ಇದುವರಗೆ ಬಾಯಿಗೆ ಬ೦ದ೦ತೆ ಒ೦ದು ಪಕ್ಷವನ್ನು ಇನ್ನೊ೦ದು ಪಕ್ಷಕ್ಕೆ ಸಾವಲನ್ನು ಹಾಕಿ ನಮ್ಮ ಪಕ್ಷವೇ ಮು೦ದಿನ ದಿನದಲ್ಲಿ ರಾಜ್ಯದಲ್ಲಿ ಸರಕಾರವನ್ನು ನಡೆಸುತ್ತದೆ ಎ೦ದು ದೃಶ್ಯ ಮಾಧ್ಯಮ ಎದುರು ಏದೆಯುಬ್ಬಿಸಿಕೊ೦ಡು ಹೇಳಿಕೆಯನ್ನು ನೀಡುತ್ತಿದ್ದರು,ಆದರೆ ಇದೀಗ ಹಾರಾಟ-ಚಿರಾಟಕ್ಕೆ ಚುನವಾಣೆ ಘೋಷಣೆಯು ಬ್ರೇಕ್ ಹಾಕಿಬಿಟ್ಟಿದೆ.ಆಡಳಿತ ನಡೆಸುವವರು ಏದುರಾಳಿ ಪಕ್ಷಕ್ಕೆ ,ಏದುರಾಳಿಪಕ್ಷಕ್ಕೆ ವಿರೋಧ ಪಕ್ಷಗಳು
ಬೆಂಗಳೂರು: ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಕಣಕ್ಕಿಳಿಯುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಸುಳಿವು ನೀಡಿದ್ದಾರೆ. ಇದಕ್ಕೆ ಪಕ್ಷದಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ಉಲ್ಲೇಖಿಸಿದ ಮುಖ್ಯಮಂತ್ರಿ, 'ಸಿದ್ದರಾಮಯ್ಯ ವಿರುದ್ಧ ವರುಣಾ ಕ್ಷೇತ್ರದಲ್ಲಿ ನಾವು
ಉಡುಪಿ:ಉಡುಪಿಯಲ್ಲಿ ಇನ್ನೂ ಕೆಲವೊ೦ದು ಕಡೆಯಲ್ಲಿ ಜಾಹೀರಾತು,ಸ೦ಘಟನೆಯ ಕಾರ್ಯಕ್ರಮದ ಜಾಹೀರಾತು ಪ್ರಚಾರದ ಪೋಸ್ಟರ್ ಗಳು ರಾರಾಜಿಸುತ್ತಿದ್ದರೂ ಕಣ್ಣುಕಾಣದ೦ತಹ ಪರಿಸ್ಥಿತಿಯಲ್ಲಿ ಚುನಾವಣಾ ಅಧಿಕಾರಿಗಳು ಇದ್ದಾರೆ೦ಬುವುದಕ್ಕೆ ಇಲ್ಲಿದೆ ನೋಡಿ ಸ್ಪಷ್ಟದಾಖಲೆ. ಸಾರ್ವಜನಿಕ ಸ್ಥಳದಲ್ಲಿ ಹಾಕಲ್ಪಟ್ಟ ಬ್ಯಾನರ್ ಗಳು ಫ್ಲೆಕ್ಸ್ ಗಳನ್ನು ತೆಗೆಯಲಾಗಿದೆ ಎ೦ದು ಬೀಗುತ್ತಿರುವ ನಗರಸಭೆ ಮತ್ತು ಚುನಾವಣಾಧಿಕಾರಿಗಳಿಗೆ ಇಲ್ಲಿರುವ ಈ ಪ್ರಚಾರಫಲಕಗಳ ಬಗ್ಗೆ
ವ್ಯಾಟಿಕನ್:ಮಾ 30. ಪೋಪ್ ಫ್ರಾನ್ಸಿಸ್ ಅವರು ಇತ್ತೀಚಿನ ದಿನಗಳಲ್ಲಿ ಉಸಿರಾಟದ ತೊಂದರೆ ಅನುಭವಿಸಿದ ನಂತರ ಮಾರ್ಚ್ 29 ರಂದು ಶ್ವಾಸಕೋಶದ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಲ್ಲದೆ, ಚಿಕಿತ್ಸೆಗಾಗಿ ಕೆಲವು ದಿನಗಳ ಕಾಲ ಆಸ್ಪತ್ರೆಯಲ್ಲಿ ಉಳಿಯುತ್ತಾರೆ ಎಂದು ವ್ಯಾಟಿಕನ್ ಮಾಹಿತಿ ನೀಡಿದೆ. 86 ವರ್ಷದ ಪೋಪ್‌ಗೆ COVID-19 ಇಲ್ಲ ಎಂದು ವಕ್ತಾರ
ಬೀದರ್:ಮಾ 31. ರಾಮನವಮಿ ಶೋಭಾಯಾತ್ರೆ ವೇಳೆ ಶಾಸಕರೊಬ್ಬರು ಶ್ರೀರಾಮನ ತೊಡೆ ಮೇಲೆ ನಿಂತು ಕೊರಳಿಗೆ ಹೂವಿನ ಹಾರ ಹಾಕುತ್ತಿರುವ ಫೋಟೋ ವೈರಲ್ ಆಗಿದ್ದು, ಶ್ರೀರಾಮನಿಗೆ ಅವಮಾನ ಮಾಡಿದ ಆರೋಪ ಕೇಳಿ ಬಂದಿದೆ. ಬಸವಕಲ್ಯಾಣದಲ್ಲಿ ನಡೆದ ರಾಮನವಮಿ ಶೋಭಾಯಾತ್ರೆಯಲ್ಲಿ ಈ ಘಟನೆ ನಡೆದಿದೆ. ಶಾಸಕ ಶರಣು ಸಲಗರ ಅವರು ಶ್ರೀರಾಮನ ಮೂರ್ತಿಯ
ಮಧ್ಯಪ್ರದೇಶ: ಶ್ರೀರಾಮ ನವಮಿ ಆಚರಣೆ ವೇಳೆ ಮಧ್ಯ ಪ್ರದೇಶದ ಇಂದೋರ್ ನಲ್ಲಿ ಭಾರೀ ಅವಘಡವೊಂದು ಸಂಭವಿಸಿದ್ದು, ಇಂದೋರ್ ನ ಮಹಾದೇವ್ ಜುಲೇಲಾಲ್ ದೇವಸ್ಥಾನದ ಮೆಟ್ಟಿಲುಬಾವಿ ಕುಸಿದ ಪರಿಣಾಮ 9 ಮಂದಿ ಸಾವನ್ನಪ್ಪಿದ್ದಾರೆ. ರಾಮನವಮಿ ಅಂಗವಾಗಿ ಹೆಚ್ಚಿನ ಜನ ಸೇರಿದ್ದ್ ಅಹಿನ್ನೆಲೆಯಲ್ಲಿ ಬಾವಿಯ ಮೇಲ್ಭಾಗ ಕುಸಿದಿದೆ. ಈ ಭಾಗದಲ್ಲಿ ದೇವಾಲಯವಿತ್ತು. ಮಹಿಳೆಯರು, ಮಕ್ಕಳು ಸೇರಿದಂತೆ
ಉಡುಪಿ ಸಮೀಪದ ಚಕ್ರತೀರ್ಥದ ಶ್ರೀಉಮಾಮಹೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ನೂತನ ಧ್ವಜಸ್ತ೦ಭದ ಶೋಭಾ ಯಾತ್ರೆ ಮೆರವಣಿಗೆಗೆ ಉಡುಪಿಯ ಶ್ರೀಕೃಷ್ಣಮಠದ ರಾಜಾ೦ಗಣದ ಪಾರ್ಕಿ೦ಗ್ ಸ್ಥಳದಲ್ಲಿ ಬುಧವಾರದ೦ದು ಉಡುಪಿಯ ಶ್ರೀಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥಶ್ರೀಪಾದರು ಧ್ವಜಸ್ತ೦ಭಕ್ಕೆ ಆರತಿಯನ್ನು ಬೆಳಗಿಸಿ ಧ್ವಜಸ್ತ೦ಭವನ್ನು ಇಡಲಾರದ ವಾಹನಕ್ಕೆ ತೆ೦ಗಿನಕಾಯಿಯನ್ನು ಹೊಡೆದು ಚಾಲನೆಯನ್ನು ನೀಡಿದರು.
ನವದೆಹಲಿ: ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿಯಾಗಿದೆ, ರಾಜ್ಯದ 224 ವಿಧಾನಸಭೆ ಕ್ಷೇತ್ರಗಳಿಗೆ ಮೇ 10ರಂದು ಮತದಾನ ನಡೆಯಲಿದ್ದು, ಮೇ 13 ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ. ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಚುನಾವಣಾ ಆಯೋಗದ ಆಯುಕ್ತ ರಾಜೀವ್ ಕುಮಾರ್ ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಿಸಿದ್ದಾರೆ ಮತ್ತು
ಚಿಕ್ಕಮಗಳೂರು: ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ತರೀಕರೆ ತಾಲೂಕಿನ ಬೆಟ್ಟದಹಳ್ಳಿ ಗ್ರಾಮದ ಬಳಿ ನಡೆದಿದೆ. ಡಿಕ್ಕಿಯ ತೀವ್ರತೆಗೆ ಬೈಕ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು ಮೃತರನ್ನು ತರೀಕೆರೆ ಪಟ್ಟಣದ ಬಿಲಾಲ್ ಮತ್ತು ಅಜೀಮ್ ಎಂದು ಗುರುತಿಸಲಾಗಿದೆ. ಇನ್ನು ಅಪಘಾತದಲ್ಲಿ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದು ಕೂಡಲೇ
ಬೆಂಗಳೂರು: ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧನಕ್ಕೊಳಾಗಿರುವ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಐದು ದಿನಗಳ ಕಾಲ ಲೋಕಾಯುಕ್ತ ಪೊಲೀಸ್ ಕಸ್ಟಡಿಗೆ ನೀಡಿ ಮಂಗಳವಾರ ಆದೇಶ ಹೊರಡಿಸಿದೆ. ಜಾಮೀನು ರದ್ದಾದ ನಂತರ ನಿನ್ನೆ ಸಂಜೆ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಬಂಧಿಸಿದ್ದ ಲೋಕಾಯುಕ್ತ ಪೊಲೀಸರು, ಇಂದು