Log In
BREAKING NEWS >
```````ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆಮತ್ತು ಅಭಿಮಾನಿಗಳಿಗೆ ಶ್ರೀಗೌರಿ-ಗಣೇಶ ಹಬ್ಬದ ಶುಭಾಶಯಗಳು````````

ಪಾಕ್ ಮಾಜಿ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ನಿಧನ

ದುಬೈ:ಫೆ 06: ಪಾಕಿಸ್ತಾನದ ಮಾಜಿ ಅಧ್ಯಕ್ಷ, ಹಾಗೂ ಸೇನಾ ಮುಖ್ಯಸ್ಥ ಜನರಲ್ ಪರ್ವೇಜ್ ಮುಷರಫ್ (79) ನಿಧನರಾಗಿದ್ದಾರೆ. ಬಹಳ ದಿನಗಳಿಂದ ದುಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಭಾನುವಾರ ನಿಧನರಾಗಿದ್ದಾರೆಂದು ಪಾಕಿಸ್ತಾನದ ಜಿಯೋ ನ್ಯೂಸ್ ವರದಿ ಮಾಡಿದೆ.

ಸೇನಾ ಮುಖ್ಯಸ್ಥರಾಗಿದ್ದ ಅವರು 1999ರಲ್ಲಿ ಸೇನಾ ಬಲ ಬಳಸಿಕೊಂಡು ಆಗಿನ ಪ್ರಧಾನಿ ನವಾಜ್ ಷರೀಫ್ ಅವರ ವಿರುದ್ಧ ರಕ್ತಪಾತರಹಿತ ದಂಗೆ ನಡೆಸಿ, ಅಧಿಕಾರವನ್ನು ಕಿತ್ತುಕೊಂಡಿದ್ದರು. ಬಳಿಕ 2001ರಿಂದ 2008ರ ಅವಧಿಯಲ್ಲಿ ಪಾಕಿಸ್ತಾನದ ಅಧ್ಯಕ್ಷರಾಗಿ ಆಡಳಿತ ನಡೆಸಿದ್ದರು. ಭಾರತದ ವಿರುದ್ಧ ಕಾರ್ಗಿಲ್ ಯುದ್ಧವನ್ನು ಆರಂಭಿಸಿ ಮುಖಭಂಗ ಅನುಭವಿಸಿದ್ದರು.

2007ರಲ್ಲಿ ಸಂವಿಧಾನವನ್ನು ಅಮಾನತು ಮಾಡಿದ ಆರೋಪದಲ್ಲಿ ದೇಶದ್ರೋಹ ಪ್ರಕರಣ ಅವರ ಮೇಲಿದೆ. 2014ರಲ್ಲಿ ಈ ಪ್ರಕರಣ ದಾಖಲಾಗಿದೆ

ಮುಷರಫ್ ಅವರು 11 ಆಗಸ್ಟ್ 1943 ರಂದು ಹಳೆಯ ದೆಹಲಿಯಲ್ಲಿ ಜನಿಸಿದ್ದರು.

No Comments

Leave A Comment