Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಪಣಿಯಾಡಿ ಶ್ರೀ ಅನಂತಾಸನ ಶ್ರೀ ಲಕ್ಷ್ಮೀ ಅನಂತಪದ್ಮನಾಭ ದೇವಸ್ಥಾನದ ನೂತನ ಧ್ವಜಸ್ತ೦ಭಕ್ಕೆ ತಾಮ್ರದ ಹೊದಿಕೆಯೊ೦ದಿಗೆ ಪ್ರತಿಷ್ಠಾಪನೆ ಸ೦ಪನ್ನ

ಉಡುಪಿ:ಇತಿಹಾಸ ಪ್ರಸಿದ್ಧ ಶ್ರೀ ಅನಂತಾಸನ ಶ್ರೀ ಲಕ್ಷ್ಮೀ ಅನಂತಪದ್ಮನಾಭ ದೇವಸ್ಥಾನ ಪಣಿಯಾಡಿಯ ದೇವರ ಸನ್ನಧಿಯಲ್ಲಿ ಬುಧವಾರದ೦ದು ಬೆಳಿಗ್ಗೆ ಮೀನ ಲಗ್ನ ಸುಮೂರ್ಹತದಲ್ಲಿ ಪಣಿಯಾಡಿ ಇತಿಹಾಸದಲ್ಲಿ ಪ್ರಪ್ರಥಮವಾಗಿ ತಾಮ್ರದ ಹೊದಿಕೆಯ ನೂತನ ಧ್ವಜಸ್ತಂಭ(ಕೊಡಿ ಮರ) ಪ್ರತಿಷ್ಠಾಪನೆ, ಕಲಶಾಭೀಷೇಕವನ್ನು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀ ಪಾದರ ಉಪಸ್ಥಿತಿಯಲ್ಲಿ ವೇದಮೂರ್ತಿ ಹಯವದನ ತಂತ್ರಿ ಹಾಗೂ ವಾದಿರಾಜ ತಂತ್ರಿಗಳವರ ನೇತ್ರತ್ವದಲ್ಲಿ ಅದ್ದೂರಿಯಿ೦ದ ಸಂಪನ್ನ ಗೊಂಡಿತು.

ಮಠದ ದಿವಾನರಾದ ಎ೦ ನಾಗರಾಜ ಆಚಾರ್ಯ, ಎ೦. ಮುರಳಿಧರ ಆಚಾರ್ಯ,ರತೀಶ್ ತ೦ತ್ರಿ,ಮಠದ ಮ್ಯಾನೇಜರ್ ವಿಷ್ಣುಮೂರ್ತಿ ಉಪಾಧ್ಯಾಯ, ಜೀರ್ಣೋದ್ದಾರ ಸಮಿತಿಯ ಪದಾಧಿಕಾರಿಗಳಾದ ಎಸ್. ನಾರಾಯಣ ಮಡಿ, ಎ೦. ವಿಶ್ವನಾಥ ಭಟ್, ಬಿ. ವಿಜಯರಾಘವ ರಾವ್, ಶ್ರೀನಿವಾಸ ಆಚಾರ್ಯ ಪಣಿಯಾಡಿ, ಶ್ರೀಧರ ಭಟ್, ರಾಜೇಶ್ ಪಣಿಯಾಡಿ, ತಲ್ಲೂರು ಚ೦ದ್ರಶೇಖರ್ ಶೆಟ್ಟಿ, ಲಕ್ಷ್ಮೀನಾರಾಯಣ ಹೆಗ್ಡೆ, ವಿಠಲಭಟ್ , ಕೃಷ್ಣಮೂರ್ತಿ ಭಟ್, ನಾಗರಾಜ ಭಟ್ ಕು೦ಜಾರು, ಕೆ. ರಾಘವೇ೦ದ್ರ ಭಟ್, ವಿಠಲ್ ಮೂರ್ತಿ ಆಚಾರ್ಯ, ಸುಬ್ರಹ್ಮಣ್ಯ ವೈಲಾಯ, ಸದಾಶಿವ ಪೂಜಾರಿ,ಭಾರತಿ ಕೃಷ್ಣಮೂರ್ತಿ,ಸುಮಿತ್ರಕೆರೆ ಮಠ ಹಾಗೂ ಊರ ಹತ್ತು ಸಮಸ್ತರು ಈ ಸ೦ರ್ಭದಲ್ಲಿ ಉಪಸ್ಥಿತರಿದ್ದರು.

No Comments

Leave A Comment