ಬೆಂಗಳೂರು, ಡಿಸೆಂಬರ್ 25: ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯ ಮೆಂಧರ್ನ ಬಲ್ನೋಯಿ ಪ್ರದೇಶದಲ್ಲಿ ಸೇನಾ ವಾಹನ 150 ಅಡಿ ಕಂದಕಕ್ಕೆ ಉರುಳಿ ಕರ್ನಾಟಕದ ಮೂವರು ಯೋಧರು ಹುತಾತ್ಮರಾಗಿದ್ದಾರೆ. ದುರಂತದಲ್ಲಿ ಬಾಗಲಕೋಟೆ ಜಿಲ್ಲೆಯ ರಬಕವಿಬನಹಟ್ಟಿ ತಾಲೂಕಿನ ಮಹಾಲಿಂಗಪುರ ನಿವಾಸಿ ಮಹೇಶ್ ಮಾರಿಗೊಂಡ (25), ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ಬಿಜಾಡಿಯ ಯೋಧ
ಮಂಗಳೂರು, ಡಿಸೆಂಬರ್ 25: ವ್ಯಕ್ತಿಯೋರ್ವ ನಕಲಿ ಚಿನ್ನ ಅಡವಿಟ್ಟು 2 ಕೋಟಿಗೂ ಅಧಿಕ ರೂ. ಸಾಲ ಪಡೆದು ಮಂಗಳೂರಿನ ಸಮಾಜ ಸೇವಾ ಸಹಕಾರಿ ಸಂಘಕ್ಕೆ ವಂಚಿಸಿರುವ ಆರೋಪ ಕೇಳಿಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಈಶ್ವರ ಮಂಗಲ ಗ್ರಾಮದ ಅಬೂಬಕ್ಕರ್ ಸಿದ್ದಿಕ್ ವಂಚಿಸಿದ ಆರೋಪಿ. 500 ನಕಲಿ
ಕಲಬುರಗಿ, ಡಿಸೆಂಬರ್ 24: ಶಾಲಾ ಬಸ್ಗೆ ಮಗುವನ್ನು ಹತ್ತಿಸುವಾಗ ವಿದ್ಯುತ್ ವೈಯರ್ ತಗುಲಿ ಮಹಿಳೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಲಬುರಗಿ ನಗರದ ಮೋಹನ್ ಲಾಡ್ಜ್ ಮುಂಭಾಗದ ಮುಖ್ಯ ರಸ್ತೆಯಲ್ಲಿ ನಡೆದಿದೆ. ಕರೆಂಟ್ ಶಾಕ್ನಿಂದ ಗಂಭೀರವಾಗಿ ಗಾಯಗೊಂಡಿರುವ ಬಾಗ್ಯಶ್ರೀ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಗ್ಯಶ್ರೀ ಅವರು ಎಂದಿನಂತೆ ತಮ್ಮ
ಬೆಂಗಳೂರು, (ಡಿಸೆಂಬರ್ 24): ಶ್ವೇತಾ ಗೌಡ ವಂಚನೆ ಕೇಸ್ನಲ್ಲಿ ಸಂಕಷ್ಟದಲ್ಲಿ ಸಿಲುಕಿರುವ ಮಾಜಿ ಸಚಿವ ವರ್ತೂರು ಪ್ರಕಾಶ್ ವಿಚಾರಣೆ ಬಳಿಕ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತಿ ನಗರ ಪೊಲೀಸ್ ಠಾಣೆಗೆ ಹಾಜರಾಗಿದ್ದ ವರ್ತೂರು ಪ್ರಕಾಶ್, ಎಸಿಪಿ ಗೀತಾ ಎದುರು ವಿಚಾರಣೆ ಎದುರಿಸಿದ್ದು, ಇದೇ ವೇಳೆ
ಬೆಂಗಳೂರು: ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆ ವೇಳೆ ನಗರದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಗೃಹ ಸಚಿವ ಜಿ. ಪರಮೇಶ್ವರ ಅವರು ಅಧಿಕಾರಿಗಳಿಗೆ ಸೋಮವಾರ ಸೂಚನೆ ನೀಡಿದರು. ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಸಭೆ ನಡೆಸಿ ಮಾತನಾಡಿದ ಅವರು, ಕ್ರಿಸ್ಮಸ್ ಹಾಗೂ
ಬೆಂಗಳೂರು: ಬಿಜೆಪಿ ನಾಯಕ ಸಿ ಟಿ ರವಿಯವರು ನನ್ನ ಬಗ್ಗೆ ಅವಾಚ್ಯ ಶಬ್ದ ಬಳಸಿಲ್ಲವೆಂದಾದರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ ನೋಡೋಣ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸವಾಲು ಹಾಕಿದ್ದಾರೆ. ಮಾಧ್ಯಮಗಳಿಗೆ ನೀಡಿದ ಸಂದರ್ಶನ ವೇಳೆ ಮಾತನಾಡಿದ ಅವರು ಹಲವು ವಿಚಾರಗಳನ್ನು ಹೇಳಿದ್ದಾರೆ.
ಇಸ್ತಾಂಬುಲ್: ವಾಯುವ್ಯ ಟರ್ಕಿಯಲ್ಲಿ ಮಂಗಳವಾರ ಸ್ಫೋಟಕ ವಸ್ತುಗಳ ಘಟಕದಲ್ಲಿ ಪ್ರಬಲ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ 12 ಜನ ಸಾವನ್ನಪ್ಪಿದ್ದಾರೆ ಮತ್ತು ಐವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ, ಬಲಿಕೇಸಿರ್ ಪ್ರಾಂತ್ಯದ ಕರೇಸಿ ಜಿಲ್ಲೆಯ ಸ್ಫೋಟಕ ವಸ್ತುಗಳ ಘಟಕದಲ್ಲಿ ಸಂಭವಿಸಿದ ಸ್ಫೋಟದಲ್ಲಿ 12 ಉದ್ಯೋಗಿಗಳು ಸಾವನ್ನಪ್ಪಿದ್ದಾರೆ ಮತ್ತು ಐವರು
ಕಳೆದ ಮೂರು ದಶಕಗಳಿ೦ದ ಉಡುಪಿ ಜಿಲ್ಲೆಯ ಹವಾನಿಯ೦ತ್ರಿತ No.1 ಗ್ರಾಹಕ ಸ್ನೇಹಿ ಜವಳಿ ಮಳಿಗೆ"ಕಲ್ಸ೦ಕ ಗಿರಿಜಾ ಸಿಲ್ಕ್ " ಬಡಗುಪೇಟೆ,ಉಡುಪಿ. ಹೊಸವರ್ಷಕ್ಕೆ ಮಹಿಳೆಯರ ವೈವಿಧ್ಯಮಯ ಕಾ೦ಚೀಪುರ೦, ಕೊಯ೦ಬತ್ತೂರು ಸಿಲ್ಕ್, ಸತ್ಯಮ೦ಗಲ ಸಾಫ್ಟ್ ಸಿಲ್ಕ್ , ನೆಲ್ಲಿ ಸಿಲ್ಕ್ , ಎಲ್ಲಾ ತರಹದ ಸಿಲ್ಕ್ ಸಾರಿಗಳು ಲಭ್ಯತೆ ಯೊ೦ದಿಗೆ ಸೂರತ್, ಮು೦ಬಯಿ,
(ವಿಶೇಷ ವರದಿ:ಟಿ.ಜಯಪ್ರಕಾಶ್ ಕಿಣಿ ಉಡುಪಿ) ಇತಿಹಾಸ ಪ್ರಸಿದ್ಧ ದೇವಾಲಯಗಳ ತವರೂರಾದ ಉಡುಪಿಯಲ್ಲಿ ಕುಡಿಯುವ ನೀರಿಗೆ ಡಿಸೆ೦ಬರ್ ತಿ೦ಗಳಲ್ಲೇ ಬರ.ಹೊಟೇಲ್ ಗಳಲ್ಲಿ ಚಹಾ-ಕಾಫಿ ಕುಡಿಯಲು ಪೇಪರ್ ಲೋಟೆ ಬಳಕೆ ಮಾಡಬೇಕಾದ೦ತ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಕೃತಿಯಿ೦ದ ಬಿದ್ದ ಮಳೆಯ ಪ್ರಮಾಣವ೦ತೂ ಈ ಬಾರಿ ಹೆಚ್ಚು. ಡ್ಯಾ೦ನಲ್ಲಿ ಬೇಕಾದಷ್ಟುಪ್ರಮಾಣದಲ್ಲಿ ನೀರು ಸ೦ಗ್ರಹವಿದ್ದರೂ ಉಡುಪಿಯ ನಗರದ ತೆ೦ಕಪೇಟೆಯ
ಜೈಪುರ: ಜೈಪುರ-ಅಜ್ಮೀರ್ ಹೆದ್ದಾರಿಯಲ್ಲಿ ಎಲ್ಪಿಜಿ ಟ್ಯಾಂಕರ್ ಅಪಘಾತ, ಸ್ಫೋಟ ಪ್ರಕರಣದಲ್ಲಿ ಸಾವನ್ನಪ್ಪಿದವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ ಎಂದು ಶನಿವಾರ ತಿಳಿದುಬಂದಿದೆ. ಭೀಕರ ಅಪಘಾತದಲ್ಲಿ 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಗಾಯಾಳುಗಳಿಗೆ ಚಿಕಿತ್ಸೆ ಮುಂದುವರೆದಿದೆ. ಸುಟ್ಟುಹೋಗಿದ್ದ ಐವರ ಮೃತದೇಹಗಳು ಇದೀಗ ಪತ್ತೆಯಾಗಿದ್ದು, ಇದರೊಂದಿಗೆ ಮೃತರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು