ದಾಖಲೆಯ ಏರಿಕೆ ಕಂಡ ಚಿನ್ನದ ದರ: 57 ಸಾವಿರ ಗಡಿ ದಾಟಿದ ಹಳದಿ ಲೋಹ
ನವದೆಹಲಿ: ಹಳದಿ ಲೋಹ ಚಿನ್ನದ ದರ ಬುಧವಾರ ದಾಖಲೆಯ ಏರಿಕೆ ಕಂಡಿದ್ದು ಮೊದಲ ಬಾರಿಗೆ ಪ್ರತೀ 10 ಗ್ರಾ ಚಿನ್ನ 57 ಸಾವಿರ ಗಡಿ ದಾಟಿದೆ.
ಅಮೆರಿಕ ಫೆಡ್ ರಿಸರ್ವ್ ಬಡ್ಡಿದರಗಳ ಹೆಚ್ಚಳದ ವೇಗವನ್ನು ಕಡಿಮೆ ಮಾಡುವ ನಿರೀಕ್ಷೆಯಿಂದಾಗಿ, ಕಳೆದ ಐದು ವಾರಗಳಿಂದ ವಾರಕ್ಕೊಮ್ಮೆ ಚಿನ್ನದ ದರದಲ್ಲಿ ಜಿಗಿತ ದಾಖಲಾಗುತ್ತಿದೆ. ಮಂಗಳವಾರ ಚಿನ್ನದ ಬೆಲೆ ಗರಿಷ್ಠ ಮಟ್ಟ ತಲುಪಿತ್ತು. MCX ನಲ್ಲಿ, ಫೆಬ್ರವರಿಯಲ್ಲಿ ವಿತರಣೆಗಾಗಿ ಚಿನ್ನವು ಪ್ರತೀ 10 ಗ್ರಾಂಗೆ 57,099 ರೂ.ಗೆ ಏರಿತ್ತು. ಈ ಕ್ಯಾಲೆಂಡರ್ ವರ್ಷದಲ್ಲಿ ಚಿನ್ನವು ಶೇಕಡಾ 4 ರಷ್ಟು ಏರಿದೆ.
ಅನಿಶ್ಚಿತತೆಯ ಸಮಯದಲ್ಲಿ, ಚಿನ್ನವನ್ನು ಸುರಕ್ಷಿತ ಆಸ್ತಿಯಾಗಿ ನೋಡಲಾಗುತ್ತದೆ. ಹೀಗಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚು. ಅಮೆರಿಕ ಡಾಲರ್ ದುರ್ಬಲತೆ ಮತ್ತು ಅಮೆರಿಕ ಖಜಾನೆ ಇಳುವರಿಯಲ್ಲಿ ಇಳಿಕೆಯ ನಡುವೆ ಚಿನ್ನದ ಬೆಲೆಯಲ್ಲಿ ಜಿಗಿತ ಕಂಡುಬಂದಿದೆ. ಜಾಗತಿಕ ಆರ್ಥಿಕತೆಯಲ್ಲಿನ ಮಂದಗತಿಗೆ ಸಂಬಂಧಿಸಿದ ಕಳವಳಗಳ ನಡುವೆಯೇ, ಸುರಕ್ಷಿತ ಆಸ್ತಿಯ ಚಿನ್ನದ ಮೇಲೆ ಹೂಡಿಕೆದಾರರ ಆಸಕ್ತಿ ಹೆಚ್ಚಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಚಿನ್ನದ ಮೇಲಿನ ಹೂಡಿಕೆ ಸುರಕ್ಷಿತ ಎಂದು ನಂಬಲಾಗಿದ್ದು. ಇದೇ ಕಾರಣಕ್ಕೆ ಹೂಡಿಕೆದಾರರ ಆಸಕ್ತಿ ಹೆಚ್ಚಿದೆ. ಇದರಿಂದಾಗಿ ಅದರ ಬೆಲೆಗಳು ಏರಿಕೆ ಕಾಣುತ್ತಿವೆ.
ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆ
ಇನ್ನು ಐಸಿಐಸಿಐ ಡೈರೆಕ್ಟ್ ವರದಿಯಂತೆ , “ಎಂಸಿಎಕ್ಸ್‌ನಲ್ಲಿ ಚಿನ್ನದ ಬೆಲೆ ಧನಾತ್ಮಕ ಪಕ್ಷಪಾತದೊಂದಿಗೆ ವಹಿವಾಟು ನಡೆಸುವ ಸಾಧ್ಯತೆಯಿದೆ ಮತ್ತು ಮುಂಬರುವ ಸೆಷನ್‌ಗಳಲ್ಲಿ ಈ ದರ 57,200 ರೂ.ಗೆ ತಲುಪಬಹುದು ಎನ್ನಲಾಗಿದೆ. ಅಂತೆಯೇ ಮುಂಬರುವ ನೀತಿ ಸಭೆಯಲ್ಲಿ ಫೆಡ್ ರಿಸರ್ವ್ ಬಡ್ಡಿದರಗಳನ್ನು ಶೇಕಡಾ 0.25 ರಷ್ಟು ಹೆಚ್ಚಿಸಬಹುದು. ಡಿಸೆಂಬರ್‌ನಲ್ಲಿ, ಸೆಂಟ್ರಲ್ ಬ್ಯಾಂಕ್ ಆಫ್ ಅಮೇರಿಕಾ ಬಡ್ಡಿದರವನ್ನು ಶೇಕಡಾ 0.50 ರಷ್ಟು ಹೆಚ್ಚಿಸಿತ್ತು. ಈ ಹಿಂದೆ ಸತತ ನಾಲ್ಕು ಬಾರಿ ಬಡ್ಡಿ ದರವನ್ನು ಶೇ.0.75ರಷ್ಟು ಹೆಚ್ಚಿಸಿತ್ತು. ಕಡಿಮೆ ಮಟ್ಟದ ಬಡ್ಡಿದರವು ಗಟ್ಟಿಗೆ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದು ಇಳುವರಿ-ಅಲ್ಲದ ಆಸ್ತಿಯನ್ನು ಹಿಡಿದಿಟ್ಟುಕೊಳ್ಳುವ ಅವಕಾಶ ವೆಚ್ಚವನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಈ ಬೆಳವಣಿಗೆ ಕೂಡ ಚಿನ್ನದ ದರ ಏರಿಕೆ ಮೇಲೆ ಪ್ರಭಾವ ಬೀರಿದೆ.
ಡಾಲರ್ ಸೂಚ್ಯಂಕದಲ್ಲಿ 0.2 ರಷ್ಟು ವಿರಾಮ ಕಂಡುಬಂದಿದ್ದು, ಡಾಲರ್‌ನಲ್ಲಿನ ದೌರ್ಬಲ್ಯವು ಅನೇಕ ಹೂಡಿಕೆದಾರರಿಗೆ ಚಿನ್ನದ ಮೇಲೆ ಗಮನ ಹರಿಸುವಂತೆ ಮಾಡಿದೆ. ಏತನ್ಮಧ್ಯೆ, ಚಿನ್ನದ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡುವ ಯೋಜನೆಯಲ್ಲಿ ಭಾರತ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಸೋಮವಾರದ ವರದಿಯೊಂದು ತಿಳಿಸಿದೆ. ಇದು ಚಿನ್ನದ ಬೆಲೆಯಲ್ಲಿ ಇಳಿಕೆಗೆ ಕಾರಣವಾಗಬಹುದು ಎನ್ನಲಾಗಿದೆ.
2023 ರಲ್ಲಿ ಚಿನ್ನದ ಬೆಲೆ ಶೇ.4% ಹೆಚ್ಚಳ
MCX ನಲ್ಲಿ ಚಿನ್ನದ ಭವಿಷ್ಯದ ಅನ್ವಯ 10 ಗ್ರಾಂಗೆ 57,050 ರೂ.ಗೆ ಏರಿತು. 2023 ರಲ್ಲಿ ಇಲ್ಲಿಯವರೆಗೆ ಚಿನ್ನದ ಬೆಲೆಗಳು ಸುಮಾರು 4% ಏರಿಕೆಯಾಗಿದೆ, ಸಾಗರೋತ್ತರ ಮಾರುಕಟ್ಟೆಯಲ್ಲಿನ ಲಾಭಗಳನ್ನು ಮತ್ತು ಡಾಲರ್ ಸೂಚ್ಯಂಕದಲ್ಲಿನ ದೌರ್ಬಲ್ಯವನ್ನು ದರ ಏರಿಕೆ ಕಾರಣ ಎನ್ನಲಾಗಿದೆ.