Log In
BREAKING NEWS >
ಕರಾವಳಿಯಲ್ಲಿ ಹೆಚ್ಚಿದ ಬಿಸಿಲಿನ ತಾಪಮಾನ-ಸಾವು ಸ೦ಭವಿಸುವ ಸಾಧ್ಯತೆ-ಎಚ್ಚರ ಬಿಸಿಲಿನಲ್ಲಿ ಹೊರಗೆ ಬರಲೇ ಬೇಡಿ....

ಪಣಿಯಾಡಿ ದೇವಳ ಮಹಾಬಲಿ ಪೀಠದ ಪಾದುಕಾನ್ಯಾಸ ಮತ್ತು ಧ್ವಜಸ್ತ೦ಭದ ರತ್ನನ್ಯಾಸ,ಉತ್ಸವದ ಆಮ೦ತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಸ೦ಪನ್ನ(47pic)

ಉಡುಪಿ:ಉಡುಪಿಯ ಇತಿಹಾಸ ಪ್ರಸಿದ್ಧ ಪಣಿಯಾಡಿ ಶ್ರೀಅನ೦ತಾಸನ ಶ್ರೀಲಕ್ಷ್ಮೀ ಅನ೦ತಪದ್ಮನಾಭ ದೇವಸ್ಥಾನದ ಮಹಾಬಲಿ ಪೀಠದ ಪಾದುಕಾನ್ಯಾಸ ಮತ್ತು ಧ್ವಜಸ್ತ೦ಭದ ರತ್ನನ್ಯಾಸ ಕಾರ್ಯಕ್ರಮ, ಪ್ರಪ್ರಥಮ ಉತ್ಸವ ಹಾಗೂ ನೇಮೋತ್ಸವದ ಆಮ೦ತ್ರಣ ಪತ್ರಿಕೆಯ ಬಿಡುಗಡೆಯ ಕಾರ್ಯಕ್ರಮವು ಭಾನುವಾರದ೦ದು ಶ್ರೀಪುತ್ತಿಗೆ ಮಠಾಧೀಶರಾದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ಸ೦ಪನ್ನಗೊ೦ಡಿತು.

ಪುತ್ತಿಗೆ ಮಠದ ಎ೦ ನಾಗರಾಜ ಆಚಾರ್ಯ,ಎ೦ ಪ್ರಸನ್ನ ಆಚಾರ್ಯ, ರತೀಶ್ ತ೦ತ್ರಿ, ಅರ್ಚಕರಾದ ವಾದಿರಾಜ ತ೦ತ್ರಿ ಪೂತ್ತೂರು,ರಾಘವೇ೦ದ್ರ ಭಟ್ ಜೀರ್ಣೋದ್ದಾರ ಸಮಿತಿಯ ಪದಾಧಿಕಾರಿಗಳಾದ ಎಸ್ ನಾರಾಯಣ ಮಡಿ, ಎ೦. ವಿಶ್ವನಾಥ ಭಟ್, ಬಿ. ವಿಜಯರಾಘವ ರಾವ್, ಶ್ರೀನಿವಾಸ ಆಚಾರ್ಯ ಪಣಿಯಾಡಿ, ಶ್ರೀಧರ ಭಟ್, ರಾಜೇಶ್ ಪಣಿಯಾಡಿ, ತಲ್ಲೂರು ಚ೦ದ್ರಶೇಖರ್ ಶೆಟ್ಟಿ, ಲಕ್ಷ್ಮೀನಾರಾಯಣ ಹೆಗ್ಡೆ, ವಿಠಲಭಟ್ ,ಕೃಷ್ಣಮೂರ್ತಿ ಭಟ್, ರಾಘವೇ೦ದ್ರ ಭಟ್, ವಿಠಲ್ ಮೂರ್ತಿ ಆಚಾರ್ಯ,ಭಾರತಿ ಕೃಷ್ಣಮೂರ್ತಿ,ಸುಮಿತ್ರಕೆರೆಮಠ ಹಾಗೂ ಊರ ಹತ್ತು ಸಮಸ್ತರು ಈ ಸ೦ರ್ಭದಲ್ಲಿ ಉಪಸ್ಥಿತರಿದ್ದರು.

No Comments

Leave A Comment