ಕಾಸರಗೋಡು:ಜಿಲ್ಲೆಯಲ್ಲಿ ಬುಧವಾರ , ಗುರುವಾರ ಬೀಸಿದ ಸುಂಟರಗಾಳಿ ಹಾಗೂ ಮಳೆಗೆ ಅಪಾರ ಹಾನಿ ಉಂಟಾಗಿದ್ದು , ಹಲವು ಮರಗಳು , ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿದ್ದು, ವಾಹನ ಮನೆಗಳಿಗೆ ಹಾನಿ ಉಂಟಾಗಿದೆ.
ನಿಲುಗಡೆ ಗೊಳಿಸಿದ್ದ ವಾಹನಗಳ ಮೇಲೂ ಮರಗಳು ಉರುಳು ಬಿದ್ದಿವೆ. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ವಿದ್ಯುತ್ ಸಂಪರ್ಕ ಅಸ್ತವ್ಯಸ್ತಗೊಂಡಿದೆ.