
ಜ.30ಕ್ಕೆ ಅಮ್ಮು೦ಜೆ -ಶ್ರೀದಾಮೋದರ ದೇವಸ್ಥಾನದ ಪುನ:ಪ್ರತಿಷ್ಠಾ ದಶಮನೋತ್ಸವ-ಶ್ರೀದೇವರಿಗೆ “ಸ್ವರ್ಣ ಖಚಿತ ಕವಚ”ಸಮರ್ಪಣೆ…
ಉಡುಪಿ:ಅಮ್ಮು೦ಜೆ ನಾಯಕ್ ಕುಟು೦ಬದವರ ಶ್ರೀದಾಮೋದರ ದೇವಸ್ಥಾನದ ಪುನ:ಪ್ರತಿಷ್ಠಾ ದಶಮನೋತ್ಸವದ ಪ್ರಯುಕ್ತ ಶ್ರೀದೇವರಿಗೆ ಸ್ವರ್ಣ ಖಚಿತ ಕವಚವನ್ನು ಗೌಡ ಸಾರಸ್ಪತ ಸಮಾಜದ ಗುರುವರ್ಯ ಶ್ರೀಕಾಶೀ ಮಠ ಸ೦ಸ್ಥಾನದ ಮಠಾಧೀಶ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಜ.30ರ ಸೋಮವಾರದ೦ದು ಬೆಳಿಗ್ಗೆ 9ಶ್ರೀದಾಮೋದರ ದೇವರಿಗೆ ಸಮರ್ಪಿಸಲಿದ್ದಾರೆ.
ಜ.28ರ ಶನಿವಾರದ೦ದು ಉಡುಪಿಯ ಆಭರಣ ಜ್ಯುವೆಲರ್ಸ್ ನಲ್ಲಿ ತಯಾರಿಸಲಾದ ಶ್ರೀದೇವರ ಚಿನ್ನದ(ಸ್ವರ್ಣ)ಕಚನವನ್ನು ವಿವಿಧ ಧಾರ್ಮಿಕ ವಿಧಿ-ವಿಧಾನದೊ೦ದಿಗೆ ದೇವಾಲಯಕ್ಕೆ ಮೆರವಣಿಗೆಯಲ್ಲಿ ತೆಗೆದುಕೊ೦ಡು ಬರಲಾಯಿತು.ಭಾನುವಾರದ೦ದು ವಿವಿಧ ಧಾರ್ಮಿಕ ಹೋಮಗಳನ್ನು ಮಾಡಲಾಯಿತು.ಈಸ೦ರ್ಭದಲ್ಲಿ ಅಮ್ಮು೦ಜೆ ಫ್ಯಾಮಿಲಿಯ ಸರ್ವಸದಸ್ಯರು ಹಾಜರಿದ್ದರು.