Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಹೆಣ್ಣು ಮಗುವಿನ ಬೆನ್ನಿನಲ್ಲಿ 6 ಸೆಂ.ಮೀ ಉದ್ದದ ಬಾಲ!

ಬ್ರೆಜಿಲ್‌:ಫೆ 19, ಬೆನ್ನಿನಲ್ಲಿ 6 ಸೆಂಟಿ ಮೀಟರ್ ಬಾಲದೊಂದಿಗೆ ಜನಿಸಿದ ಹೆಣ್ಣು ಮಗುವೊಂದಕ್ಕೆ ಬ್ರೆಜಿಲ್ ವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ ವೈದ್ಯರು ಬಾಲವನ್ನು ತೆಗೆದು ಹಾಕಿದ್ದಾರೆ. ಸದ್ಯ ಆಕೆ ನಡೆಯಲು ಶಕ್ತಳಾಗಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.

ಕಳೆದ ಮೂರು ವರ್ಷಗಳ ಹಿಂದೆ ಈ ಮಗುವಿನ ತಾಯಿಗೆ ಸಿಸೇರಿಯನ್ ನಡೆಸಿ ಹೆರಿಗೆ ಮಾಡಿಸಲಾಗಿತ್ತು. ಮಗು ಜನಿಸಿದಾಗ ಅದರ ಬೆನ್ನಿನಲ್ಲಿ 6 ಸೆಂಟಿ ಮೀಟರ್ ಬಾಲ ಇರುವುದನ್ನು ನೋಡಿ ವೈದ್ಯರೇ ಚಕಿತಗೊಂಡಿದ್ದರು. ಮಗುವಿನ ಬೆನ್ನುಮೂಳೆ ಮತ್ತು ಸೊಂಟ ಸಂಧಿಸುವ ಪ್ರದೇಶದ ಬಳಿಯಲ್ಲಿ ಈ ಬಾಲ ಪತ್ತೆಯಾಗಿತ್ತು.

ಮಗುವಿಗೆ ದೀರ್ಘಾವಧಿಯ ಚಿಕಿತ್ಸೆ ನೀಡಲಾಗಿತ್ತು. ಮೂತ್ರನಾಳದ ಸೋಂಕಿನಿಂದ ಬಳಲುತ್ತಿತ್ತು. ಪ್ರಸ್ತುತ ಮಗುವಿಗೆ ಮೂರು ವರ್ಷವಾಗಿದ್ದು, ಶಸ್ತ್ರಚಿಕಿತ್ಸೆ ಮುಖಾಂತರ ಯಶಸ್ವಿಯಾಗಿ ಬಾಲವನ್ನು ತೆಗೆದು ಹಾಕಲಾಗಿದೆ. ಸದ್ಯ ಆಕೆ ನಡೆಯಲು ಶಕ್ತಳಾಗಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.

No Comments

Leave A Comment