ನಾಡಿನ ಸಮಸ್ತ ಜನತೆಗೆ ,ನಮ್ಮ ಎಲ್ಲಾ ಗ್ರಾಹಕರಿಗೆ,ಜಾಹೀರಾತುದಾರರಿಗೆ "ಕ್ರಿಸ್ಮಸ್" ಹಬ್ಬ ಹಾಗೂ ಹೊಸವರುಷದ ಶುಭಾಶಯಗಳು...

ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಶುಶ್ರೂಷಾ ವೃತ್ತಿಪರರಿಗೆ 2022- 2023ನೇ ಸಾಲಿನ ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿಗಳನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರದಾನ ಮಾಡಿದರು. ಒಟ್ಟು 30 ಆರೋಗ್ಯ ಸೇವಾಕರ್ತರಿಗೆ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನರ್ಸ್ ಸೇವೆ ಮತ್ತು ಅಸಾಧಾರಣ ವೃತ್ತಿಪರತೆಗಾಗಿ ನೀಡಲಾಗುವ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಯಾಗಿದೆ. 

ಬೆಂಗಳೂರು: ತಾಯಿ-ಮಗು ಸಾವಿಗೆ ಕಾರಣವಾಗಿದ್ದ ಬೆಂಗಳೂರು ಮೆಟ್ರೋ ಪಿಲ್ಲರ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಿಎಂಆರ್ ಸಿಎಲ್ ಇಂಜಿನಿಯರ್ ಗಳು ಸೇರಿದಂತೆ 11 ಮಂದಿ ವಿರುದ್ಧ 1,100 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಹೌದು

ಉಡುಪಿ:ಶ್ರೀಕೃಷ್ಣಸೇವಾ ಬಳಗ,ಶ್ರೀಅದಮಾರು ಮಠ ಉಡುಪಿ ಇವರು ಆಯೋಜಿಸಿರುವ ವಿಶ್ವಾರ್ಪಣಮ್ ಕಾರ್ಯಕ್ರಮದ ಅ೦ಗವಾಗಿ ಜೂನ್ 24ರ ಶನಿವಾರದ೦ದು ಮಧ್ಯಾಹ್ನ 3.00ಗ೦ಟೆಗೆ ಉಡುಪಿಯ ಶ್ರೀಪೂರ್ಣಪ್ರಜ್ಞ ಆಡಿಟೋರಿಯ೦ನಲ್ಲಿ "ಸ್ನೇಹ-ಧರ್ಮ-ಕರ್ತವ್ಯ "ಚಿ೦ತನ ಮ೦ಥನ ಕಾರ್ಯಕ್ರಮವು ಜರಗಲಿದೆ. ಚಿ೦ತಕರಾದ ಶ್ರೀವಿಜಯಯ ಸಿ೦ಹ ತೋಟಿ೦ತಿಲ್ಲಾಯ ಮತ್ತು ಪುಷ್ಪಪಾಲ್ ಎಸ್ ಬೆ೦ಗಳೂರು,ಸ೦ಸ್ಥಾಪಕರಾದ,ಸಿ೦ಹವಾಹಿನಿ ಸೇವಾ ಟ್ರಸ್ಟ್ ಇವರಿ೦ದ ಈ ಕಾರ್ಯಕ್ರಮವು

ಸ್ಪೆಷಲ್ ಒಲಿಂಪಿಕ್ಸ್ ವರ್ಲ್ಡ್ ಸಮ್ಮರ್ ಗೇಮ್ಸ್‌ನಲ್ಲಿ ಭಾರತೀಯ ಪಡೆ ತನ್ನ ಪದಕದ ಭರಾಟೆಯನ್ನು ಮುಂದುವರೆಸಿದ್ದು, ಬರ್ಲಿನ್‌ನಲ್ಲಿ 50 ಪದಕಗಳ ಗಡಿ ದಾಟಿತು. ಟೂರ್ನಿಯ ಕೊನೆ ದಿನ ಸ್ಪೆಷಲ್ ಒಲಿಂಪಿಕ್ಸ್ ಭಾರತ 15 ಚಿನ್ನ, 27 ಬೆಳ್ಳಿ, 13 ಕಂಚು ಸೇರಿದಂತೆ ಅಥ್ಲೆಟಿಕ್ಸ್, ಸೈಕ್ಲಿಂಗ್, ಪವರ್‌ಲಿಫ್ಟಿಂಗ್, ರೋಲರ್ ಸ್ಕೇಟಿಂಗ್ ಮತ್ತು ಈಜು.

ಕೋಲಾರ: ಮುಳಬಾಗಿಲು ತಾಲ್ಲೂಕ್ ಬಿಸ್ನಹಳ್ಳಿ ಗ್ರಾಮದಲ್ಲಿ  ಸಾಲ ವಸೂಲಿ ಮಾಡಲು ಹೋದ ಡಿಸಿಸಿ ಬ್ಯಾಂಕ್ ಸಿಬ್ಬಂದಿಯ ಬೈಕಿಗೆ ಸ್ತ್ರಿ ಶಕ್ತಿ ಸಂಘದವರು ಬೆಂಕಿ ಹಚ್ಚಿದ್ದಾರೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ, ಇಂತಹ ಯಾವುದೇ ಘಟನೆ ನಡೆದಿಲ್ಲ, ಇದು ಸುಳ್ಳು ಸುದ್ದಿ ಎಂದು ಜಿಲ್ಲಾ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಸಾಲ ವಸೂಲಾತಿಗಾಗಿ ಬ್ಯಾಂಕ್

ವಾಷಿಂಗ್ಟನ್ ಡಿಸಿ: ಅಮೆರಿಕದ ನ್ಯೂಯಾರ್ಕ್ ಸಿಟಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮ ಮುಗಿಸಿ ಕಳೆದ ರಾತ್ರಿ ನೇರವಾಗಿ ವಾಷಿಂಗ್ಟನ್ ಡಿಸಿಯಲ್ಲಿರುವ ಆಡಳಿತ ಶಕ್ತಿಕೇಂದ್ರ ಶ್ವೇತಭವನಕ್ಕೆ ಹೋದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಅಧ್ಯಕ್ಷ ಜೋ ಬೈಡನ್ ಮತ್ತು ಅವರ ಪತ್ನಿ ಅಮೆರಿಕದ ಪ್ರಥಮ ಮಹಿಳೆ ಎಂದು ಕರೆಯಲ್ಪಡುವ ಜಿಲ್ ಬೈಡನ್

ಯಿಂಚುವಾನ್‌: ವಾಯುವ್ಯ ಚೀನಾದ ಬಾರ್ಬೆಕ್ಯೂ ರೆಸ್ಟೋರೆಂಟ್‌ನಲ್ಲಿ ಭಾರಿ ಅಡುಗೆ ಅನಿಲ ಸ್ಫೋಟ ಸಂಭವಿಸಿದ್ದು, ಕನಿಷ್ಠ 31 ಜನರು ಸಾವನ್ನಪ್ಪಿದ್ದಾರೆ ಮತ್ತು ಏಳು ಮಂದಿ ಗಾಯಗೊಂಡಿದ್ದಾರೆ. ಎಲ್ ಪಿಜಿ ಅನಿಲ ಸೋರಿಕೆಯಿಂದಾಗಿ ಯಿಂಚುವಾನ್‌ನ ಕ್ಸಿಂಕಿಂಗ್ ಜಿಲ್ಲೆಯ ಜನನಿಬಿಡ ಬೀದಿಯಲ್ಲಿ ಬುಧವಾರ ರಾತ್ರಿ 8:40 ರ ಸುಮಾರಿಗೆ ಸ್ಫೋಟ ಸಂಭವಿಸಿದೆ ಎಂದು ಸರ್ಕಾರಿ

ಬೆಂಗಳೂರು: ನಂದಿನಿ ಹಾಲಿನ ದರ ಹೆಚ್ಚಿಸುವ ಕೆಎಂಎಫ್ ನೂತನ ಅಧ್ಯಕ್ಷ ಭೀಮಾ ನಾಯ್ಕ್ ಅವರ ಹೇಳಿಕೆಗೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ಕೆಎಂಎಫ್ ಅಧ್ಯಕ್ಷರು ಹಾಲಿನ ದರವನ್ನು ಲೀಟರ್ ಗೆ ಐದು ರೂಪಾಯಿ ಹೆಚ್ಚಿಸುತ್ತೇವೆ ಎಂದು ಏಕಾಏಕಿ ಹೇಳುವ ಮೂಲಕ ರಾಜ್ಯದ ಪ್ರಜೆಗಳ ಜೇಬಿಗೆ ಕನ್ನ

ಬೆಂಗಳೂರು: ರಾಜ್ಯ‌ ವಿಧಾನಸಭೆ ಸದಸ್ಯರಿಂದ ವಿಧಾನಪರಿಷತ್ ನ ಖಾಲಿ ಇರುವ ಮೂರು ಸ್ಥಾನಗಳಿಗೆ ಜೂನ್ 30 ರಂದು ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಮೂವರು ಅಭ್ಯರ್ಥಿಗಳು ಇಂದು ನಾಮಪತ್ರ ಸಲ್ಲಿಸಿದರು. ಪಕ್ಷದ ಮೊದಲ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ , ಎರಡನೆಯ ಅಭ್ಯರ್ಥಿಯಾಗಿ ಎನ್ ಎಸ್ ಬೋಸರಾಜು ಹಾಗೂ ಮೂರನೇ

ಮಂಡ್ಯ: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದ್ದು ಸ್ವಿಫ್ಟ್ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಂಡ್ಯ ಜಿಲ್ಲೆ ಮದ್ದೂರು ಬಳಿಯ ಕಿಟ್ಟಿ ಡಾಬಾ ಬಳಿ ಟಾಟಾ ಹೆಕ್ಸಾ ಹಾಗೂ ಸ್ವಿಫ್ಟ್ ಡಿಜೈರ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಅಪಘಾತದಲ್ಲಿ ಸ್ವಿಫ್ಟ್ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು ಕಾರಿನಲ್ಲಿದ್ದ ಮೂವರು