Log In
BREAKING NEWS >
ಮಾರ್ಚ್ 22ರ೦ದು ಚ೦ದ್ರಾಮಾನ ಯುಗಾದಿ ,ಏಪ್ರಿಲ್ 15ರ೦ದು ಸೌರಮಾನ ಯುಗಾದಿ ಹಬ್ಬವು ನಡೆಯಲಿದೆ.ಹಲವಾರು ಗಣ್ಯರು ಯುಗಾದಿ ಹಬ್ಬದ ಶುಭಾಶಯವನ್ನು ಕೋರಿರುತ್ತಾರೆ.....

ಭಾರತದ ಮಾಜಿ ಫುಟ್ಬಾಲ್ ಆಟಗಾರ ತುಳಸೀದಾಸ್ ಬಲರಾಮ್ ನಿಧನ

ನವದೆಹಲಿ:ಫೆ 16. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಫುಟ್ಬಾಲ್ ಆಟಗಾರ ಮತ್ತು ಒಲಿಂಪಿಯನ್ ತುಳಸೀದಾಸ್ ಬಲರಾಮ್ ಅವರು ಗುರುವಾರ ನಿಧನ ಹೊಂದಿದ್ದಾರೆ.

87 ವರ್ಷ ವಯಸ್ಸಿನ ಬಲರಾಮ್ ಉತ್ತರಪಾರಾದ ಹೂಗ್ಲಿ ನದಿಯ ದಡದಲ್ಲಿರುವ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದರು. ಮೂತ್ರದ ಸೋಂಕು ಮತ್ತು ಕಿಬ್ಬೊಟ್ಟೆಯ ಹಿಗ್ಗುವಿಕೆ ಚಿಕಿತ್ಸೆಗಾಗಿ ಕಳೆದ ಡಿಸೆಂಬರ್ 26ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮಧ್ಯಾಹ್ನ ಇಹಲೋಕ ತ್ಯಜಿಸಿದರು.

1962ರಲ್ಲಿ ಏಷ್ಯಾಡ್ ಚಾಂಪಿಯನ್ ಆಗಿದ್ದ ಅವರು, ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಪಡೆದಿದ್ದರು. ಫುಟ್ಬಾಲ್‌ನಲ್ಲಿ ರಾಷ್ಟ್ರ, ಅಂತಾರಾಷ್ಟ್ರ ಮಟ್ಟದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು.

No Comments

Leave A Comment