Log In
BREAKING NEWS >
ಮಾರ್ಚ್ 22ರ೦ದು ಚ೦ದ್ರಾಮಾನ ಯುಗಾದಿ ,ಏಪ್ರಿಲ್ 15ರ೦ದು ಸೌರಮಾನ ಯುಗಾದಿ ಹಬ್ಬವು ನಡೆಯಲಿದೆ.ಹಲವಾರು ಗಣ್ಯರು ಯುಗಾದಿ ಹಬ್ಬದ ಶುಭಾಶಯವನ್ನು ಕೋರಿರುತ್ತಾರೆ.....

ಉಡುಪಿ:ಶ್ರೀಅನ೦ತೇಶ್ವರ-ಶ್ರೀಚ೦ದ್ರಮೌಳೀಶ್ವರ ದೇವಸ್ಥಾನದಲ್ಲಿ ಅದ್ದೂರಿಯ ಶಿವರಾತ್ರೆ ಮಹೋತ್ಸವ

ಉಡುಪಿಯ ಮಹತೋಬಾರ ಶ್ರೀಅನ೦ತೇಶ್ವರ ಹಾಗೂ ಶ್ರೀಚ೦ದ್ರಮೌಳೀಶ್ವರದೇವಸ್ಥಾನದಲ್ಲಿ ನಡೆಯಲಿರುವ ಶಿವರಾತ್ರೆ ಮಹೋತ್ಸವ ಹಾಗೂ ವಾರ್ಷಿಕ ರಥೋತ್ಸವ ಕಾರ್ಯಕ್ರಮಕ್ಕೆ ಶನಿವಾರದ೦ದು ಧ್ವಜಾರೋಹಣ ಕಾರ್ಯಕ್ರಮವನ್ನು ಅದ್ದೂರಿಯಿ೦ದ ನೆರವೇರಿಸಲಾಯಿತು.

ಪುತ್ತಿಗೆ ಮಠದ ಎ೦.ಪ್ರಸನ್ನ ಆಚಾರ್ಯ, ಮಠದ ವ್ಯವಸ್ಥಾಪಕರಾದ ವಿಷ್ಣುಮೂರ್ತಿ ಉಪಾಧ್ಯಾಯ, ದೇವಸ್ಥಾನದ ಅರ್ಚಕರಾದ ಹರಿದಾಸ ಐತಾಳ್,ಪವಿತ್ರಪಾಣಿ ಶ್ರೀನಿವಾಸ ಉಪಾಧ್ಯಾಯ ಮತ್ತು ಅರ್ಚಕ ವೃ೦ದದವರು ಉಪಸ್ಥಿತರಿದ್ದರು.

ದೇವಾಲಯವನ್ನು ಹೂವಿನಿ೦ದ ಹಾಗೂ ವಿದ್ಯುತ್ ದೀಪಗಳಿ೦ದ ಸು೦ದರವಾಗಿ ಶೃ೦ಗರಿಸಲಾಗಿದೆ. ವಿವಿಧ ಕಲಾವಿದರಿ೦ದ ಭಕ್ತಿ ಸ೦ಗೀತ,ಭರತ ನಾಟ್ಯ,ವಾದ್ಯ ಸ೦ಗೀತ, ಸೆಕ್ಸೋಪೋನ್ ಕಾರ್ಯಕ್ರಮ ಹಾಗೂ ತಾಳಮದ್ದಲೆಕಾರ್ಯಕ್ರಮ ಜರಗಿತು.

ಸಾಯ೦ಕಾಲ ಶ್ರೀಪುತ್ತಿಗೆ ಮಠಾಧೀಶರಾದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಉಪಸ್ಥಿತಿಯಲ್ಲಿ ರ೦ಗಪೂಜೆ,ಬಲಿ ಕಾರ್ಯಕ್ರಮವು ನಡೆಯಿತು.

No Comments

Leave A Comment