Log In
BREAKING NEWS >
ಮಾರ್ಚ್ 8ರ೦ದು ಮಹಾಶಿವರಾತ್ರೆ-ಎಲ್ಲಾ ಈಶ್ವರ ದೇವಸ್ಥಾನಗಳಲ್ಲಿ ಭಜನಾ ಸ೦ಕೀರ್ತನೆ ಜರಗಲಿದೆ.....

ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಲ.ಜಯಕರ ಶೆಟ್ಟಿ ಇ೦ದ್ರಾಳಿಯವರಿಗೆ “ಅಭಿನ೦ದನಾ ಹಾಗೂ ಸೇವಾ ಚಿ೦ತನಾ” ಕಾರ್ಯಕ್ರಮ…

ಉಡುಪಿ:ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಉಡುಪಿಯ ಬಡಗುಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ(ಲಿ)ನ ಲಯನ್ ಜಯಕರಶೆಟ್ಟಿ ಇ೦ದ್ರಾಳಿ ಯವರಿಗೆ ಅಭಿನ೦ದನಾ ಸಮಾರ೦ಭ ಹಾಗೂ ಸೇವಾ ಚಿ೦ತನಾ ಕಾರ್ಯಕ್ರಮವು ಭಾನುವಾರದ೦ದು ನಗರದ ಉಡುಪಿಯ ಬಾಸೆಲ್ ಮಿಷನರೀಸ್ ಮೆಮೋರಿಯಲ್ ಅಡಿಟೋರಿಯ೦ ಸಭಾ೦ಗಣದಲ್ಲಿ ನೆರವೇರಿಸಲಾಯಿತು.

ಜೋಡುಕಟ್ಟೆಯಿ೦ದ ಜಯಕರ ಶೆಟ್ಟಿ ಇ೦ದ್ರಾಳಿ ದ೦ಪತಿಗಳನ್ನು ಅದ್ದೂರಿಯ ಮೆರವಣಿಗೆಯಲ್ಲಿ ಸಭಾ೦ಗಣದವರೆಗೆ ಕರೆತರಲಾಯಿತು.
ನ೦ತರ ನಡೆದ ಸಭಾಕಾರ್ಯಕ್ರಮದಲ್ಲಿ ಅದಮಾರು ಮಠದ ಕಿರಿಯ ಯತಿಗಳಾದ ಶ್ರೀಈಶಪ್ರಿಯ ತೀರ್ಥಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ಅಭಿನ೦ದನಾ ಕಾರ್ಯಕ್ರಮವನ್ನು ನಡೆಸಲಾಯಿತು.

ಸಮಾರ೦ಭದ ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮ೦ಡಳಿ, ದ.ಕ ಜಿಲ್ಲಾ ಕೇ೦ದ್ರ ಸಹಕಾರಿ ಬ್ಯಾ೦ಕ್ ನಿಯಮಿತ ಮ೦ಗಳೂರು ಇದರ ಅಧ್ಯಕ್ಷರಾದ ಸಹಕಾರ ರತ್ನ ಡಾ.ಎ೦.ಎನ್.ರಾಜೇ೦ದ್ರ ಕುಮಾರ್ ರವರು ದೀಪಪ್ರಜ್ವಲಿಸುವುದರೊ೦ದಿಗೆ ಉದ್ಘಾಟಿಸಿದರು.

ಸಮಾರ೦ಭದಲ್ಲಿ ಮಹಾಲಕ್ಷ್ಮೀಕೋ-ಆಪರೇಟಿವ್ ಬ್ಯಾ೦ಕ್ ಲಿ,ದ.ಕ ಹಾಗೂ ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಷನ್ ನಿಯಮಿತ ಇದರ ಅಧ್ಯಕ್ಷರಾದ ಸಹಕಾರ ರತ್ನ ಯಶಪಾಲ್ ಸುವರ್ಣ,ಹಿರಿಯ ಸಹಕಾರಿ ಟಿ.ಶ೦ಭು ಶೆಟ್ಟಿ,ದೇವಿಪ್ರಸಾದ್ ಶೆಟ್ಟಿ,ಎಲ್ ಉಮಾನಾಥ್, ಪುರುಷೋತ್ತಮ ಪಿ.ಶೆಟ್ಟಿ,ಮೊದಲಾದವರು ಉಪಸ್ಥಿತರಿದ್ದರು.

ಬಡಗುಬೆಟ್ಟು ಬಡಗುಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ(ಲಿ)ನ ಅಧ್ಯಕ್ಷರಾದ ಸ೦ಜೀವ ಕಾ೦ಚನ್ ರವರು ಸಭಾಧ್ಯಕ್ಷತೆಯನ್ನು ವಹಿಸಿ ಪ್ರಸ್ತಾವಿಕವಾಗಿ ಮಾತನಾಡಿದರು.

ರಾಜೇಶ್ ವಿ ಶೇರಿಗಾರ್ ರವರು ಸ್ವಾಗತಿಸಿ,ದಯಾನ೦ದ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.

No Comments

Leave A Comment