರ್ಣವಾಗಿ ಬಿಜೆಪಿಯನ್ನು ಸೋಲಿಸಿರುತ್ತಾರೆ. ಈ ಹಿಂದೆ ನಮ್ಮ ನಾಯಕ ಸನ್ಮಾನ್ಯ ರಾಹುಲ್ ಗಾಂಧಿಯವರನ್ನು ಹೋದಲ್ಲೆಲ್ಲ ಕಾಂಗ್ರೆಸ್ ಪಕ್ಷದ ಸೋಲುತ್ತಿದೆ ಎಂದು ಅಣಕಿಸುತ್ತಿದ್ದ
ಮಂಗಳೂರು:ಮೇ 17. ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂದೆ ಖಾಸಗಿ ಬಸ್ ಏಕಾಏಕಿ ಹೊತ್ತಿ ಉರಿದಿದ್ದು ಬಸ್ಸಿನಲ್ಲಿದ್ದ ಮೂವರು ಜಿಗಿದು ಜೀವ ರಕ್ಷಿಸಿಕೊಂಡಿರುವ ಪಾರಾಗಿರುವ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ. ಸುರತ್ಕಲ್ ಸಮೀಪದ ಓಎಂಪಿಎಲ್ ಗೆ ಸಿಬಂದಿಗಳನ್ನು ಕರೆದೊಯ್ಯುವ ಬಸ್ಸು ಮಧ್ಯಾಹ್ನ 2.45ರ ಸುಮಾರಿಗೆ ಕಟೀಲು ದೇವಸ್ಥಾನದ ಎದುರು ರಾಜ್ಯ ಹೆದ್ದಾರಿಯಲ್ಲಿ
ಮಂಗಳೂರು: ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಹೀನಾಯ ಸೋಲಿನಿಂದ ಆಕ್ರೋಶಗೊಂಡಿರುವ ಕಾರ್ಯಕರ್ತರು ಪಕ್ಷದ ನಾಯಕರಿಗೆ ಚಪ್ಪಲಿಹಾರ ಹಾಕುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೌದು.. ರಾಜ್ಯದ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಪುತ್ತೂರು ಸೇರಿದಂತೆ ರಾಜ್ಯದೆಲ್ಲೆಡೆ ಬಿಜೆಪಿ ಹೀನಾಯ ಸೋಲನುಭವಿಸುವ ಮೂಲಕ ತೀವ್ರ ಮುಖಭಂಗಕ್ಕೆ ಒಳಗಾಗಿದೆ. ಇದರಿಂದ ಬೇಸತ್ತ ಕಾರ್ಯಕರ್ತರು
ಮಂಗಳೂರು: ಗೂಡ್ಸ್ ರೈಲಿಗೆ ಸಿಲುಕಿ 17 ಎಮ್ಮೆಗಳು ಮೃತಪಟ್ಟಿರುವ ದಾರುಣ ಘಟನೆ ಭಾನುವಾರ ಮಧ್ಯರಾತ್ರಿ ಜೋಕಟ್ಟೆ ಅಂಗರಗುಂಡಿ ಬಳಿ ನಡೆದಿದೆ. ಗೂಡ್ಸ್ ರೈಲು ಕಂಕನಾಡಿ ನಿಲ್ದಾಣದಿಂದ ಮಂಗಳೂರು ಕೆಮಿಕಲ್ಸ್ ಅಂಡ್ ಫರ್ಟಿಲೈಸರ್ಸ್(ಎಂಸಿಎಫ್) ಕಡೆಗೆ ತೆರಳುತ್ತಿದ್ದ ವೇಳೆ ಈ ಭೀಕರ ಅಪಘಾತ ನಡೆದಿದೆ ಎಂದು ರೈಲ್ವೆ ಪೊಲೀಸ್ ಮೂಲಗಳು ತಿಳಿಸಿವೆ. ಸ್ಥಳಕ್ಕೆ ದೌಡಾಯಿಸಿದ ಕದ್ರಿ
ಸುರತ್ಕಲ್; ಮೇ 13 : ಆಕಸ್ಮಿಕ ಬೆಂಕಿ ಅವಘಡಕ್ಕೆ ತುತ್ತಾಗಿ ಕರಾವಳಿ ಸ್ಪೋಟ್ಸ್ ಮಳಿಗೆ ಹೊತ್ತಿ ಉರಿದ ಘಟನೆ ಸುರತ್ಕಲ್‌ನಲ್ಲಿ ನಡೆದಿದೆ. ಸ್ಥಳಕ್ಕೆ ಅಗ್ನಿಶಾಮಕ ಇಲಾಖೆ ದೌಡಾಯಿಸಿದ್ದು ಅಗ್ನಿಶಾಮಕ ಇಲಾಖೆಯಿಂದ ಬೆಂಕಿನಂದಿಸುವ ಕಾರ್ಯಾಚರಣೆ ನಡೆಯುತ್ತಿದೆ. ಇನ್ನು ನೀರು ಹಾಯಿಸಿದಷ್ಟು ಮಳಿಗೆ ಹೊತ್ತಿ ಉರಿಯುತ್ತಿದೆ ಎಂದು ತಿಳಿದು ಬಂದಿದೆ.
ಸುರತ್ಕಲ್:ಮೇ 12. ಸುರತ್ಕಲ್‌ನ ಮುಕ್ಕದಲ್ಲಿ ಖಾಸಗಿ ಮತ್ತು ಸರ್ಕಾರಿ ಬಸ್ ಗಳ ನಡುವೆ ನಡೆದ ಅಪಘಾತದಲ್ಲಿ ಸುಮಾರು 30ಕ್ಕೂ ಅಧಿಕ ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ನಡೆದಿದೆ. ಎರಡು ಬಸ್ ಗಳು ಮಂಗಳೂರು ಕಡೆಗೆ ಸಂಚರಿಸುತ್ತಿದ್ದು, ಮಳೆಯಾಗುತ್ತಿದ್ದ ಪರಿಣಾಮ ನಿಯಂತ್ರಣ ಕಳೆದುಕೊಂಡ ಖಾಸಗಿ ಬಸ್ ಎದುರಿನಿಂದ ಹೋಗುತ್ತಿದ್ದ ಸರ್ಕಾರಿ ಬಸ್
ಉಡುಪಿಯ ಶ್ರೀಕೃಷ್ಣಾಪುರ ಮಠ,ಅದಮಾರು ಮಠ,ಪುತ್ತಿಗೆ ಮಠ,ಪಲಿಮಾರು ಮಠ,ಪೇಜಾವರ ಮಠ,ಕಾಣಿಯೂರು ಮಠ,ಸೋದೆ ಮಠ,ಶಿರೂರು ಮಠದ ಮಠಾಧೀಶರು ನಗರದ ವಿವಿಧ ಮತಗಟ್ಟೆಯಲ್ಲಿ ಮತವನ್ನು ಚಲಾಯಿಸಲಿದ್ದಾರೆ. ತಮ್ಮತಮ್ಮ ಸಮಯದ ಅನುಕೂಲಕ್ಕೆ ಸರಿಯಾಗಿ ಸ್ವಾಮಿಯವರು ಮತದಾನವನ್ನು ಚಲಾಯಿಸಲಿದ್ದಾರೆ. ಶ್ರೀಕೃಷ್ಣಾಪುರ ಮಠ ಶ್ರೀವಿದ್ಯಾಸಾಗರ ತೀರ್ಥಶ್ರೀಪಾದರು ,ಅದಮಾರು ಶ್ರೀವಿಶ್ವಪ್ರಿಯ ತೀರ್ಥಶ್ರೀಪಾದರು ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥಶ್ರೀಪಾದರು ಹಾಗೂ ಅದಮಾರು ಮಠದ