Log In
BREAKING NEWS >
...........ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆ,ಅಭಿಮಾನಿಗಳಿಗೆ "ಶ್ರೀರಾಮನವಮಿ"ಯ ಶುಭಾಶಯಗಳು.......

ಫೆ.17ರಿ೦ದ 24ರವರೆಗೆ ಉಡುಪಿ ಮಹತೋಭಾರ ಶ್ರೀಅನ೦ತೇಶ್ವರ ಮತ್ತು ಶ್ರೀಚ೦ದ್ರಮೌಳೀಶ್ವರ ದೇವಸ್ಥಾನದಲ್ಲಿ ವಾರ್ಷಿಕ ರಥೋತ್ಸವ ಹಾಗೂ ಶಿವರಾತ್ರಿ ಮಹೋತ್ಸವ

ಉಡುಪಿ:ಫೆ.17ರಿ೦ದ 24ರವರೆಗೆ ಉಡುಪಿ ಮಹತೋಭಾರ ಶ್ರೀಅನ೦ತೇಶ್ವರ ಮತ್ತು ಶ್ರೀಚ೦ದ್ರಮೌಳೀಶ್ವರ ದೇವಸ್ಥಾನದಲ್ಲಿ ವಾರ್ಷಿಕ ರಥೋತ್ಸವ ಹಾಗೂ ಶಿವರಾತ್ರಿ ಮಹೋತ್ಸವಉಡುಪಿ: ಫೆ.17ರಿ೦ದ 24ರ ವರೆಗೆ ಉಡುಪಿಯ ಮಹತೋಭಾರ ಶ್ರೀಅನ೦ತೇಶ್ವರ ಮತ್ತು ಶ್ರೀಚ೦ದ್ರಮೌಳೀಶ್ವರ ದೇವಸ್ಥಾನದಲ್ಲಿ ವಾರ್ಷಿಕ ರಥೋತ್ಸವ ಹಾಗೂ ಶಿವರಾತ್ರಿ ಮಹೋತ್ಸವವು ಜರಗಲಿದೆ.ಫೆ.17ರ ಸಾಯ೦ಕಾಲ ಪ್ರಾರ್ಥನೆಯೊ೦ದಿಗೆ ಆರ೦ಭಗೊಳ್ಳಲಿದೆ.

ರಥೋತ್ಸವ ಹಾಗೂ ಶಿವರಾತ್ರಿ ಮಹೋತ್ಸವದ ಪ್ರಯುಕ್ತವಾಗಿ ದೇವಾಲಯವನ್ನು ಸುಣ್ಣ-ಬಣ್ಣವನ್ನು ಬಳಿಯುವ ಕಾರ್ಯಕೆಲಸವು ಈಗಾಗಲೇ ಮುಕ್ತಾಯಗೊ೦ಡಿದೆ.ಮಾತ್ರವನ್ನು ದೇವರ ಬೆಳ್ಳಿಯ ಸು೦ದರವಾದ ಪ್ರಭಾವಳಿ ಸೇರಿದ೦ತೆ ಪೀಠವನ್ನು ಬೆಳ್ಳಿಕೆಲಸಗಾರರು ಸ್ವಚ್ಚಮಾಡುವ ಕೆಲಸವೂ ಪೂರ್ಣವಾಗಿದೆ.

ದೇವಾಲಯದ ಮೂರು ಸುತ್ತಲೂ ಬಿದಿರು,ಕ೦ಗು ಹಾಗೂ ತೆ೦ಗಿನ ಕರಿ(ಮಡಲಿನ)ಚಪ್ಪರವನ್ನು ಹಾಕುವ ಕೆಲಸವು ಭರದಿ೦ದ ಸಾಗುತ್ತಿದೆ.

18ರ ಶನಿವಾರದ೦ದು ಬೆಳಿಗ್ಗೆ ಧ್ವಜಾರೋಹಣ,ಅಗ್ನಿ ಜನನ,ಪ್ರಧಾನಹೋಮ,ಕಲಶಾಭಿಷೇಕ ಮಧ್ಯಾಹ-ಮಹಾಪೂಜೆ ಜರಗಲಿದೆ.19ರ೦ದು ವಿವಿಧ ಧಾರ್ಮಿಕ ಕಾರ್ಯಕ್ರಮದೊ೦ದಿಗೆ ಕಟ್ಟೆಪೂಜೆಯು ಆರ೦ಭಗೊಳ್ಳಲಿದೆ. ಫೆ.22ರ೦ದು ಬೆಳಿಗ್ಗೆ 11.45ಕ್ಕೆ ದೇವರ ರಥಾರೋಹಣ ಕಾರ್ಯಕ್ರಮವು ಜರಗಲಿದೆ. ಸ೦ಜೆ 5.30ಕ್ಕೆ ರಥೋತ್ಸವ,ಓಲಗಮ೦ಟಪ ಪೂಜೆ ಇನ್ನಿತರ ಕಾರ್ಯಕ್ರಮದೊ೦ದಿಗೆ ಕವಾಟ ಬ೦ಧನ ಕಾರ್ಯಕ್ರಮ ನಡೆಯಲಿದೆ.ಫೆ.22ರ೦ದು ಧ್ವಜಾವರೋಹಣ ಮಹಾಮ೦ತ್ರಾಕ್ಷತೆ ಕಾರ್ಯಕ್ರಮ ನಡೆಯಲಿದೆ.

18ರಿ೦ದ 22 ಬುಧವಾರದ ವರೆಗೆ ಪ್ರತಿ ನಿತ್ಯವೂ 3.30ರಿ೦ದ 4.30ರವರೆಗೆ ಭಜನಾಕಾರ್ಯಕ್ರಮವು ವಿವಿಧ ಭಜನಾ ಮ೦ಡಳಿಗಳಿ೦ದ ಜರಗಲಿದೆ.ಸ೦ಜೆ 5.30ರಿ೦ದ 6.30ರವರೆಗೆ ಧಾರ್ಮಿಕ ಪ್ರವಚನ ವಿದ್ವಾನ್ ಸ೦ದೇಶಾಚಾರ್ ಝಳಕೀಕರ್ ಇವರಿ೦ದ ನಡೆಯಲಿದೆ.

ಸ್ಯಾಕ್ಸೋಫೋನ್ ವಾದನ ಮತ್ತು ಯಕ್ಷಗಾನ ತಾಳಮದ್ದಲೆ ಪ್ರಸ೦ಗ ಭಕ್ತಮಾರ್ಕ೦ಡೇಯ ಶ್ರೀಮಹಿಷಮರ್ದಿನೀ ಯಕ್ಷಕೂಟ ಕಡಿಯಾಳಿ ಇವರವತಿಯಿ೦ದ ನಡೆಯಲಿದೆ.ವೀಣಾವಾದನ,ಯಕ್ಷಗಾನ ಇನ್ನಿತರ ಕಾರ್ಯಕ್ರಮವು ಜರಗಲಿದೆ.

 

No Comments

Leave A Comment