Log In
BREAKING NEWS >
ಕರಾವಳಿಯಲ್ಲಿ ಹೆಚ್ಚಿದ ಬಿಸಿಲಿನ ತಾಪಮಾನ-ಸಾವು ಸ೦ಭವಿಸುವ ಸಾಧ್ಯತೆ-ಎಚ್ಚರ ಬಿಸಿಲಿನಲ್ಲಿ ಹೊರಗೆ ಬರಲೇ ಬೇಡಿ....

ಕೆಂಪಣ್ಣ ಆಯೋಗದ ವರದಿಯನ್ನು ನಾನು ಓದಿದ್ದೇನೆ, ನಾನು ಸುಳ್ಳು ಹೇಳುತ್ತಿಲ್ಲ, ಸಿದ್ದರಾಮಯ್ಯ ಸುಳ್ಳು ಹೇಳಿದ್ದಾರೆ: ಸಿಎಂ ಬೊಮ್ಮಾಯಿ

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಎಲ್ಲ ಪಕ್ಷಗಳು ತಮ್ಮದೇ ರೀತಿಯಲ್ಲಿ ಪ್ರಚಾರ ಕಾರ್ಯವನ್ನು ಜೋರಾಗಿ ನಡೆಸುತ್ತಿವೆ. ಈ ಮಧ್ಯೆ ಅರ್ಕಾವತಿ ಡಿನೋಟಿಫಿಕೇಷನ್ ಹಗರಣ ಮತ್ತೆ ಸದ್ದುಮಾಡುತ್ತಿದೆ.

ಚುನಾವಣೆ ಹೊತ್ತಲಿ ಅರ್ಕಾವತಿ ಡಿನೋಟಿಫಿಕೇಷನ್ ವಿಚಾರವಾಗಿ ಕಾಂಗ್ರೆಸ್ ಹಾಗೂ ಸರ್ಕಾರದ ನಡುವೆ ಆರೋಪ-ಪ್ರತ್ಯಾರೋಪ ಹೆಚ್ಚಾಗುತ್ತಿದ್ದು, ಈ ಹಗರಣವನ್ನ ಮುಚ್ಚಿ ಹಾಕುಲು ಸಿಎಂ ಬಸವರಾಜ ಬೊಮ್ಮಾಯಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ವಿರೋದ ಪಕ್ಷದ ನಾಯಕ ಸಿದ್ದರಾಮಯ್ಯ ನಿನ್ನೆ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದ್ದರು.

ಇಂದು ವಿಧಾನಸೌಧ ಆವರಣದಲ್ಲಿ ಕೆ ಸಿ ರೆಡ್ಡಿ ಕಂಚಿನ ಪ್ರತಿಮೆ ಅನಾವರಣಗೊಳಿಸಿದ ನಂತರ ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ನಾನು ಹೇಳಿದ್ದನ್ನು ಹೇಗೆ ಅವರು ಸುಳ್ಳು ಎನ್ನುತ್ತಾರೆ ಎಂದು ಪ್ರಶ್ನಿಸಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಮಿಷನ್ ರಿಪೋರ್ಟ್ ನ್ನು ನಾನು ಓದಿ ಹೇಳಿದ್ದೇನೆ. ಅವರು ನೇಮಿಸಿದ್ದ ಕೆಂಪಣ್ಣ ಆಯೋಗ ರಿಪೋರ್ಟ್ ನ್ನೇ ನಾನು ಓದಿ ಹೇಳಿದ್ದೇನೆ. ಸಿದ್ದರಾಮಯ್ಯ ಸುಳ್ಳು ಹೇಳಿದ್ದಾರೆ, ನಾನಲ್ಲ ಕೆಂಪಣ್ಣ ಆಯೋಗದ ವರದಿಯನ್ನು ನಾನು ಓದಿದ್ದೇನೆ. ಈ ಹಿನ್ನೆಲೆ ಸುಳ್ಳು ಹೇಳುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಅಧಿಕಾರಿಗಳು ವರದಿಯನ್ನು ತೆಗೆದುಕೊಂಡು ಬಂದಿದ್ದರೆಂದು ಅವರೇ ಹೇಳಿದ್ದಾರೆ. ಇದರ ಅರ್ಥ ಏನು, ಅವರು ಅಡ್ಮಿಷನ್ ಆದಾಗೆ ಅಲ್ವಾ? ವರದಿಯನ್ನು ಅನುಮೋದಿಸಿದ್ದೇನೆ ಎಂದು ಬರೆದಿದ್ದೇನೆ. ಆದೇಶದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ, ಅದನ್ನೇ ನಾನು ಹೇಳಿದ್ದೇನೆ. ಸಿದ್ದರಾಮಣ್ಣನವರು ಕಟುಸತ್ಯ ಎದುರಿಸುವ ಕಾಲ ಬಂದಿದೆ. ಈಗಾಗಲೇ ಏನು ಕ್ರಮ ಕೈಗೊಳ್ಳಬೇಕು ಅದನ್ನು ಮಾಡುತ್ತೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಅಂತರಿಕ್ಷದಲ್ಲಿ ಗ್ರಹಗಳ ನೃತ್ಯ ದರ್ಶನ ನೋಡಿದ್ರಾ? ಚಂದ್ರನನ್ನು ನೋಡಲು ಬಂದ ಗುರು- ಶುಕ್ರ ಅವರೇ ಹೇಳಿದ್ದಾರೆ, ಅಧಿಕಾರಿ ಗಳನ್ನು ತಂದಿದ್ದನ್ನು ನಾನೇ ಅನುಮೋದಿಸಿದ್ದು ಅಂತಾ, ಇದಕ್ಕಿಂತ ಸಾಕ್ಷಿ ಮತ್ತೇನು ಬೇಕು? ಅವರು ಮಾಡಿರೋದು ತಪ್ಪು ಅಂತಾ ಇದರಿಂದಲೇ ಗೊತ್ತಾಗುತ್ತಲ್ವಾ? ಅಡ್ವಕೇಟ್ ಜನರಲ್ ವಾದ ಆದಮೇಲೆ ಜಡ್ಜ್ ಏನು ಹೇಳಿದ್ದಾರೆ, ಅದು ಅಲ್ವಾ ಮುಖ್ಯ. ವಾದಗಳನ್ನು ನಮಗೆ ಬೇಕಾದಂತೆ ನಾವು ಮಾಡಿಕೊಳ್ಳುತ್ತೇವೆ. ಆದರೆ ಅಂತಿಮವಾಗಿ ಜಡ್ಜ್ ಕೊಟ್ಟ ತೀರ್ಪು ತಾನೇ ಮುಖ್ಯ. ಜಡ್ಜಮೆಂಟ್ ಹೇಳಿದ್ದೇನೆ, ಕಮಿಷನ್ ರಿಪೋರ್ಟ್ ಓದಿದ್ದೇನೆ. ಇದು ಕಟು ಸತ್ಯ, ಸಿದ್ದರಾಮಣ್ಣನವರು ಕಟು ಸತ್ಯವನ್ನು ಎದುರಿಸುವಂತಹ ಕಾಲ ಬಂದಿದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಮುಂದಿನ ದಿನಗಳಲ್ಲಿ ತನಿಖೆಗೂ ಸಿದ್ಧ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

No Comments

Leave A Comment