ಉಡುಪಿಯಲ್ಲಿ ಎನ್ ಕೌಂಟರ್: ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ವಿಕ್ರಮ್ ಗೌಡ ಸಾವು....ಮಹಾ ಚುನಾವಣೆ: ಮತದಾರರು ಬೂತ್‌ಗಳಿಗೆ ತೆರಳಲು QR ಕೋಡ್‌ ಪರಿಚಯ...ನವೆಂಬರ್ 25ರಿಂದ ಸಂಸತ್ ಚಳಿಗಾಲದ ಅಧಿವೇಶನ: ಭಾನುವಾರ ಸರ್ವಪಕ್ಷ ಸಭೆ...

ಮೈಸೂರು: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಬಸವಣ್ಣನವರ  ಧನೆಯಿಂದ ಪ್ರಭಾವಿತವಾಗಿವೆ, 12ನೇ ಶತಮಾನದ ಸಮಾಜ ಸುಧಾರಕ ಬಸವಣ್ಣನವರ ತತ್ವ ಸಿದ್ಧಾಂತದಲ್ಲಿ ನಮಗೆ ನಂಬಿಕೆಯಿದ್ದು, ಆ ಮಾರ್ಗದಲ್ಲಿ ನಡೆಯಲು ತಮ್ಮ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನಲ್ಲಿ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಆಯೋಜಿಸಿದ್ದ ಬಸವ ಜಯಂತಿ

ಶಿವಮೊಗ್ಗ: ತೀರ್ಥಹಳ್ಳಿ ತಾಲ್ಲೂಕಿನ ಅರಳಸುರಳಿ ಸಮೀಪದ ಕೆಕೋಡ್ ಗ್ರಾಮದಲ್ಲಿ ಭಾನುವಾರ ಬೆಳಿಗ್ಗೆ ಒಂದೇ ಕುಟುಂಬದ ಮೂವರು ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾರೆ. ಸುಟ್ಟು ಕರಕಲಾದ ಸ್ಥಿತಿಯಲ್ಲಿ ಶವಗಳು ಪತ್ತೆಯಾಗಿವೆ. ಮನೆಯ ಕೋಣೆಯ ಒಳಗೆ ಕಟ್ಟಿಗೆಯನ್ನು ಕೂಡಿಸಿ ಬೆಂಕಿ ಹಚ್ಚಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಆತ್ಮಹತ್ಯೆಯ ಶಂಕೆ ಎದುರಾಗಿದೆ. ಅದೇ ಕುಟುಂಬದ ಮತ್ತೊಬ್ಬ ಸದಸ್ಯನ ಸ್ಥಿತಿ ಗಂಭೀರವಾಗಿದ್ದು,

ನವದೆಹಲಿ : ಪಶ್ಚಿಮ ಅಪ್ಘಾನಿಸ್ತಾನದಲ್ಲಿ ಶನಿವಾರ ಹಲವು ಭಾರಿ ಭೂಮಿ ಕಂಪಿಸಿದ್ದು, ಕನಿಷ್ಠ 320 ಮಂದಿ ಮೃತಪಟ್ಟಿದ್ದಾರೆ ಎಂದು ವಿಶ್ವಸಂಸ್ಥೆ ಮಾಹಿತಿ ನೀಡಿದೆ. ಭೂಕಂಪದಲ್ಲಿ 78 ಮಂದಿ ಗಾಯಗೊಂಡಿದ್ದಾರೆ. ಕಟ್ಟಡಗಳ ಅವಶೇಷಗಳಡಿ ಹಲವರು ಸಿಲುಕಿರುವುದರಿಂದ ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೊದಲಿಗೆ ರಿಕ್ಟರ್‌ ಮಾಪಕದಲ್ಲಿ 6.3ರಷ್ಟು ತೀವ್ರತೆಯ

ಜೆರುಸಲೇಂ: ಇಂದು ಶನಿವಾರ ಹಮಾಸ್ ಉಗ್ರಗಾಮಿಗಳೊಂದಿಗೆ ನಡೆದ ರಾಕೆಟ್ ಯುದ್ಧದಲ್ಲಿ ಇಸ್ರೇಲ್ ನಲ್ಲಿ 22 ಮಂದಿ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ ಎಂದು ಮೆಗೆನ್ ಡೇವಿಡ್ ಅಡೋಮ್ ತುರ್ತು ವೈದ್ಯಕೀಯ ಸೇವೆಗಳಿಂದ ತಿಳಿದುಬಂದಿದೆ. ಅಂತಾರಾಷ್ಟ್ರೀಯ ಕಾಲಮಾನ ಇಂದು ಮಧ್ಯಾಹ್ನ ಗಂಟೆಯ ಸುಮಾರಿಗೆ ಮ್ಯಾಗೆನ್ ಡೇವಿಡ್ ಆಡಮ್ ತಂಡಗಳು 22 ಮಂದಿ ಮೃತಪಟ್ಟಿದ್ದಾರೆ ಎಂದು

ಝೆಜಿಯಾಂಗ್: ಏಷ್ಯನ್ ಗೇಮ್ಸ್ ನಲ್ಲಿ ಭಾರತ ಕ್ರಿಕೆಟ್ ತಂಡ ಚೊಚ್ಚಲ ಚಿನ್ನದ ಪದಕ ಗೆದ್ದಿದೆ. ಅಫ್ಘಾನಿಸ್ಥಾನದ ವಿರುದ್ಧ ಫೈನಲ್ಸ್ ಪಂದ್ಯ ಮಳೆಯ ಕಾರಣ ರದ್ದಾಗಿದ್ದು, ಹೆಚ್ಚಿನ ಶ್ರೇಣಿಯಲ್ಲಿ ಸ್ಥಾನ ಪಡೆದಿದ್ದರಿಂದ ಋತುರಾಜ್ ಗಾಯಕ್ವಾಡ್ ನೇತೃತ್ವದ ತಂಡವನ್ನು ವಿಜೇತ ಎಂದು ಘೋಷಿಸಲಾಗಿದೆ. ಅಫ್ಘಾನಿಸ್ಥಾನ ತಂಡ 18.2 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 112

ಉಡುಪಿ:ಉಡುಪಿಯ ಅಷ್ಟಮಠಾಧೀಶರಲ್ಲಿ ಒಬ್ಬರಾದ ಶಿರೂರುಮಠದ ಶ್ರೀವೇದವರ್ಧನಶ್ರೀಪಾದರ ಜನ್ಮನಕ್ಷತ್ರಕಾರ್ಯಕ್ರಮವು ಇದೇ ಅಕ್ಟೋಬರ್ ತಿ೦ಗಳ 11ರ ಬುಧವಾರದ೦ದು ಉಡುಪಿಯ ರಥಬೀದಿಯಲ್ಲಿ ನಿರ್ಮಿಸಲ್ಪಟ್ಟ ಶ್ರೀಅನ್ನವಿಠಲ ವೇದಿಕೆಯಲ್ಲಿ ಅ೦ದು ಸಾಯ೦ಕಾಲ 6ಗ೦ಟೆಗೆ ಜರಗಲಿದೆ. ಈ ಕಾರ್ಯಕ್ರಮದಲ್ಲಿ ಪರ್ಯಾಯ ಶ್ರೀಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥಶ್ರೀಪಾದರು ಭಾಗವಹಿಸಿ ಆಶೀರ್ವಚನ ನೀಡಲಿದ್ದಾರೆ.ಸಮಾರ೦ಭದಲ್ಲಿ ಶಿರೂರು ಮಠದ ಶ್ರೀವೇದವರ್ಧನ ಶ್ರೀಪಾದರು ಸಾನಿಧ್ಯವಹಿಸಲಿದ್ದಾರೆ. ಕೇ೦ದ್ರ ಸಚಿವರಾದ

ಉಡುಪಿ:ಅ 06, ಉಡುಪಿ ನಗರಸಭೆ ವ್ಯಾಪ್ತಿಯ ಹೆರ್ಗ ಗ್ರಾಮದಲ್ಲಿರುವ ಸರಕಾರಿ ವಸತಿ ಸಮುಚ್ಷಯದಲ್ಲಿ ಸೂಕ್ತವಾದ ಮೂಲ ಸೌಕರ್ಯ ಕಲ್ಪಿಸಿ ಮತ್ತು ಶೀಘ್ರದಲ್ಲಿ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರ ಮಾಡುವಂತೆ ಆಗ್ರಹಿಸಿ ಉಡುಪಿ ನಗರಸಭೆ ವ್ಯಾಪ್ತಿಯ ನಿವೇಶನ ರಹಿತರ ಹೋರಾಟ ಸಮಿತಿಯ ವತಿಯಿಂದ ಅ. 06 ರಂದು ಉಡುಪಿ ನಗರಸಭೆ ಮುಂಭಾಗ

ಉಡುಪಿ:2024-26ರ೦ದು ಶ್ರೀಕೃಷ್ಣಮಠದಲ್ಲಿ ತಮ್ಮ ನಾಲ್ಕನೇ ಬಾರಿಯ ಪರ್ಯಾಯವನ್ನು ನೆರವೇರಿಸಲಿರುವ ಶ್ರೀಪುತ್ತಿಗೆ ಮಠದ ಹಿರಿಯ ಯತಿಗಳಾದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಪರ್ಯಾಯದಲ್ಲಿ ಎರಡುವರುಷಗಳ ಕಾಲ ಮಠದಲ್ಲಿ ಬಳಕೆ ಮಾಡುವ ಕಟ್ಟಿಗೆಯನ್ನು ದಾಸ್ತಾನುಮಾಡಿ ಇಡುವ ಕಟ್ಟಿಗೆಯನ್ನು ರಥದ ಆಕಾರದಲ್ಲಿ ಜೋಡಿಸುವ ಕೆಲಸಕ್ಕೆ ಶುಕ್ರವಾರದ೦ದು ಶ್ರೀಕೃಷ್ಣ-ಮುಖ್ಯಪ್ರಾಣ ದೇವರಿಗೆ ಮಠದ ಮೇಸ್ತ್ರಿಯಾಗಿರುವ ಪದ್ಮನಾಭ,ರಥವನ್ನು ಕಟ್ಟುವ ಗೋವಿ೦ದಣ್ಣ

ಚೆನ್ನೈ: ಭಾರತ ತಂಡದ ಯುವ ಆರಂಭಿಕ ಬ್ಯಾಟರ್​ ಶುಬ್ಮನ್ ಗಿಲ್ ಡೆಂಗ್ಯೂನಿಂದ ಬಳಲುತ್ತಿದ್ದಾರೆ ಎಂಬುದಾಗಿ ಸುದ್ದಿಯಾಗಿದೆ. ಇದರಿಂದ ವಿಶ್ವ ಕಪ್​ಗೆ ಸಜ್ಜಾಗಿರುವ ಭಾರತಕ್ಕೆ ಭಾರಿ ಹೊಡೆತ ಬಿದ್ದಿದೆ. ಭಾನುವಾರ (ಅಕ್ಟೋಬರ್ 8) ಆಸ್ಟ್ರೇಲಿಯಾ ವಿರುದ್ಧದ ಭಾರತದ ಮೊದಲ ವಿಶ್ವಕಪ್ ಪಂದ್ಯದಲ್ಲಿ 24 ವರ್ಷದ ಗಿಲ್​ ಆಡುವ ಸಾಧ್ಯತೆಯಿಲ್ಲ. ಬಲಗೈ ಬ್ಯಾಟರ್​

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ಪ್ರಮುಖ ಸಾಲದ ದರವನ್ನು ಅಂದರೆ ರೆಪೊ ದರವನ್ನು ಸತತ ನಾಲ್ಕನೇ ಬಾರಿಗೆ ಶೇಕಡಾ 6.5ರಷ್ಟು ಬದಲಾಯಿಸದೆ ಹಾಗೆ ಉಳಿಸಲು ನಿರ್ಧರಿಸಿದೆ. ಕೇಂದ್ರ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿ (MPC) ಸಭೆಯಲ್ಲಿ ಸರ್ವಾನುಮತದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ