Log In
BREAKING NEWS >
ಜೂ.26ರ೦ದು ಉಡುಪಿ ಶ್ರೀಪುತ್ತಿಗೆ ಮಠದ ೪ನೇ ಪರ್ಯಾಯಕ್ಕೆ ಕಟ್ಟಿಗೆ ಮುಹೂರ್ತ ಕಾರ್ಯಕ್ರಮ ಜರಗಲಿದೆ.....

ಪುತ್ತಿಗೆ ಶ್ರೀಗಳ ಚತುರ್ಥ ಪರ್ಯಾಯದ ಕೋಟಿಗೀತ ಲೇಖನ ಯೋಜನೆಯಲ್ಲಿ ಎಲ್ಲರೂ ಭಾಗವಹಿಸಿ ಪುರಸಭಾ ಆಯುಕ್ತ ಉದಯಕುಮಾರ್ ಶೆಟ್ಟಿ.

ಪುತ್ತಿಗೆ ಮಠದ ಮುಂಭಾಗದಲ್ಲಿನ ಶ್ರೀಗಳವರ ಪ್ರತಿಕೃತಿ ಇರುವ ಕೋಟಿಗೀತಾ ಲೇಖನಯಜ್ಞದ ನೂತನ ಕೇಂದ್ರವನ್ನು ಉದ್ಘಾಟಿಸಿದ ಉಡುಪಿಯ ಪೌರಾಯುಕ್ತರಾದ ಉದಯ್ ಕುಮಾರ್ ಶೆಟ್ಟಿ ಇವರು ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರ 2024 – 26ರ ಪರ್ಯಾಯ ಉತ್ಸವದ ಬೃಹತ್ ಯೋಜನೆಯಾದ ಕೋಟಿ ಶ್ರೀ ಕೃಷ್ಣ ಭಕ್ತರಿಂದ ಬರೆಸಲ್ಪಡುವ ಗೀತಾ ಲೇಖನ ಯಜ್ಞದಲ್ಲಿ ಭಾಗವಹಿಸಿ ಶ್ರೀ ಕೃಷ್ಣ ಹಾಗೂ ಗುರುಗಳ ಅನುಗ್ರಹಕ್ಕೆ ಪಾತ್ರರಾಗಿ ಎಂದು ಶುಭ ಹಾರೈಸಿದರು.

ಮತ್ತೋರ್ವ ಮುಖ್ಯ ಅತಿಥಿ ತೆಂಕಪೇಟೆ ವಾರ್ಡಿನ ನಗರಸಭಾ ಸದಸ್ಯೆ ಮಾನಸಿ ಪೈ ಈ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಸಭೆಯಲ್ಲಿ ದಿವಾನರಾದ ನಾಗರಾಜ ಆಚಾರ್ಯ, ಅನಂತ ಕೃಷ್ಣಪ್ರಸಾದ್, ವಿಷ್ಣುಮೂರ್ತಿ ಉಪಾಧ್ಯಾಯ, ರಮಣ ಆಚಾರ್,ಚಂದನ್ ಕಾರಂತ್, ಸುರೇಶ್ ಕಾರಂತ್, ಎನ್ ವಿ ಉಡುಪ, ಶ್ರೀಶ ಆಚಾರ್, ರವೀಂದ್ರ ಆಚಾರ್ಯ, ಸೀತಾರಾಮ್ ಭಟ್, ಸಾತ್ವಿಕ್ ಬಟ್ ಹಾಗೂ ಗೀತಾ ಮಾತೆಯರು ಉಪಸ್ಥಿತರಿದ್ದರು.

 ರಮೇಶ್ ಭಟ್ ಪ್ರಸ್ತಾವಿಕವಾಗಿ ಮಾತಾಡಿ ಅತಿಥಿಗಳನ್ನು ಸ್ವಾಗತಿಸಿದರು, ಮಹಿತೋಷ್ ಆಚಾರ್ಯರು ಧನ್ಯವಾದವಿತ್ತರು, ವಿಕ್ರಂ ಕುಂಟಾರ್ ಕಾರ್ಯಕ್ರಮವನ್ನು ನಿರೂಪಿಸಿದರು.

No Comments

Leave A Comment