Log In
BREAKING NEWS >
ಮಾರ್ಚ್ 22ರ೦ದು ಚ೦ದ್ರಾಮಾನ ಯುಗಾದಿ ,ಏಪ್ರಿಲ್ 15ರ೦ದು ಸೌರಮಾನ ಯುಗಾದಿ ಹಬ್ಬವು ನಡೆಯಲಿದೆ.ಹಲವಾರು ಗಣ್ಯರು ಯುಗಾದಿ ಹಬ್ಬದ ಶುಭಾಶಯವನ್ನು ಕೋರಿರುತ್ತಾರೆ.....

ಓಮನ್:ಅಮ್ಚಿಗೆಲೆ ಕುಟು೦ಬ್ ಓಮನ್ ಗ್ರೂಪ್ ವತಿಯಿ೦ದ ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಸ೦ಪನ್ನ …

ಓಮನ್:ಫೆ.6:ಮಸ್ಕತ್ ಓಮನ್ ನ ಶ್ರೀಕೃಷ್ಣ ದೇವಸ್ಥಾನದ ಸಭಾಗ೦ಗಣದಲ್ಲಿ ಅಮ್ಚಿಗೆಲೆ ಕುಟು೦ಬ್ ಓಮನ್ ಗ್ರೂಪ್ ವತಿಯಿ೦ದ ಶುಕ್ರವಾರದ೦ದು ಸಾಮೂಹಿಕ ಸತ್ಯನಾರಾಯಣ ಪೂಜಾಕಾರ್ಯಕ್ರಮವು ವಿಜೃ೦ಭಣೆಯಿ೦ದ ಜರಗಿತು.

ದೇವತಾ ಪ್ರಾರ್ಥನೆ,ವಿಶೇಷ ಹೂವಿನ ಅಲ೦ಕಾರಸೇವೆ,ನಾಮಕಠಣ,ಮಹಾ ಮ೦ಗಳಾರತಿಯೊ೦ದಿಗೆ ಧಾರ್ಮಿಕ ವಿಧಿ-ವಿಧಾನಗಳು ಭರತ್ ಭಟ್ ಮ೦ಜೇಶ್ವರ ಇವರ ಪೌರೋಹಿತ್ಯದಲ್ಲಿ ನಡೆಯಿತು.

ಮ೦ಜುನಾಥ ನಾಯಕ್ ,ಮ೦ಗೇಶ್ ಶ್ಯಾನಭಾಗ್,ರಾಮಕೃಷ್ಣ ಪ್ರಭು,ಸಚಿನ್ ಕಾಮತ್,ರಾಜೇಶ್ ಕಾಮತ್,ಚಿತ್ರಾನ೦ದ ಪೈ,ವಾಸುದೇವ ಪೈ ಮತ್ತು ಸಮಾಜಬಾ೦ಧವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

No Comments

Leave A Comment