
ಐಪಿಎಸ್ vs ಐಎಎಸ್: ಡಿ ರೂಪಾ ವಿರುದ್ಧ ರೋಹಿಣಿ ಸಿಂಧೂರಿ ದೂರು? ದೂರಿನಲ್ಲಿ ಏನಿದೆ..?
ಬೆಂಗಳೂರು: ರಾಜ್ಯಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವ ಐಪಿಎಸ್ ಅಧಿಕಾರಿ ಡಿ ರೂಪಾ ಮತ್ತು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಜಗಳ ತಾರಕಕ್ಕೇರಿದ್ದು, ಇಂದು ರೋಹಿಣಿ ಸಿಂಧೂರಿ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ದೂರು ನೀಡಿದ್ದಾರೆ.
ವಿಧಾನಸೌಧಕ್ಕೆ ಆಗಮಿಸಿದ ರೋಹಿಣಿ ಸಿಂಧೂರಿ ಅವರು ಇಂದು ರಾಜ್ಯದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾರನ್ನು ಭೇಟಿ ಮಾಡಿ ದೂರು ಸಲ್ಲಿಕೆ ಮಾಡಿದ್ದಾರೆ. ಮನೆಯಿಂದ ನೇರವಾಗಿ ವಿಧಾನ ಸೌಧಕ್ಕೆ ತೆರಳಿದ ಅವರು ರಾಜ್ಯದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ (Vandita Sharma) ಅವರನ್ನು ಭೇಟಿಯಾಗಿ ರೂಪಾ ವಿರುದ್ಧ ದೂರು ಸಲ್ಲಿಸಿದರು. ರೋಹಿಣಿ ಅವರನ್ನು ಮಾಧ್ಯಮ ಹಾಗೂ ಸಾರ್ವಜನಿಕರನ್ನು ಸುತ್ತುವರಿದ ಕಾರಣ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿತ್ತು.
ಸಿಂಧೂರಿ ದೂರಿನಲ್ಲಿ ಏನಿದೆ..?
ಡಿ.ರೂಪಾ ತಮ್ಮ ವಿರುದ್ಧ ಆಧಾರ ರಹಿತ ಆರೋಪಗಳನ್ನ ಮಾಡ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಸೋಷಿಯಲ್ ಮೀಡಿಯಾ ಲಿಂಕ್ ನೀಡಲಾಗಿದೆ. ಆಲ್ ಇಂಡಿಯಾ ಸರ್ವಿಸ್ ಕಂಡೆಕ್ಟ್ ರೋಲ್ಡ್ ಉಲ್ಲಂಘನೆ ಮಾಡಲಾಗಿದೆ. ನನ್ನ ಮೇಲೆ ಇಪ್ಪತ್ತು ಸುಳ್ಳು ಆರೋಪಗಳನ್ನು ಡಿ.ರೂಪಾ ಮಾಡಿದ್ದಾರೆ. ಡಿ.ರೂಪಾ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸಿಎಸ್‌ಗೆ ರೋಹಿಣಿ ಆಗ್ರಹ ಮಾಡಿದ್ದಾರೆ.
ಅಂತೆಯೇ ನಾನು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿಲ್ಲ. ವೈಯಕ್ತಿಕ ಆರೋಪದ ಬಗ್ಗೆ ನನ್ನ ಗಂಡ ಮಾತನಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಆರೋಪ ಮಾಡಬಾರದು ಎಂದು ಸಿಎಸ್‌ಗೆ ಸಿಂಧೂರಿ ದೂರು ನೀಡಿದ್ದಾರೆ.
ಡಿ.ರೂಪಾ ಪ್ರಶ್ನೆಗಳಿಗೆ ರೋಹಿಣಿ ಉತ್ತರ
ಇನ್ನು ದೂರು ನೀಡಿರುವ ರೋಹಿಣಿ ಸಿಂಧೂರಿ ಇದರ ಬೆನ್ನಲ್ಲೇ ಡಿ ರೂಪಾ ಅವರ ಪ್ರಶ್ನೆಗಳಿಗೆ ಉತ್ತರಗಳನ್ನೂ ನೀಡಿದ್ದಾರೆ.
ರೂಪಾ ಪ್ರಶ್ನೆ : ಆಕ್ಸಿಜನ್ ದುರಂತದಲ್ಲಿ ಈಕೆ ಮೇಲೆ ಆಪಾದನೆಗಳಿವೆ
ಸಿಂಧೂರಿ ಉತ್ತರ: ಅಕ್ಸಿಜನ್ ದುರಂತದಲ್ಲಿ ನನ್ನ ತಪ್ಪಿಲ್ಲವೆಂದು ಕೋರ್ಟ್ ಹೇಳಿದೆ
ರೂಪಾ ಪ್ರಶ್ನೆ : ಕೆಲ ಐಎಎಸ್‌ಗಳಿಗೆ ತಮ್ಮ ಚಿತ್ರ ಕಳಿಸಿ ಉತ್ತೇಜಸಿದ್ದಾರೆ.
ಸಿಂಧೂರಿ ಉತ್ತರ: ಅಧಿಕಾರಿಗಳಿಗೆ ಫೋಟೋ ಶೇರ್ ಮಾಡಿದ ಆರೋಪ ಸುಳ್ಳು
ರೂಪಾ ಪ್ರಶ್ನೆ : ಖುದ್ದು ಅಡ್ವಕೇಟ್ ಜನರಲ್ ಈಕೆ ಪರ ವಾದ ಮಾಡಿದ್ದಾರೆ
ಸಿಂಧೂರಿ ಉತ್ತರ: ವಕೀಲರ ನೇಮಕ ಸರ್ಕಾರದ ವಿವೇಚನೆಗೆ ಬಿಟ್ಟಿದ್ದು
ರೂಪಾ ಪ್ರಶ್ನೆ : ಪತಿಯ ಬ್ಯಸಿನೆಸ್‌ಗೆ ಐಎಎಸ್ ಅಧಿಕಾರದಿಂದ ಸಹಾಯ
ಸಿಂಧೂರಿ ಉತ್ತರ: ನನ್ನ ಪತಿಯ ಬಿಸಿನೆಸ್ ಸ್ವತಂತ್ರವಾಗಿದೆ, ನಾನು ಭಾಗಿಯಾಗಿಲ್ಲ