ನವದೆಹಲಿ, ಮೇ 26: ಶನಿವಾರ ತಡರಾತ್ರಿ ದೆಹಲಿಯ ಮಕ್ಕಳ ಆಸ್ಪತ್ರೆಯಲ್ಲಿ ಸಂಭವಿಸಿದ ಭಾರಿ ಬೆಂಕಿಯಲ್ಲಿ ಕನಿಷ್ಠ ಏಳು ನವಜಾತ ಶಿಶುಗಳು ಸಾವನ್ನಪ್ಪಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೂರ್ವ ದೆಹಲಿಯ ವಿವೇಕ್ ವಿಹಾರ್ ಪ್ರದೇಶದಲ್ಲಿನ ಬೇಬಿ ಕೇರ್ ಸೆಂಟರ್‌ನಲ್ಲಿ ರಾತ್ರಿ 11.32 ಕ್ಕೆ ಬೆಂಕಿ ಕಾಣಿಸಿಕೊಂಡಿದೆ ಎಂದು ದೆಹಲಿ ಅಗ್ನಿಶಾಮಕ ಸೇವೆಗಳು
ಹಾಸನ, ಮೇ 26: ಬೆಳ್ಳಂಬೆಳಗ್ಗೆ ಹಾಸನ ಹೊರವಲಯದ ಕಂಡ್ಲಿ ಈಚನಹಳ್ಳಿ ಗ್ರಾಮ ಬಳಿಯ ಬೆಂಗಳೂರು-ಮಂಗಳೂರು ಹೆದ್ದಾರಿ NH 75ನಲ್ಲಿ ಕಾರು ಹಾಗೂ ಟ್ರಕ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಮಗು ಸೇರಿದಂತೆ ಆರು ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಾರಾಯಣಪ್ಪ, ಸುನಂದಾ, ರವಿಕುಮಾರ್, ನೇತ್ರ, ಚೇತನ್ ಮತ್ತು ಕಾರು ಚಾಲಕ
ಮೈಸೂರು, (ಮೇ 26): ರೈತ ಮಹಿಳೆ ಮೇಲೆ ಹುಲಿ ದಾಳಿ ನಡೆಸಿದ ಘಟನೆ ಅಲ್ಲಿನ ಮೂರ್ಬಾಂದ್ ಬೆಟ್ಟದ ಸಮೀಪದಲ್ಲಿ ನಡೆದಿದೆ. ಹುಲಿ ದಾಳಿಯಿಂದ ಮಹಿಳೆ ಸಾವನ್ನಪ್ಪಿದ್ದಾಳೆ. ಚಿಕ್ಕಿ (48) ಹುಲಿ ದಾಳಿಗೆ ಬಲಿಯಾದ ಮಹಿಳೆ. ಎಚ್.ಡಿ.ಕೋಟೆ ತಾಲ್ಲೂಕು ಎನ್.ಬೇಗೂರು ಸಮೀಪದ ಮಾಳದ ಹಾಡಿ ನಿವಾಸಿ. ಮೇಕೆ ಮೇಯಿಸುತ್ತಿದ್ದಾಗ ಹಠಾತ್
ಉಡುಪಿ, ಮೇ 26: ಗ್ಯಾಂಗ್ವಾರ್ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳು ಇಂದು (ಮೇ 26) ಕಾಪು ಪೊಲೀಸರಿಗೆ ಶರಣಾಗಿದ್ದಾರೆ. ಮೂವರು ಅರೋಪಿಗಳನ್ನು ಕಾಪು ಪೋಲೀಸರು ಉಡುಪಿ ನಗರ ಪೋಲಿಸರಿಗೆ ಒಪ್ಪಿಸಿದ್ದಾರೆ. ಗರುಡ ಗ್ಯಾಂಗ್ನ ಮಜೀದ್, ಅಲ್ಫಾಜ್, ಶರೀಫ್ ಶರಣಾದವರು. ಗ್ಯಾಂಗ್ ವಾರ್ ಯಾಕೆ? ಉಡುಪಿ ನಗರದ ಕುಂಜಿಬೆಟ್ಟುವಿನಲ್ಲಿ ಮೇ 18ರ ಮುಂಜಾನೆ
ಮಂಗಳೂರು: ಹರೀಶ್ ಪೂಂಜಾ ಶಾಸಕರೆಂದ ಮಾತ್ರಕ್ಕೆ ಅವರ ಮೇಲಿನ ಆರೋಪ ಅಲ್ಲ ಗೆಳೆಯಲು ಸಾಧ್ಯವೇ?ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ಶಾಸಕ ಹರೀಶ್ ಪೂಂಜಾ ಪೊಲೀಸರಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಸಿ 353ರ ಪ್ರಕಾರ ಎಫ್ ಐ ಆರ್ ಅನ್ನು ದಾಖಲಿಸಲಾಗಿದ್ದು, ಅದರಂತೆ ಕ್ರಮ
ದಾವಣಗೆರೆ: ಜಿಲ್ಲೆಯ ಚನ್ನಗಿರಿ ಪ್ರಟ್ಟಣದಲ್ಲಿ ನಿನ್ನೆ ಲಾಕಪ್ ಡೆತ್ (lock up death) ಸಂಭವಿಸಿದೆ ಎಂಬ ಆರೋಪ ಕೇಳಿಬರುತ್ತಿದೆ. ನಿನ್ನೆ ವ್ಯಕ್ತಿಯೊಬ್ಬನನ್ನು ವಿಚಾರಣೆಗೆಂದು ಪೊಲೀಸರು ಇಲ್ಲಿ ಕಾಣುತ್ತಿರುವ ಪೊಲೀಸ್ ಠಾಣೆಗೆ ಕರೆತಂದಾಗ ಅವನು ಕುಸಿದುಬಿದ್ದು ಸಾವನ್ನಪ್ಪಿದ್ದಾನೆ. ಪೊಲೀಸರು ಬಂಧಿತ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಕಾರಣ ಅವನು ಸತ್ತಿದ್ದಾನೆ ಎಂದು
ಉಡುಪಿ: ನಗರದಲ್ಲಿ ಎರಡು ತಂಡಗಳ ನಡುವೆ ಗ್ಯಾಂಗ್ ವಾರ್ ನಡೆದ ಘಟನೆ ಉಡುಪಿಯ ಕುಂಜಿಬೆಟ್ಟುವಿನಲ್ಲಿ ಮೇ೧೮ರ ಶನಿವಾರದ೦ದು ನಡೆದಿದ್ದು ತಡವಾಗಿ ತಿಳಿದು ಬಂದಿದೆ. ಕಾಪು ಮೂಲದ ಎರಡು ತಂಡಗಳ ಯುವಕರು ಉಡುಪಿ – ಮಣಿಪಾಲ ರಾಷ್ಟ್ರೀಯ ಹೆದ್ದಾರಿಯಲ್ಲಿನ ಶಾರದಾ ಕಲ್ಯಾಣಮ೦ಟಪದ ತಿರುವುವಿನ ರಿಕ್ಷಾ ನಿಲ್ದಾಣದ ಬಳಿ ಕಾರುಗಳಲ್ಲಿ ಬಂದು ಜಗಳ
ನವದೆಹಲಿ: ನೂರಾರು ಮಹಿಳೆಯರ ಜೊತೆ ರಾಸಲೀಲೆ ನಡೆಸಿದ ವಿಡಿಯೋ ಬಹಿರಂಗವಾದ ನಂತರ ವಿದೇಶಕ್ಕೆ ಪರಾರಿಯಾಗಿರುವ ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ವಿದೇಶಾಂಗ ಸಚಿವಾಲಯ ಶುಕ್ರವಾರ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್ಪೋರ್ಟ್ ರದ್ದುಗೊಳಿಸುವಂತೆ ಪ್ರಕರಣ ತನಿಖೆ ನಡೆಸುತ್ತಿರುವ ಎಸ್ಐಟಿ ಮತ್ತು ಮುಖ್ಯಮಂತ್ರಿ
ಬೆಂಗಳೂರು: ಭಾರತೀಯ ಮೂಲದ ಅಮೆರಿಕಾ ವಿಜ್ಞಾನಿ ಮತ್ತು ಸುಧಾಮೂರ್ತಿ ಅವರ ಸಹೋದರ ಶ್ರೀನಿವಾಸ್ ಆರ್ ಕುಲಕರ್ಣಿ ಅವರು ಖಗೋಳಶಾಸ್ತ್ರ ವಿಭಾಗದ ಸಾಧಕರಿಗೆ ನೀಡಲಾಗುವ ಪ್ರತಿಷ್ಠಿತ ‘ಶಾ ಪುರಸ್ಕಾರ’ ನೀಡಲಾಗಿದೆ. ಕರ್ನಾಟಕ ಮೂಲದ ಶ್ರೀನಿವಾಸ್ ಆರ್. ಕುಲಕರ್ಣಿ ಅವರು ಅಮೆರಿಕದಲ್ಲಿ ಖಗೋಳ ಶಾಸ್ತ್ರದ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶ್ರೀನಿವಾಸ್ ಆರ್. ಕುಲಕರ್ಣಿ
ಬೆಂಗಳೂರು: ನಗರದ ಮೃತ ಹೆಡ್ ಕಾನ್‌ಸ್ಟೇಬಲ್ ಗುರುತಿನ ಚೀಟಿ ಬಳಸಿಕೊಂಡು ಸಾರ್ವಜನಿಕರಿಂದ ಸಂಚಾರ ನಿಯಮ ಉಲ್ಲಂಘನೆ ಶುಲ್ಕ ವಸೂಲಿ ಮಾಡುತ್ತಿದ್ದ ಪಶ್ಚಿಮ ಬಂಗಾಳದ ಮೂವರನ್ನು ಬಂಧಿಸಲಾಗಿದೆ. ಪೊಲೀಸರು ಆರೋಪಿಗಳನ್ನು ಇಸ್ಮಾಯಿಲ್ ಅಲಿ, ರಂಜನ್ ಕುಮಾರ್ ಪುರ್ಬೆ ಮತ್ತು ಸುಬೀರ್ ಎಂದು ಗುರುತಿಸಿದ್ದಾರೆ, ಎಲ್ಲರೂ ಕಾಲೇಜು ಬಿಟ್ಟವರಾಗಿದ್ದಾರೆ. ಆರೋಪಿಗಳು ಇಂಟರ್‌ನೆಟ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡಿರುವ