Log In
BREAKING NEWS >
ನವೆ೦ಬರ್ 27ರ೦ದು ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ದೀಪೋತ್ಸವ ಕಾರ್ಯಕ್ರಮ ಜರಗಲಿದೆ...

ಕಾಶ್ಮೀರ: ಗುಲ್ಮಾರ್ಗ್ ನಲ್ಲಿ ಭಾರಿ ಹಿಮಕುಸಿತ, ಇಬ್ಬರು ವಿದೇಶಿ ಪ್ರವಾಸಿಗರು ಸಾವು

ಗುಲ್ಮಾರ್ಗ್: ಜಮ್ಮು ಮತ್ತು ಕಾಶ್ಮೀರದ ಗುಲ್ಮಾರ್ಗ್‌ನ ಸ್ಕೀ ರೆಸಾರ್ಟ್‌ನ ಮೇಲ್ಭಾಗದಲ್ಲಿ ಬುಧವಾರ ಸಂಭವಿಸಿದ ಭಾರಿ ಹಿಮಕುಸಿತದಲ್ಲಿ ಇಬ್ಬರು ಪೋಲಿಷ್ ಪ್ರವಾಸಿಗರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಿಮಕುಸಿತ ಸಂಭವಿಸಿದಾಗ ಸ್ಕೀಯರ್‌ಗಳು, ವಿದೇಶಿಗರು ಮತ್ತು ಸ್ಥಳೀಯರು, ಇಳಿಜಾರುಗಳಲ್ಲಿ ಇದ್ದರು ಎನ್ನಲಾಗಿದೆ.

ಕನಿಷ್ಠ 19 ವಿದೇಶಿ ಪ್ರವಾಸಿಗರನ್ನು ಇದುವರೆಗೆ ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ಇಬ್ಬರು ಪೋಲಿಷ್ ಪ್ರಜೆಗಳ ಶವಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ವೈದ್ಯಕೀಯ-ಕಾನೂನು ಪ್ರಕ್ರಿಯೆಗಳಿಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಸದ್ಯ ಹಿಮಪಾತ ಸಂಭವಿಸಿದ ಪ್ರದೇಶದಲ್ಲಿ ರಕ್ಷಣಾ ಪಡೆಗಳು ಬೀಡುಬಿಟ್ಟಿದ್ದು, ಹಿಮದಡಿ ಸಿಲುಕಿದವರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

No Comments

Leave A Comment