Log In
BREAKING NEWS >
ಮಾರ್ಚ್ 22ರ೦ದು ಚ೦ದ್ರಾಮಾನ ಯುಗಾದಿ ,ಏಪ್ರಿಲ್ 15ರ೦ದು ಸೌರಮಾನ ಯುಗಾದಿ ಹಬ್ಬವು ನಡೆಯಲಿದೆ.ಹಲವಾರು ಗಣ್ಯರು ಯುಗಾದಿ ಹಬ್ಬದ ಶುಭಾಶಯವನ್ನು ಕೋರಿರುತ್ತಾರೆ.....

ಮಹಿಳಾ ಐಪಿಎಲ್ ಹರಾಜು: ರೂ. 3.4 ಕೋಟಿಗೆ ಆರ್ ಸಿಬಿ ಪಾಲಾದ ಸ್ಮೃತಿ ಮಂದಾನ!

ಮುಂಬೈ: ದೇಶದಲ್ಲಿ ಮೊದಲ ಬಾರಿಗೆ ನಡೆಯಲಿರುವ ಮಹಿಳಾ ಪ್ರೀಮಿಯರ್ ಲೀಗ್ 2023 ರ ಹರಾಜು ಪ್ರಕ್ರಿಯೆ ಮುಂಬೈಯಲ್ಲಿ ನಡೆಯುತ್ತಿದ್ದು,  ಭಾರತದ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ ರೂ. 3.4 ಕೋಟಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲಾಗಿದ್ದಾರೆ.

ಸ್ಮೃತಿ ಮಂದಾನ ಅವರ ಮೂಲ ಬೆಲೆ ರೂ.50 ಲಕ್ಷ ಆಗಿತ್ತು. ಭಾರತ ಟಿ-20 ಉಪ ನಾಯಕಿ ಖರೀದಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ನಡುವೆ ತೀವ್ರ ಹೋರಾಟ ನಡೆಯಿತು. ಅಂತಿಮವಾಗಿ ಆರ್ ಸಿಬಿ ಸ್ಮೃತಿ ಮಂದನಾ ಅವರನ್ನು ಖರೀದಿಸುವಲ್ಲಿ ಸಫಲವಾಯಿತು. ಟೀಂ ಇಂಡಿಯಾ ನಾಯಕಿ ಹರ್ಮನ್ ಪ್ರೀತ್ ಕೌರ್ ಅವರನ್ನು ಮುಂಬೈ ಇಂಡಿಯನ್ಸ್ ರೂ. 1.8 ಕೋಟಿಗೆ ಖರೀದಿಸಿತು.

ಇನ್ನೂ ಆಸ್ಟ್ರೇಲಿಯಾದ ಆಟಗಾರ್ತಿ ಬೆತ್ ಮೂನೀ ರೂ. 2 ಕೋಟಿಗೆ ಗುಜರಾತ್ ಜೈಂಟ್ಸ್ ತಂಡ ಸೇರಿದರು. ದಕ್ಷಿಣ ಆಫ್ರಿಕಾದ ಆಟಗಾರ್ತಿ ಶಬ್ನಿಮ್ ಇಸ್ಮಾಯಿಲ್ ಅವರನ್ನು ರೂ.1  ಕೋಟಿಗೆ ಯುಪಿ ವಾರಿಯರ್ಸ್ ತಂಡ ಖರೀದಿಸಿತು. ನ್ಯೂಜಿಲೆಂಡ್ ಆಟಗಾರ್ತಿ ಅಮೆಲಿಯಾ ಕೆರ್ ಮುಂಬೈ ಇಂಡಿಯನ್ಸ್ ಗೆ ರೂ.1 ಕೋಟಿಗೆ ಬಿಕರಿಯಾದರು.

 ಐಪಿಎಲ್ ಹರಾಜುಗಾಗಿ ಒಟ್ಟಾರೇ,1,525 ಆಟಗಾರ್ತಿಯರು ಹೆಸರು ನೋಂದಾಯಿಸಿಕೊಂಡಿದ್ದು, ಅಂತಿಮ ಪಟ್ಟಿಯಲ್ಲಿ 409 ಆಟಗಾರ್ತಿಯರನ್ನು ಹೆಸರಿಸಲಾಯಿತು. ಮಾರ್ಚ್ 4ರಿಂದ 24ರವರೆಗೂ ಮುಂಬೈನಲ್ಲಿ ಮಹಿಳಾ ಐಪಿಎಲ್ ಉದ್ಘಾಟನಾ ಪಂದ್ಯಗಳು ನಡೆಯಲಿವೆ.

No Comments

Leave A Comment