Log In
BREAKING NEWS >
ಎಲ್ಲೆಡೆಯಲ್ಲಿ ಶಾ೦ತಿಯುತವಾಗಿ ವಿಜೃ೦ಭಣೆಯ ಹನುಮಾನ್ ಜಯ೦ತಿ ಆಚರಣೆ.....

ಖ್ಯಾತ ವಾಸ್ತುಶಿಲ್ಪಿ ಬಾಲಕೃಷ್ಣ ದೋಷಿ ನಿಧನ

ಅಹಮದಾಬಾದ್‌: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಬಿವಿ ದೋಷಿ ಎಂದು ಪ್ರೀತಿಯಿಂದ ಕರೆಯಲ್ಪಡುತ್ತಿದ್ದ ಖ್ಯಾತ ಭಾರತೀಯ ವಾಸ್ತುಶಿಲ್ಪಿ ಬಾಲಕೃಷ್ಣ ದೋಷಿ ಅವರು ಮಂಗಳವಾರ ಅಹಮದಾಬಾದ್‌ನಲ್ಲಿ ನಿಧನರಾಗಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು.

ಆರ್ಕಿಟೆಕ್ಚರ್ ಡೈಜೆಸ್ಟ್ ಆಫ್ ಇಂಡಿಯಾ ಇನ್ಸ್ಟಾಗ್ರಾಮ್ ನಲ್ಲಿ ಈ ಸುದ್ದಿಯನ್ನು ಹಂಚಿಕೊಳ್ಳುವ ಮೂಲಕ ದೋಷಿ ಅವರಿಗೆ ಸಂತಾಪ ಸೂಚಿಸಿದೆ.

“ರೂಪ ಮತ್ತು ಬೆಳಕಿನ ಮಾಸ್ಟರ್ ವೀಲ್ಡರ್ ಆಗಿದ್ದ ದೋಷಿ ಅವರು ಅಳಿಸಲಾಗದ ಪರಂಪರೆಯನ್ನು ಬಿಟ್ಟು ಹೋಗಿದ್ದಾರೆ. ಅವರು ಒಬ್ಬ ಪ್ರೀತಿಯ ಪತಿ, ತಂದೆ, ಅಜ್ಜ ಮತ್ತು ದೇಶದ ಜನರಿಗೆ ನಿಜವಾದ ಸ್ಫೂರ್ತಿ” ಆಗಿದ್ದರು ಎಂದು ಆರ್ಕಿಟೆಕ್ಚರ್ ಡೈಜೆಸ್ಟ್  ಪೋಸ್ಟ್ ಮಾಡಿದೆ.

ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿಗಳನ್ನು ಪಡೆದಿದ್ದ ಬಾಲಕೃಷ್ಣ ದೋಷಿ ಅವರು ಇತ್ತೀಚೆಗೆ ರಾಯಲ್ ಇನ್‌ಸ್ಟಿಟ್ಯೂಟ್ ಆಫ್ ಬ್ರಿಟಿಷ್ ಆರ್ಕಿಟೆಕ್ಟ್ಸ್ (ಆರ್ ಐ ಬಿ ಎ) ಯಿಂದ ರಾಯಲ್ ಚಿನ್ನದ ಪದಕ 2022 ಅನ್ನು ಗೆದ್ದಿದ್ದಾರೆ. ಇದು ಯುನೈಟೆಡ್ ಕಿಂಗ್‌ಡಂನಲ್ಲಿ ವಾಸ್ತುಶಿಲ್ಪಕ್ಕೆ ನೀಡುವ ಅತ್ಯುನ್ನತ ಗೌರವವಾಗಿದೆ.

No Comments

Leave A Comment