Log In
BREAKING NEWS >
ಉಡುಪಿ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಪರಮೇಶ್ವರ್ ಅನಂತ್ ಹೆಗ್ಡೆ ನೇಮಕ...

ನೇಪಾಳದಲ್ಲಿ 5.8 ತೀವ್ರತೆಯ ಭೂಕಂಪ; ದೆಹಲಿ, ರಾಜಸ್ಥಾನದಲ್ಲೂ ಕಂಪಿಸಿದ ಭೂಮಿ

ನವದೆಹಲಿ: ನೆರೆಯ ನೇಪಾಳದಲ್ಲಿ ಮಂಗಳವಾರ ಮಧ್ಯಾಹ್ನ 5.8 ತೀವ್ರತೆಯ ಭೂಕಂಪ ಸಂಭವಿಸಿದ್ದು, ದೆಹಲಿ ಹಾಗೂ ರಾಷ್ಟ್ರ ರಾಜಧಾನಿ ಪ್ರದೇಶದ ಸುತ್ತಮುತ್ತಲಿನ ನಗರಗಳಲ್ಲಿ ಮತ್ತು ಜೈಪುರದಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ.

ಇಂದಿು ಮಧ್ಯಾಹ್ನ 2:28 ಕ್ಕೆ ಭೂಮಿ ಕಂಪಿಸಿದ್ದು, ಉತ್ತರಾಖಂಡದ ಪಿಥೋರಘಢ್ ನಿಂದ ಪೂರ್ವಕ್ಕೆ 148 ಕಿಮೀ ದೂರದ ನೇಪಾಳದಲ್ಲಿ ಭೂಕಂಪನದ ಕೇಂದ್ರಬಿಂದು ಪತ್ತೆಯಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.

“ನನಗೆ ಕಂಪನದ ಅನುಭವವಾಯಿತು. ಇದು ಒಂದು ರೀತಿಯಲ್ಲಿ ಭಯಾನಕವಾಗಿತ್ತು” ಎಂದು ನೋಯ್ಡಾದ ಬಹುಮಹಡಿ ಗೋಪುರದಲ್ಲಿ ವಾಸಿಸುವ ಶಾಂತನು ಅವರು ಹೇಳಿದ್ದಾರೆ.

“ಭೂಕಂಪ ಸಂಭವಿಸಿದಾಗ ನಾನು ಸಿವಿಕ್ ಸೆಂಟರ್‌ನ ಐದನೇ ಮಹಡಿಯಲ್ಲಿದ್ದೆ. ನನ್ನ ಕಾಲುಗಳ ಕೆಳಗೆ ಘರ್ಜನೆ ಶಬ್ದ ಮತ್ತು ಲಘುವಾದ ಅಲುಗಾಡುವಿಕೆಯ ಅನುಭ ಆಯಿತು” ಎಂದು ದೆಹಲಿ ನಿವಾಸಿ ಅಮಿತ್ ಪಾಂಡೆ ಅವರು ತಿಳಿಸಿದ್ದಾರೆ.

ರಾಜಸ್ಥಾನದ ರಾಜಧಾನಿ ಜೈಪುರದ ಕೆಲವು ಭಾಗಗಳಲ್ಲಿಯೂ ಕಂಪನದ ಅನುಭವವಾಗಿದೆ. ಇದುವರೆಗೂ ಯಾವುದೇ ಪ್ರಾಣ ಅಥವಾ ಆಸ್ತಿ ಹಾನಿ ಬಗ್ಗೆ ವರದಿಯಾಗಿಲ್ಲ.

No Comments

Leave A Comment