Log In
BREAKING NEWS >
ಮಾರ್ಚ್ 22ರ೦ದು ಚ೦ದ್ರಾಮಾನ ಯುಗಾದಿ ,ಏಪ್ರಿಲ್ 15ರ೦ದು ಸೌರಮಾನ ಯುಗಾದಿ ಹಬ್ಬವು ನಡೆಯಲಿದೆ.ಹಲವಾರು ಗಣ್ಯರು ಯುಗಾದಿ ಹಬ್ಬದ ಶುಭಾಶಯವನ್ನು ಕೋರಿರುತ್ತಾರೆ.....

ಮಂಗಳೂರು: ಅಕ್ರಮ ಗಾಂಜಾ ಸಾಗಾಟ-ಮೂವರ ಬಂಧನ, 32 ಲಕ್ಷ ರೂ. ಮೌಲ್ಯದ ಸೊತ್ತು ವಶ

ಮಂಗಳೂರು:ಫೆ 01 : ನೆತ್ತಿಲಪದವು ಎಂಬಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದು, ಅವರಿಂದ ಸುಮಾರು 27 ಲಕ್ಷ ರೂ. ಮೌಲ್ಯದ ಗಾಂಜಾ ಸೇರಿದಂತೆ ಒಟ್ಟು 32,07,000 ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಂಜೇಶ್ವರದ ಹೊಸಬೆಟ್ಟು ಕಡಪುರಂ ನಿವಾಸಿ ಅಬೂಬಕ್ಕರ್ ಸಿದ್ದೀಕ್ ಅಲಿಯಾಸ್ ಹ್ಯಾರೀಸ್ (35), ಕುಂಬ್ಳೆ ಮಂಬ್ರಾನ್ ಗ್ರಾಮದ ಆರಿಕ್ಕಾಡಿ ಬೀರಂಟಿಕಾರ ನಿವಾಸಿ ಅಖಿಲ್ ಎಂ. (25), ಹಾಗೂ ಹೈದರ್ ಆಲಿ ಅಲಿಯಾಸ್ ಗಾಡಿ ಹೈದರ್ (39) ಬಂಧಿತ ಆರೋಪಿಗಳು. ಬಂಧಿತರಿಂದ ಸುಮಾರು 27 ಲಕ್ಷ ರೂ. ಮೌಲ್ಯದ ಗಾಂಜಾ, ಗಾಂಜಾ ಸಾಗಾಟಕ್ಕೆ ಬಳಸಿದ ಫೋರ್ಡ್ ಕಂಪೆನಿಯ ನೇರಳೆ ಬಣ್ಣದ ಕಾರು ಸೇರಿದಂತೆ ಒಟ್ಟು 32,07,000 ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಉಪ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ಅಂಶುಕುಮಾರ್ ಮತ್ತು ಉಪ ಪೊಲೀಸ್ ಆಯುಕ್ತ (ಅಪರಾಧ ಮತ್ತು ಸಂಚಾರ) ದಿನೇಶ್‌ಕುಮಾರ್ ಅವರ ನಿರ್ದೇಶನದಂತೆ ಸಹಾಯಕ ಪೊಲೀಸ್ ಆಯುಕ್ತ ಧನ್ಯ ನಾಯಕ್ ಅವರ ಮಾರ್ಗದರ್ಶನದಂತೆ ಕೊಣಾಜೆ ಪೊಲೀಸ್ ನಿರೀಕ್ಷಕ ಪ್ರಕಾಶ್ ದೇವಾಡಿಗ ಅವರ ನೇತೃತ್ವದಲ್ಲಿ ಪಿಎಸ್‌ಐ ಶರಣಪ್ಪ ಭಂಡಾರಿ, ಸಿಬಂದಿಗಳಾದ ಶೈಲೇಂದ್ರ, ನವೀನ್, ವಿನ್ಸೆಂಟ್ ರೋಡ್ರಿಗಸ್, ಸುರೇಶ್, ಬರಮ ಬಡಿಗೇರ, ಹೇಮಂತ್, ಪುರುಷೋತ್ತಮ, ದೇವರಾಜ್, ಶಿವಕುಮಾರ್, ದೀಪಕ್, ಸುನೀತಾ, ಮಹಮ್ಮದ್ ಗೌಸ್ ಹಾಗೂ ತಾಂತ್ರಿಕ ವಿಭಾಗದ ಮನೋಜ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

No Comments

Leave A Comment