Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಬ್ರಾಹ್ಮಣ ಮತ್ತು ಗಂಡಸು ಆಗಿ ‘ಆಕಸ್ಮಿಕವಾಗಿ’ ಜನಿಸಿದವರೆಲ್ಲರೂ ಒಂದೇ ಆಗಿರುವುದಿಲ್ಲ: ಹಿಂದುತ್ವ ಬ್ರಾಹ್ಮಣ ಪುರುಷರಿಂದ ಆರ್ ಎಸ್ ಎಸ್ ಆರಂಭ’

ಬೆಂಗಳೂರು: ನಟ ಚೇತನ್ ಒಂದಿಲ್ಲೊಂದು ಕಾರಣದಿಂದ ಸದಾ ಸುದ್ದಿಯಲ್ಲಿರುತ್ತಾರೆ, ಸದ್ಯ ರಾಜ್ಯದಲ್ಲಿ ಬ್ರಾಹ್ಮಣ ಮುಖ್ಯಮಂತ್ರಿ ಬಗ್ಗೆ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಚೇತನ್ ಪ್ರತಿಕ್ರಿಯಿಸಿದ್ದಾರೆ.

ಈ ಸಂಬಂಧ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಚೇತನ್ ಕುಮಾರ್,  ಬ್ರಾಹ್ಮಣ ಮತ್ತು ಗಂಡಸು ಆಗಿ ‘ಆಕಸ್ಮಿಕವಾಗಿ’ ಜನಿಸಿದವರೆಲ್ಲರೂ ಒಂದೇ ಆಗಿರುವುದಿಲ್ಲ, ಉದಾರವಾದಿ ಬ್ರಾಹ್ಮಣ ಪುರುಷರು ಅಧಿಕಾರಕ್ಕಾಗಿ 1885 ರಲ್ಲಿ ಕಾಂಗ್ರೆಸ್ ಅನ್ನು ಪ್ರಾರಂಭಿಸಿದರು , ಹಿಂದುತ್ವ ಬ್ರಾಹ್ಮಣ ಪುರುಷರು ಸುಳ್ಳು ಇತಿಹಾಸದ ಮೇಲೆ 1925 ರಲ್ಲಿ RSS ನ್ನು ಪ್ರಾರಂಭಿಸಿದರು ಎಂದು ಹೇಳಿದ್ದಾರೆ.

ಇನ್ನು ಮುಂದುವರಿದು ಬರೆದಿರುವ ಅವರು,  ಕಮ್ಯುನಿಸ್ಟ್ ಬ್ರಾಹ್ಮಣ ಪುರುಷರು ಆರ್ಥಿಕ ಬದಲಾವಣೆಗಾಗಿ 1925 ರಲ್ಲಿ ಸಿಪಿಐ ಪ್ರಾರಂಭಿಸಿದರು, ಸಮಾನತವಾದಿ ಬ್ರಾಹ್ಮಣ ಪುರುಷರು ನಿಜವಾದ ನ್ಯಾಯಕ್ಕಾಗಿ ನಮ್ಮೊಂದಿಗೆ ಕೆಲಸ ಮಾಡಬೇಕು, ಹೋರಾಡಬೇಕು ಮತ್ತು ದೇಶ ನಿರ್ಮಿಸಬೇಕು ಎಂದು ಸಂದೇಶ ನೀಡಿದ್ದಾರೆ.

No Comments

Leave A Comment