ನೆಲಮಂಗಲ, ಜನವರಿ 10: ರಿಯಲ್ ಎಸ್ಟೇಟ್ ಉದ್ಯಮಿಗಳ ಪಾರ್ಟಿಗೆ ಕಾಡು ಪ್ರಾಣಿಗಳನ್ನು ಬೇಟೆಯಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬೆಂಗಳೂರು ಸಂಚಾರಿ ಅರಣ್ಯಾಧಿಕಾರಿಗಳ ವಿಶೇಷ ಕಾರ್ಯಚರಣೆ ಮಾಡಿ ನೆಲಮಂಗಲದ ಶಾರ್ಪ್ ಶೂಟರ್ ಶ್ರೀನಿವಾಸ್(46), ಹನುಮಂತರಾಜು (44), ಮತ್ತು ರಾಮನಗರದ ಮುನಿರಾಜು(38) ಬಂಧಿತರು. ಅರಣ್ಯಾಧಿಕಾರಿಗಳನ್ನು ಕಂಡು ಥಾರ್ ಜೀಪ್ನಲ್ಲಿ ಆರೋಪಿಗಳು ಪರಾರಿಯಾಗುತ್ತಿದ್ದರು. 6 ಕಿ. ಮೀ
ಉಡುಪಿಯ ತೆ೦ಕಪೇಟೆಯಲ್ಲಿನ ಇತಿಹಾಸ ಪ್ರಸಿದ್ಧ ದೇವಾಲಯವಾದ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ "ವೈಕು೦ಠ ಏಕಾದಶಿ"ಯ ಪ್ರಯುಕ್ತ ಶುಕ್ರವಾರದ೦ದು ಶ್ರೀದೇವರಿಗೆ ವಿಶೇಷ ಹೂವಿನ ಅಲ೦ಕಾರವನ್ನು ಅರ್ಚಕರಾದ ದಯಾಘನ್ ಭಟ್ ರವರು ನೆರವೇರಿಸಿದರು.ನ೦ತರ ಬೆಳಿಗ್ಗೆಯಿ೦ದ ಏಕಾದಶಿಯ ಪ್ರಯುಕ್ತ ಭಜನಾ ಕಾರ್ಯಕ್ರಮವು ಸಾಯ೦ಕಾಲದವರೆಗೆ ನಡೆಸಲಾಯಿತು.
ಉಡುಪಿ:ಉಡುಪಿಯ ಕವಿಮುದ್ದಣ್ಣ ಮಾರ್ಗದಲ್ಲಿನ ಶ್ರೀಭಗವಾನ್ ನಿತ್ಯಾನ೦ದ ಸ್ವಾಮಿ ಮ೦ದಿರ ಮಠದ ಇದರ ದ್ವಿತೀಯ ವರ್ಧ೦ತಿ ಉತ್ಸವ ಮತ್ತು ಪ್ರಾಣಪ್ರತಿಷ್ಠಾ ಮಹೋತ್ಸವವು ಇದೇ ತಿ೦ಗಳ ಜನವರಿ16ರ೦ದು ನಡೆಯಿದೆ ಎ೦ದು ಮ೦ದಿರ ಪತ್ರಿಕಾಪ್ರಕಟಣೆಯು ತಿಳಿಸಿದೆ. ಈ ಬಗ್ಗೆ ಗುರುವಾರದ೦ದು ಮ೦ದಿರದಲ್ಲಿ ಪೂರ್ವಭಾವಿ ಸಭೆಯಲ್ಲಿ ಕಾರ್ಯಕ್ರಮದ ರೂಪುರೇಷೆಯ ಬಗ್ಗೆ ಟ್ರಸ್ಟಿಗಳ ಉಪಸ್ಥಿತಿಯಲ್ಲಿ ಸಮಿತಿಯ ಸದಸ್ಯರೊ೦ದಿಗೆ
ಉಡುಪಿ:ಜ.10: ಪರ್ಯಾಯ ಶ್ರೀಪುತ್ತಿಗೆಮಠದ ಆಶ್ರಯದಲ್ಲಿ ವಾರ್ಷಿಕ ಸಪ್ತೋತ್ಸವ ಕಾರ್ಯಕ್ರಮ ಗುರುವಾರದ೦ದು ಪ್ರಾರಂಭ ಗೊಂಡಿದೆ. ಮಧ್ವ ಸರೋವರದಲ್ಲಿ ತೆಪ್ಪೋತ್ಸವದೊ೦ದಿಗೆ ನಡೆದು ಬಳಿಕ ಎರಡು ರಥಗಳ ರಥೋತ್ಸವ ನಡೆಯಿತು.ಈ ಸ೦ದರ್ಭದಲ್ಲಿ ಆಕರ್ಷಕ ಸುಡುಮದ್ದನ್ನು ಸುಡಲಾಯಿತು. ವಾರ್ಷಿಕ ಸಪ್ತೋತ್ಸವ ಇಂದಿನಿಂದ ಜ.15ರವರೆಗೆ ನಡೆಯಲಿದೆ. ಜ.14ರಂದು ಮಕರ ಸಂಕ್ರಮಣದಂದು ಮೂರು ತೇರು ಉತ್ಸವ ನಡೆದರೆ, ಜ.15ರಂದು
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಗಳೆಲ್ಲರೂ ಇಂದು (ಜನವರಿ 10) ಬೆಂಗಳೂರಿನ ಸಿಸಿಎಚ್ 57ರ ಕೋರ್ಟ್ಗೆ ಹಾಜರಾಗಿದ್ದಾರೆ. ಪವಿತ್ರಾ ಗೌಡ, ಪ್ರದೋಶ್ ಸೇರಿದಂತೆ ಹಲವು ಆರೋಪಿಗಳು ನ್ಯಾಯಾಲಯಕ್ಕೆ ಮೊದಲೇ ಹಾಜರಾಗಿದ್ದರು. ನಟ ದರ್ಶನ್ ಮಾತ್ರ ತುಸು ತಡವಾಗಿ ನ್ಯಾಯಾಲಯದ ಬಳಿ ಬಂದರು. ಜಾಮೀನು ದೊರೆತ ಬಳಿಕ ಇದೇ ಮೊದಲ
ಬೆಂಗಳೂರು, ಜನವರಿ 09: ಬಿಬಿಎಂಪಿ ವ್ಯಾಪ್ತಿಯಲ್ಲಿ ಪೌರಕಾರ್ಮಿಕರ ಅಂತಿಮ ಆಯ್ಕೆ ಪಟ್ಟಿಯಲ್ಲಿ ಆಯ್ಕೆ ಮಾಡಿರುವ ಪೌರಕಾರ್ಮಿಕರಿಗೆ ಮಾರ್ಚ್ 2025ರ ಅಂತ್ಯದೊಳಗಾಗಿ ನೇಮಕಾತಿ ಆದೇಶವನ್ನು ನೀಡಲಾಗುವುದೆಂದು ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ತಿಳಿಸಿದರು. ಪೌರಕಾರ್ಮಿಕರ ಪಿತಾಮಹರಾದ ಐ.ಪಿ.ಡಿ ಸಾಲಪ್ಪ ರವರ ಜನ್ಮ ದಿನಾಚರಣೆ ಅಂಗವಾಗಿ ಪಾಲಿಕೆ ಕೇಂದ್ರ ಕಛೇರಿಯ
ಕೋಲಾರ, ಜನವರಿ 09: ತಮಿಳುನಾಡಿನ ರಾಣಿಪೇಟೆ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕೋಲಾರದ ನಾಲ್ವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಕೆಎಸ್ಆರ್ಟಿಸಿ ಬಸ್ ಹಾಗೂ ಕರ್ನಾಟಕದ ಕ್ಯಾಂಟರ್ ನಡುವೆ ಅಪಘಾತ ಸಂಭವಿಸಿದೆ. ಕ್ಯಾಂಟರ್ನಲ್ಲಿದ್ದ ನಾಲ್ವರು ಮತ್ತು ಕೆಎಸ್ಆರ್ಟಿಸಿ ಬಸ್ ಚಾಲಕ ಮೃತಪಟ್ಟಿದ್ದಾರೆ. ಕೆಎಸ್ಆರ್ಟಿಸಿ ಬಸ್ನಲ್ಲಿದ್ದ ಓರ್ವ ಮಹಿಳೆ ಗಂಭೀರವಾಗಿ
ಬೆಂಗಳೂರು:ಜ.09:ಅತ್ಯಾಚಾರ ಪ್ರಕರಣದಲ್ಲಿ ಬಂಧನದಲ್ಲಿರುವ ಪ್ರಜ್ವಲ್ ರೇವಣ್ಣ ಅವರಿಗೆ ಹೈಕೋರ್ಟ್ ಸದ್ಯ ತಾತ್ಕಾಲಿಕ ರಿಲೀಫ್ ನೀಡಿದೆ. ಪ್ರಕರಣ ರದ್ದು ಕೋರಿ ಪ್ರಜ್ವಲ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಆರೋಪ ನಿಗದಿ ಮಾಡದಂತೆ ಹೈಕೋರ್ಟ್ನ ನ್ಯಾ.ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠ ತಡೆ ನೀಡಿದೆ. ಜ.13ಕ್ಕೆ ವಿಚಾರಣಾಧೀನ ಕೋರ್ಟ್ನಲ್ಲಿ ಆರೋಪ ನಿಗದಿಗೆ ನಿಗದಿಯಾಗಿತ್ತು. ಸದ್ಯ
ತಿರುಪತಿ: ಆಂಧ್ರ ಪ್ರದೇಶದ ತಿರುಪತಿಯಲ್ಲಿ ಜನವರಿ 8ರಂದು ಬುಧವಾರ ನಡೆದ ಭೀಕರ ಕಾಲ್ತುಳಿತ ಪ್ರಕರಣದಲ್ಲಿ ಸಾವಿಗೀಡಾದವರಿಗೆ ರಾಜ್ಯ ಸರ್ಕಾರದ ಮುಜುರಾಯಿ ಇಲಾಖೆ ತಲಾ 25 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ತಿರುಪತಿಯಲ್ಲಿ ಮೊದಲ ಬಾರಿಗೆ ವ್ಯಾಪಕ ಕಾಲ್ತುಳಿತ ಸಂಭವಿಸಿ ಕರ್ನಾಟಕದ ಮೂಲದ ಓರ್ವ ಮಹಿಳೆ ಸೇರಿದಂತೆ ಬರೊಬ್ಬರಿ 6 ಮಂದಿ ಸಾವನ್ನಪ್ಪಿದ್ದು,
ಸುರತ್ಕಲ್: ಈಜಲು ಸಮುದ್ರಕ್ಕೆ ಇಳಿದಿದ್ದ ನಾಲ್ಕು ಮಂದಿ ಯುವಕರ ಪೈಕಿ ಮೂವರು ನೀರುಪಾಲಾಗಿದ್ದು, ಓರ್ವನನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ ಘಟನೆ ಕುಳಾಯಿ ಜೆಟ್ಟಿ ಬಳಿಯ ಸಮುದ್ರ ತೀರದಲ್ಲಿ ಬುಧವಾರ ವರದಿಯಾಗಿದೆ. ಮೃತರನ್ನು ಚಿತ್ರದುರ್ಗ ಜಿಲ್ಲೆಯ ಉಪ್ಪರಿಗೇನಹಳ್ಳಿ ನಿವಾಸಿ ಶಿವಲಿಂಗಪ್ಪ ಎಂಬವರ ಪುತ್ರ ಮಂಜುನಾಥ್ ಎಸ್ (31), ಶಿವಮೊಗ್ಗ ಜಿಲ್ಲೆಯ ಶಿವಕುಮಾರ್