Log In
BREAKING NEWS >
ಕರಾವಳಿಯಲ್ಲಿ ಹೆಚ್ಚಿದ ಬಿಸಿಲಿನ ತಾಪಮಾನ-ಸಾವು ಸ೦ಭವಿಸುವ ಸಾಧ್ಯತೆ-ಎಚ್ಚರ ಬಿಸಿಲಿನಲ್ಲಿ ಹೊರಗೆ ಬರಲೇ ಬೇಡಿ....

ಮರ್ಯಾದಾ ಹತ್ಯೆ: ತಂದೆ, ಸಹೋದರನಿಂದಲೇ ವೈದ್ಯಕೀಯ ವಿದ್ಯಾರ್ಥಿನಿಗೆ ಬೆಂಕಿ; 5 ಮಂದಿ ವಶಕ್ಕೆ

ಮುಂಬೈ: 22 ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯನ್ನು ಸಹೋದರ, ತಂದೆಯೇ ಬೆಂಕಿ ಹಚ್ಚಿ ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿ ನಡೆದಿದೆ.

ಆಕೆಯ ಪ್ರೇಮ ಪ್ರಕರಣವನ್ನು ವಿರೋಧಿಸಿ ಮನೆಯವರೇ ಈ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ. ಪ್ರಕರಣದ ಸಂಬಂಧ 5 ಮಂದಿಯನ್ನು ಬಂಧಿಸಲಾಗಿದ್ದು ಜ.22 ರಂದು ಈ ಹತ್ಯೆ ನಡೆದಿದೆ.

ತೃತೀಯ ವರ್ಷದ ಹೋಮಿಯೋಪತಿ ಮೆಡಿಸಿನ್ ಮತ್ತು ಸರ್ಜರಿ ಪದವಿ (ಬಿಹೆಚ್ಎಂಎಸ್) ವ್ಯಾಸಂಗ ಮಾಡುತ್ತಿದ್ದ ಸಂತ್ರಸ್ತೆ ಶುಭಾಂಗಿ ಜೋಗ್ದಂಡ್ ವಿವಾಹ ನಿಶ್ಚಯವಾಗಿತ್ತು. ಆದರೆ ಆಕೆ ತಾನು ಯುವಕನೋರ್ವನನ್ನು ಪ್ರೇಮಿಸುತ್ತಿರುವುದಾಗಿ ಹೇಳಿದ್ದಳು ಇದರಿಂದ ಮದುವೆ ಮುರಿದುಬಿದ್ದಿತ್ತು. ಪರಿಣಾಮ ಕುಟುಂಬ ಸದಸ್ಯರು ತೀವ್ರ ಅಸಮಾಧಾನಗೊಂಡಿದ್ದರು.

ಮಹಿಳೆಯ ತಂದೆ, ಸಹೋದರ, ಹಾಗೂ ಕುಟುಂಬದ ಇನ್ನಿತರ ಸದಸ್ಯರು ಆಕೆಯನ್ನು ಜ.22 ರಂದು ಜಮೀನಿಗೆ ಕರೆದೊಯ್ದು ಕೊರಳು ಬಿಗಿದು ಹತ್ಯೆ ಮಾಡಿ, ಆಕೆಯ ಶವವನ್ನು ಸುಟ್ಟು ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದರು. ಆರೋಪಿಗಳನ್ನು ಐಪಿಸಿ ಸೆಕ್ಷನ್ 302 (ಹತ್ಯೆ) ಆರೋಪದ ಅಡಿಯಲ್ಲಿ ಬಂಧಿಸಲಾಗಿದೆ.

No Comments

Leave A Comment